ಗ್ಯಾರಂಟಿಗಳ ಸರದಾರ 5 ಗ್ಯಾರಂಟಿಗಳ ಜೊತೆಗೆ ಈ ಜಿಲ್ಲೆಗಳಲ್ಲಿ ನೂತನ ಏರ್‌ಪೋರ್ಟ್‌ಗಳ ನಿರ್ಮಾಣಕ್ಕೆ ಸಿಹಿಸುದ್ದಿ ನೀಡಿದ ಸಿದ್ದು

0

ನಮಸ್ಕಾರ ಸ್ನೇಹಿತರೆ ಕರ್ನಾಟಕ ಸರ್ಕಾರವು ಈ ವರ್ಷದ ಬಜೆಟ್ ನಲ್ಲಿ ಕರ್ನಾಟಕದ ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಾದ ಧರ್ಮಸ್ಥಳ ಕೊಡಗು, ಚಿಕ್ಕಮಂಗಳೂರು ವಿಜಯಪುರ ಸ್ಥಳಗಳಿಗೆ ಸುಲಭವಾಗಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿಎ ಸ್ಟ್ರಿಪ್ ಸ್ಥಾಪನೆ ಹಾಗೂ ವಿಜಯಪುರದಲ್ಲಿ ವಿಮಾನ ನಿಲ್ದಾಣ ಸ್ಥಾಪನೆಗೆ ಈ ವರ್ಷವೇ ಆರಂಭ ಮಾಡಬೇಕೆಂದು ಸಿದ್ದರಾಮಯ್ಯ ತಿಳಿಸಿದ್ದಾರೆ. ಈ ವರ್ಷದ ಬಜೆಟ್ ನ ಸಂಪೂರ್ಣ ಮಾಹಿತಿಯನ್ನು ನಿಮಗೆ ತಿಳಿಸಲಾಗುತ್ತದೆ.

karnataka-budget-information
karnataka-budget-information

ಬಜೆಟ್ ನಲ್ಲಿ ಮೂಲಸೌಕರ್ಯಗಳಿಗೆ ಒತ್ತು :

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಮಂಡಿಸಿದ ಈ ವರ್ಷದ ಬಜೆಟ್ ನಲ್ಲಿ ಮೂಲಸೌಕರ್ಯಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ. ಮೂಲಸೌಕರ್ಯ ಗಳೆಂದರೆ ರೈಲ್ವೆ , ವಿಮಾನ, ಬಂದರು ಪ್ರಗತಿಗೆ ಹೆಚ್ಚು ಒತ್ತು ನೀಡಿದ್ದಾರೆ.

ಹೊಸ ಸ್ಟ್ರಿಪ್ ಸ್ಥಾಪನೆ :

ಧರ್ಮಸ್ಥಳ ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಹೊಸ ಏರ್ ಸ್ಟ್ರಿಪ್ ಗಳನ್ನು ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಕ್ರಮ ಕೈಗೊಂಡಿದೆ. ಇಯರ್ ಸ್ಲಿಪ್‌ಗಳನ್ನು ಪ್ರವಾಸೋದ್ಯಮ ಮತ್ತು ಉದ್ಯಮ ವಲಯಗಳನ್ನು ಉತ್ತೇಜಿಸಲು ಹಾಗೂ ವಿಪತ್ತು ನಿರ್ವಹಣೆಯ ಸಮಯದಲ್ಲಿ ರಕ್ಷಣಾ ಕಾರ್ಯಗಳಿಗೆ ನೆರವಾಗುವ ಉದ್ದೇಶದಿಂದ ಸ್ಥಾಪಿಸಲು ಮುಂದಾಗುತ್ತಿದೆ.

ರೈಲು ಜಾಲ ವಿಸ್ತರಣೆ :

ಕರ್ನಾಟಕದ ಎಲ್ಲ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಮೂಲಕ ರೈಲ್ವೆ ಜಾಲದ ಸಾಂದ್ರತೆಯನ್ನು ಹೆಚ್ಚಿಸಿ ಹಾಗೂ ಪ್ರಾದೇಶಿಕ ಅಸಮತೋಲನ ಕಡಿಮೆ ಮಾಡುವ ಉದ್ದೇಶದಿಂದ ಜೊತೆಗೆ ಸರಕು ಸಾಗಾಣಿಕೆಗೆ ಹಾಗೂ ಜನಸಾಮಾನ್ಯರ ಸುಗಮ ಸಂಚಾರಕ್ಕಾಗಿ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರವು 8766 ಕೋಟಿ ರೂಪಾಯಿಗಳ ಹೂಡಿಕೆಯೊಂದಿಗೆ 1110 ಕಿಲೋಮೀಟರ್ ಉದ್ದದ 9 ರೈಲ್ವೆ ಯೋಜನಾ ಕಾಮಗಾರಿಗಳನ್ನು ಆದ್ಯತೆಯ ಮೇಲೆ ಪೂರ್ಣಗೊಳಿಸಲು ಕರ್ನಾಟಕ ಸರ್ಕಾರವು ಕ್ರಮ ವಹಿಸಲಾಗಿದೆ.

