ಅಕ್ಕಿ ಹಣ ಪಡೆಯಲು ನೀವು ಈ ಕೆಲಸವನ್ನು ತಕ್ಷಣವೇ ಮಾಡಬೇಕು : ಇಲ್ಲದಿದ್ದರೆ ಅಕ್ಕಿ ಹಣ ಪಡೆಯಲು ಸಾಧ್ಯವಿಲ್ಲ
ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರ ಪ್ರಾರಂಭಿಸಿದ ಅನ್ನ ಭಾಗ್ಯ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು 10 ಕೆಜಿ ಅಕ್ಕಿಯನ್ನು ನೀಡುವುದಾಗಿ ಈ ಮೊದಲು ಹೇಳಿತ್ತು. ಆದರೆ ಕೇಂದ್ರ ಸರ್ಕಾರವು ಅಕ್ಕಿಯನ್ನು ನೀಡಿದ ಕಾರಣ 5 ಕೆಜಿ ಅಕ್ಕಿಯನ್ನು ಹಾಗೂ 5 ಕೆಜಿ ಅಕ್ಕಿಗೆ ಬದಲಾಗಿ ಹಣವನ್ನು ನೀಡುವುದಾಗಿ ನಿರ್ಧರಿಸಿತು. ಅದರಂತೆ ಪಡಿತರ ಚೀಟಿಯದಾರರು ಹಣವನ್ನು ಹಾಗೂ ಅಕ್ಕಿಯನ್ನು ಪಡೆಯಬೇಕಾದರೆ ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಸುವುದು ಕಡ್ಡಾಯ ಮಾಡಲಾಗಿತ್ತು.
ಅದರಂತೆ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಲು ಸರ್ಕಾರವು ಕೊನೆಯ ದಿನಾಂಕವನ್ನು ನಿಗದಿ ಮಾಡಿದ್ದು ಆ ಬಗ್ಗೆ ಮಾಹಿತಿಯನ್ನು ಈ ಲೇಖನದಲ್ಲಿ ನಿಮಗೆ ತಿಳಿಸಲಾಗುತ್ತದೆ.
ಆಧಾರ್ ಕಾರ್ಡ್ ಬ್ಯಾಂಕ್ ಅಕೌಂಟ್ ಒಂದಿಗೆ ಮ್ಯಾಪಿಂಗ್ ಆಗಿರಬೇಕು :
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಕರ್ನಾಟಕ ಸರ್ಕಾರವು ಡಿ ಬಿ ಟಿ ಯ ಮೂಲಕ ಪಡಿತರ ಚೀಟಿ ದಾರರಿಗೆ ಹಣವನ್ನು ತಲುಪಿಸಲು ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿರಬೇಕು ಎಂದು ಹೇಳಿದ್ದು ಈ ಲಿಂಕ್ ಕಡ್ಡಾಯವಾಗಿದೆ. ಅಲ್ಲದೆ ಬ್ಯಾಂಕ್ ಅಕೌಂಟ್ ನೊಂದಿಗೆ ಆಧಾರ್ ಕಾರ್ಡ್ ಕಡ್ಡಾಯವಾಗಿ ಮ್ಯಾಪಿಂಗ್ ಆಗಿರಬೇಕೆಂದು ರಾಜ್ಯ ಸರ್ಕಾರ ಈ ಮೊದಲೇ ತಿಳಿಸಿತ್ತು.
ಆದ್ದರಿಂದ ಆಧಾರ್ ಕಾರ್ಡಿಗೆ ಈಗಾಗಲೇ ಹಲವು ಜನರಿಗೆ ಬ್ಯಾಂಕ್ ಅಕೌಂಟ್ ಲಿಂಕ್ ಆಗದಿರುವ ಕಾರಣ ಅವರ ಬ್ಯಾಂಕ್ ಗೆ ಹಣವನ್ನು ಪಾವತಿಸಲು ಆಗಿಲ್ಲ ಆದ್ದರಿಂದ ಅವರು ಈ ಕೆಳಗಿನ ಹಂತಗಳನ್ನು ಈ ಕೂಡಲೇ ಅನುಸರಿಸುವುದರ ಮೂಲಕ ಪಡಿತರ ಚೀಟಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿ ಹಾಗೂ ಬ್ಯಾಂಕ್ ಅಕೌಂಟ್ ಅನ್ನು ಮ್ಯಾಪಿಂಗ್ ಮಾಡಿಸುವುದು ಕಡ್ಡಾಯವಾಗಿದೆ.
ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಿಸಲು ಕೊನೆಯ ದಿನಾಂಕ :
ಕಳೆದ ಜೂನ್ 30 2023 ರಂದು ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ಈ ಮೊದಲು ಸರ್ಕಾರವು ನಿಗದಿ ಮಾಡಿತ್ತು ಆದರೆ ಈಗ ಸೆಪ್ಟೆಂಬರ್ 323ರವರೆಗೆ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಲು ರಾಜ್ಯ ಸರ್ಕಾರವು ಸಮಯವನ್ನು ವಿಸ್ತರಿಸಿದೆ. ಹಾಗಾಗಿ ಲಿಂಕ್ ಮಾಡದೆ ಇರುವಂತಹ ಅಭ್ಯರ್ಥಿಗಳು ಲಿಂಕ್ ಮಾಡಿಸಲು ಇದೊಂದು ಸುವರ್ಣ ಅವಕಾಶವಾಗಿದೆ.
ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡಿಸುವ ಮುಖ್ಯ ಉದ್ದೇಶ :
ದೇಶದಲ್ಲಿ ಅತ್ಯಂತ ಹಳೆಯ ವಾಸ ಸ್ಥಳದ ಪುರಾವೆಗಳಲ್ಲಿ ಪಡಿತರ ಚೀಟಿಯು ಒಂದಾಗಿದ್ದು ಅದನ್ನು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿಸುವುದು ಮುಖ್ಯವಾಗಿದೆ. ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾಡುವುದರ ಮೂಲಕ ವಂಚನೆಯ ಪ್ರಕರಣಗಳನ್ನು ತಡೆಯಬಹುದಾಗಿದೆ ಹಾಗೂ ಸರಿಯಾದ ವ್ಯಕ್ತಿಗಳಿಗೆ ಪಡಿತರವನ್ನು ನೀಡಲು ಸಹಾಯಕವಾಗಿದೆ.
ಹೀಗೆ ರಾಜ್ಯ ಸರ್ಕಾರವು ಪಡಿತರ ಚೀಟಿಯೊಂದಿಗೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು ಈ ದಿನಾಂಕದೊಳಗೆ ಆಧಾರ್ ಕಾರ್ಡ್ ನೊಂದಿಗೆ ಪಡಿತರ ಚೀಟಿಯನ್ನು ಲಿಂಕ್ ಮಾದುವುದರ ಮೂಲಕ ಹಾಗೂ ಪಡಿತರ ಚೀಟಿಯೊಂದಿಗೆ ಬ್ಯಾಂಕ್ ಖಾತೆಯನ್ನು ಮ್ಯಾಪಿಂಗ್ ಮಾಡಿ ಅನ್ನಭಾಗ್ಯ ಯೋಜನೆಯಡಿಯಲ್ಲಿ ಹಣವನ್ನು ಪಡಿತರ ಚೀಟಿದಾರರು ಪಡೆಯಬಹುದಾಗಿದೆ. ಆಧಾರ್ ಕಾರ್ಡನ್ನು ಪಡಿತರ ಚೀಟಿಯೊಂದಿಗೆ ಲಿಂಕ್ ಮಾಡಲು ಆನ್ ಲೈನ್ ಹಾಗೂ ಆಫ್ಲೈನ್ ಗಳಲ್ಲಿ ಲಭ್ಯವಿದೆ ಹೀಗೆ ಈ ಮಾಹಿತಿಯ ಬಗ್ಗೆ ಧನ್ಯವಾದಗಳು.
ಇತರೆ ವಿಷಯಗಳು :
ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಸಿಹಿ..!ಸುದ್ದಿ ಸರ್ಕಾರದಿಂದ ಹೊಸ ವಿಧಾನ
ಗೃಹಲಕ್ಷ್ಮಿ ಯೋಜನೆಗಾಗಿ ಪತಿಯ ಯಾವ ದಾಖಲೆಯನ್ನು ಸಲ್ಲಿಸಬೇಕು..! ಇಲ್ಲಿದೆ ಸಂಪೂರ್ಣ ಮಾಹಿತಿ