ವಿಶ್ವ ಕ್ಷಯರೋಗ ದಿನದ ಬಗ್ಗೆ ಮಾಹಿತಿ | Information about World Tuberculosis Day in Kannada
ವಿಶ್ವ ಕ್ಷಯರೋಗ ದಿನದ ಬಗ್ಗೆ ಮಾಹಿತಿ Information about World Tuberculosis Day Vishwa kshayaroga Dinada bagge Mahithi in Kannada
ವಿಶ್ವ ಕ್ಷಯರೋಗ ದಿನದ ಬಗ್ಗೆ ಮಾಹಿತಿ
ಈ ಲೇಖನಿಯಲ್ಲಿ ವಿಶ್ವ ಕ್ಷಯರೋಗ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.
ವಿಶ್ವ ಕ್ಷಯರೋಗ ದಿನ :
- ಪ್ರತಿ ವರ್ಷ ಮಾರ್ಚ್ 24 ನ್ನು ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗುವುದು.
- 2022 ವರ್ಷದ ಧ್ಯೇಯವಾಕ್ಯ ” Invest to end TB : save lives”
- ಕಳೆದ ವರ್ಷ the clock is ticking ಎಂಬ ಧ್ಯೇಯವಾಕ್ಯದಡಿಯಲ್ಲಿ ಆಚರಿಸಲಾಗಿತ್ತು.
ವಿಶ್ವ ಕ್ಷಯ ರೋಗದ ಆಚರಣೆಯ ಹಿನ್ನಲೆ :
- ಜರ್ಮನಿಯ ವೈದ್ಯರಾದ ಡಾಕ್ಟರ್ ರಾಬರ್ಟ್ ಕೋಚ್ ವಿಜ್ಞಾನಿಯು ಕ್ಷಯ ರೋಗಕ್ಕೆ ಕಾರಣವಾದ mycobacterium tuberculosis ಎಂಬ ಬ್ಯಾಕ್ಟೀರಿಯಾವನ್ನು 1882 ಮಾರ್ಚ್ 24 ರಂದು ಕಂಡುಹಿಡಿದರು.
- ಅವರಿಗೆ ಈ ಸಂಶೋಧನೆಗೆ 1905 ರಲ್ಲಿ ವೈಧ್ಯಕೀಯ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ನೀಡಲಾಗಿತ್ತು.
- ಈ ಸ್ಮರಣಾರ್ಥ ಪ್ರತಿವರ್ಷ ಮಾರ್ಚ್ 24 ಆಚರಣೆಗೆ ಆಯ್ದುಕೊಳ್ಳಲಾಗಿದೆ.
- ವಿಶ್ವ ಆರೋಗ್ಯ ಸಂಸ್ಥೆಯು ನೆದರ್ಲ್ಯಾಂಡ್ ದೇಶದಲ್ಲಿ ಮೊದಲ ಬಾರಿಗೆ ಕ್ಷಯರೋಗ ದಿನವನ್ನು 1995 ರಲ್ಲಿ ಆಚರಿಸಿದ್ದು, 2022ರ ವೇಳೆಗೆ ಕ್ಷಯ ರೋಗಕ್ಕೆ ತುತ್ತಾದ ಜನಸಂಖ್ಯೆಯ ಪ್ರಮಾಣವನ್ನು ತಗ್ಗಿಸುವುದು ಇದರ ಮುಖ್ಯ ಉದ್ದೇಶವಾಗಿತ್ತು.
ರಾಷ್ಟ್ರೀಯ ಕ್ಷಯರೋಗ ನಿಯಂತ್ರಣ ಸಂಸ್ಥೆ :
- ಇದರ ಸ್ಥಾಪನೆ – 1959
- ಕೇಂದ್ರ ಕಛೇರಿ – ಬೆಂಗಳೂರು
- ಇದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತದೆ.
- 2025ರ ವೇಳೆಗೆ ಭಾರತದಲ್ಲಿ ಸಂಪೂರ್ಣವಾಗಿ ಕ್ಷಯರೋಗದ ನಿಯಂತ್ರಣದ ಗುರಿ ಹಾಕಿಕೊಳ್ಳಲಾಗಿದೆ.