ಅನಿಲ ವಿತರಣಾ ನೀತಿ :

ರಾಜ್ಯದಲ್ಲಿರುವ ನೈಸರ್ಗಿಕ ಅನಿಲ ವಿತರಣಾ ಜಾಲದ ವಿಸ್ತರಣೆಗೆ ರಾಜ್ಯ ಸರ್ಕಾರವು ಅನುವು ಮಾಡಿಕೊಡಲು ರಾಜ್ಯದಾದ್ಯಂತ ಏಕರೂಪದ ಅನುಮತಿ ಶುಲ್ಕ ಒಳಗೊಂಡಂತೆ ಹಾಗೂ ನಗರ ಅನಿಲ ವಿತರಣಾ ನೀತಿಯನ್ನು ಕರ್ನಾಟಕ ಸರ್ಕಾರವು ರೂಪಿಸಲಾಗುತ್ತಿದೆ.

ಇದನ್ನು ಓದಿ : ಮತ್ತಷ್ಟು ತರಕಾರಿಗಳ ಬೆಲೆಯಲ್ಲಿ ಏರಿಕೆ, ತರಕಾರಿಗಳ ಜೊತೆಗೆ ಮೊಟ್ಟೆ ಮಾಂಸದ ಬೆಲೆಯು ಸಹ ಏರಿಕೆ

ಕೇಣಿಯಲ್ಲಿ ಸರ್ವರಿಗೂ ಹಸಿರು ಬಂದರು :

ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಜನರು ಕೇಣಿಯಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸರ್ವ ವೃತ್ತಿ ಡೀಪ್ ವಾಟರ್ ಗ್ರೀನ್ ಫೀಲ್ಡ್ ಬಂದರು ಅಭಿವೃದ್ಧಿಪಡಿಸಲು ಕರ್ನಾಟಕ ಸರ್ಕಾರವು ಮುಂದಾಗಿದೆ. ಅದರಂತೆ ಮೀನುಗಾರಿಕಾ ದೋಣಿಗಳು ಹಾಗೂ ತಂಗುವ ಜಟ್ಟಿಗಳು ಹಾಗೂ ಬಂದರುಗಳಲ್ಲಿ ಹೂಳು ತೆಗೆಯುವುದು ಜೊತೆಗೆ ಕುಂದಾಪುರ ಮಲ್ಪೆ ಹೊನ್ನಾವರ ಭಟ್ಕಳ ಮತ್ತು ಬೆಲೆ ಕೇರಿ ಬಂದರುಗಳಲ್ಲಿ ಎರಡು ವರ್ಷಗಳಿಗೊಮ್ಮೆ ಹೂಳೆತ್ತುವ ಕಾರ್ಯಕ್ರಮವನ್ನು ಕರ್ನಾಟಕ ಸರ್ಕಾರವು ಹಮ್ಮಿಕೊಳ್ಳಲಾಗುತ್ತಿದೆ.

ಹೀಗೆ ಕರ್ನಾಟಕ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ತಮ್ಮ ಬಜೆಟ್ ನಲ್ಲಿ ರಾಜ್ಯದ ಜನತೆಯ ಮೂಲಸೌಕರ್ಯಗಳ ಬಗ್ಗೆ ಹೆಚ್ಚು ಗಮನ ಹರಿಸುವುದರ ಮೂಲಕ ಅವರು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಲು ಕರ್ನಾಟಕ ಸರ್ಕಾರವು ಸಹಾಯ ಮಾಡುತ್ತಿದೆ. ಕರ್ನಾಟಕ ಸರ್ಕಾರದ ಈ ಬಜೆಟ್ ನ ಮಾಹಿತಿಯನ್ನು ನಿಮ್ಮ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಐಫೋನ್ 13 ಈಗ 21 ಸಾವಿರಕ್ಕೆ ಖರೀದಿಸಿ : ಫ್ಲಿಪ್ಕಾರ್ಟ್ ನಲ್ಲಿ ಐಫೋನ್ 13 ಮೇಲೆ ಬಂಪರ್ ಆಫರ್

2.5 ಲಕ್ಷ ರೂಪಾಯಿ ತೆರಿಗೆ ಪಾವತಿ ಮಾಡುವವರಿಗೆ ಮತ್ತೊಂದು ಆಫರ್ : ಆದಾಯ ತೆರಿಗೆ ಪಾವತಿ ದಾರರಿಗೆ ರಿಯಾಯಿತಿ

Leave A Reply

Your email address will not be published.