- ವಿಶ್ವದಲ್ಲಿ 2030ರ ವೇಳೆಗೆ ಕ್ಷಯರೋಗ ನಿಯಂತ್ರಣ ಗುರಿ ಹಾಕಿಕೊಳ್ಳಲಾಗಿದೆ.
- ಕೇಂದ್ರ ಸರ್ಕಾರ ಆಯುಷ್ಮಾನ್ ಭಾರತ್ ಮತ್ತು ಕ್ಷಯರೋಗ ಮುಕ್ತ ಭಾರತ ಅಭಿಯಾನದ ಮೂಲಕ ಕ್ಷಯ ರೋಗಿಗಳಿಗೆ ನೆರವು ಮತ್ತು ಭಾರತೀಯರ ಆರೋಗ್ಯ ಗುಣಮಟ್ಟ ಸುಧಾರಣೆಗೆ ಕೈಗೊಳ್ಳುತ್ತಿದೆ.
- TB arogya Sathi application ಇದು ಭಾರತದಲ್ಲಿ ಕ್ಷಯರೋಗಕ್ಕೆ ಸಂಬಂಧಿಸಿದಂತೆ ಒಂದೇ ವೇದಿಕೆಯಲ್ಲಿ ಮಾಹಿತಿ ನೀಡುವ ಅಪ್ಲಿಕೇಷನ್ ಇದಾಗಿದೆ.
ಕ್ಷಯರೋಗ ನಿವಾರಣೆಗೆ BCG ಚುಚ್ಚುಮದ್ದು :
- 1921 ರಲ್ಲಿ ಮೊದಲ ಬಾರಿಗೆ BCG ಚುಚ್ಚುಮದ್ದನ್ನು ಕ್ಷಯರೋಗ ನಿಯಂತ್ರಣಕ್ಕೆ ಬಳಸಲಾಯಿತು.
- 1948 ರಲ್ಲಿ ಭಾರತ ಮತ್ತು ಪಾಕಿಸ್ತಾನದಲ್ಲಿ ಈ ಚುಚ್ಚುಮದ್ದು ನೀಡಲು ಆರಂಭಿಸಲಾಯಿತು.
- DOTS : directly observed treatment short course ಕ್ಷಯರೋಗ ನಿವಾರಣಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಚಿಕಿತ್ಸಾ ಕ್ರಮಗಳಲ್ಲಿ ಇದು ಒಂದು.
ಕ್ಷಯರೋಗದ ಬಗ್ಗೆ ಮಾಹಿತಿ :
- ಇದು “ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್” ಎಂಬ ಬ್ಯಾಕ್ಟೀರಿಯಾದಿಂದ ಹರಡುವ ಒಂದು ಸೋಂಕು ರೋಗ.
- ಕ್ಷಯರೋಗವಿರುವ ಒಬ್ಬ ವ್ಯಕ್ತಿ ಚಿಕಿತ್ಸೆ ಪಡೆಯದೇ ಇದ್ದರೆ ಒಂದು ವರ್ಷದಲ್ಲಿ ಕನಿಷ್ಟ 10ರಿಂದ 15 ಜನರಿಗೆ ಕ್ಷಯದ ಸೋಂಕನ್ನು ಹರಡುತ್ತಾನೆ.
ರೋಗದ ಲಕ್ಷಣಗಳು :
- ತೂಕ ನಷ್ಟ
- ಹಸಿವೆ ಇಲ್ಲ
- ಮೂರು ವಾರದರೂ ಕೆಮ್ಮು ಇರುವುದು
- ಕಫದಲ್ಲಿ ರಕ್ತ ಬರುವುದು
- ರಾತ್ರಿ ವೇಳೆ ಜ್ವರ ಬರುವುದು
- ರೋಗದ ಹೆಚ್ಚಳ :
- ಪ್ರಾಥಮಿಕ ಸೊಂಕು ರಕ್ತದ ಅಥವ ಲಿಂಫಟಿಕ್ ಗ್ರಂಥಿಯ ಮೂಲಕ ಹರಡಬಹುದು. ಸಾಕಷ್ಟು ನಿರೋಧತೆ ಇದ್ದರೆ ಈ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ವ್ಯಕ್ತಿಗೆ ನಿರೋಧತೆಯ ಕೊರತೆ ಇದ್ದರೆ ಅವು ದೇಹದ ಒಂದು ಭಾಗದಲಿರುವುದು ರೋಗ ಹೊರ ಹೊಮ್ಮುವವರೆಗೆ ಆ ಭಾಗದಲ್ಲಿ ವರ್ಷಗಳವರೆಗೆ ಗುಪ್ತವಾಗಿರುವುದು
- ಬ್ಯಾಕ್ಟೀರಿಯಾ ಬಾಯಿಯ ಮೂಲಕ ಮತ್ತು ಉಸಿರಾಟದ ಮೂಲಕ ದೇಹ ಸೇರಬಹುದು. ಅಲ್ಲಿಂದ ಲಿಂಫ್ ನೋಡ್ ಗಳಿಗೆ ಮತ್ತು ಜೀರ್ಣನಾಳಗಳಲ್ಲಿ ಸೇರುವವು.
- ಸೊಂಕಿತ ಪ್ರಾಣಿಗಳ ಹಾಲಿನಿಂದಲೂ ಮಾನವರಿಗೆ ಸೊಂಕು ತಗುಲಬಹುದು.
ಸೋಂಕು ತಗುಲಬಹುದಾದ ಸ್ಥಳಗಳು :
- ಲಿಂಫ್ ಗ್ರಂಥಿಗಳು ಮತ್ತು ಕತ್ತಿನ ಸುತ್ತಲಿರುವರುವ ಅಬಸ್ಕೆಸಸ್.
- ಮೂಳೆಗಳು ಮತ್ತು ಕೀಲುಗಳು, ಅರ್ಧಕ್ಕೂ ಹೆಚ್ಚಿನ ಪ್ರಕರಣಗಳಲ್ಲಿ ಬೆನ್ನು ಮೂಳೆಯ ಮೇಲೆ ಪರಿಣಾಮವಾಗುವುದು.
- ಜಿನಿಟೊ ಯುರಿನರಿ ನಾಳ – ಮಹಿಳೆಯರಲ್ಲಿ ಗರ್ಭಾಶಯ ರೋಗಗಳು ಸಾಮಾನ್ಯವಾಗಿ ಕಾಣಿಸಿಕೊಂಡು ಗಂಡಸರಲ್ಲಿ ಎಪಿಡಿಡೈಮಿಸ್ ತೊಂದರೆ ಯಾಗುವುದು. ಇಬ್ಬರಲ್ಲಿ ರೀನಲ್, ಯುರೆಟರಿಕ್ ಮತ್ತು ಬ್ಲಾಡರ್ ತೊಂದರೆ ಬರಬಹುದು..
- ಹೊಟ್ಟೆ – ಬೊವೆಲ್ ಮತ್ತು ಪೆರಿಟೊನಿಯಂ ಮೇಲೆ ಪರಿಣಾಮ ಬೀರುವುದು.
- ಮೆನಂಜೈಟಿಸ್ – ಸಮಯದಲ್ಲಿ ಚಿಕೆತ್ಸೆ ಪಡೆಯದಿದ್ದರೆ ಪ್ರಾಣಾಪಾಯಕಾರಿ
- ಪೆರಿಕಾರ್ಡಿಯಮ್- ಹೃದಯದ ಸಂಪೀಡಕವಾಗಿಸುವುದು.
- ಚರ್ಮ – ಅನೇಕ ರೂಪದಲ್ಲಿ ಕಂಡುಬರುವುದು.
FAQ :
ವಿಶ್ವ ಕ್ಷಯರೋಗ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
ಮಾರ್ಚ್ 24
ಕ್ಷಯರೋಗಕ್ಕೆ ಕಾರಣವಾಗಿರುವ ಬ್ಯಾಕ್ಟೀರಿಯಾ ಯಾವುದು?
“ಮೈಕೋಬ್ಯಾಕ್ಟೀರಿಯಂ ಟ್ಯುಬರ್ಕ್ಯುಲೋಸಿಸ್”
ಇತರೆ ವಿಷಯಗಳು :
ವಿಶ್ವ ಅರಣ್ಯ ದಿನಾಚರಣೆ ಬಗ್ಗೆ ಮಾಹಿತಿ