ಪಾನ್ ಕಾರ್ಡ್ ನಲ್ಲಿ ನಿಮ್ಮ ವಿಳಾಸವನ್ನು ಸುಲಭವಾಗಿ ಬದಲಾಯಿಸಬಹುದು ಅದಕ್ಕೆ ಈ ರೀತಿ ಮಾಡಿದರೆ ಸಾಕು
ನಮಸ್ಕಾರ ಸ್ನೇಹಿತರೆ ಇಂದು ನಮ್ಮ ಲೇಖನದಲ್ಲಿ ನಿಮಗೆ ಪಾನ್ ಕಾರ್ಡ್ ನಲ್ಲಿ ವಿಳಾಸವನ್ನು ಹೇಗೆ ಬದಲಿಸುವುದು .ಅದಕ್ಕೆ ಯಾವೆಲ್ಲ ಕ್ರಮಗಳನ್ನು ಅನುಸರಿಸಬೇಕು ಹಾಗೂ ಯಾವ ದಾಖಲೆಗಳನ್ನು ನೀಡುವ ವಿವರವನ್ನು ಬದಲಾಯಿಸಬಹುದು .ಎಂಬುದರ ಕುರಿತು ಸಂಪೂರ್ಣ ಮಾಹಿತಿಯನ್ನು ನೀಡಲಿದ್ದು ಹಾಗಾಗಿ ಲೇಖನವನ್ನು ಕೊನೆವರೆಗೂ ಪೂರ್ಣವಾಗಿ ಓದಿ,
ಅನೇಕ ಜನರಿಗೆ ಪಾನ್ ಕಾರ್ಡ್ ಬಗ್ಗೆ ಮಾಹಿತಿಯೇ ಇರುವುದಿಲ್ಲ . ತರಾತುರಿಯಲ್ಲಿ ಪಾನ್ ಕಾರ್ಡ್ ಅನ್ನು ಮಾಡಿಸಿಕೊಂಡಿರುತ್ತಾರೆ ಆಗ ಅವರು ಸರಿಯಾದ ವಿಳಾಸ ಆಗಲಿ ಅಥವಾ ಹೆಸರನ್ನು ನಮೂದಿಸಿರುವುದಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿ ನಿಮಗೆ ತೊಂದರೆ ಆಗಬಾರದೆಂದರೆ ನೀವು ಸರಿಯಾದ ವಿಳಾಸ ಹಾಗೂ ಹೆಸರು ಇತರೆ ದಾಖಲೆಯನ್ನು ಒದಗಿಸಬೇಕು .ಹಾಗಾದರೆ ಪಾನ್ ಕಾರ್ಡ್ ಬಗ್ಗೆ ಸ್ವಲ್ಪ ಮಾಹಿತಿ ಪಡೆಯೋಣ.
ಪಾನ್ ಕಾರ್ಡ್ ಎಂದರೇನು?
ಭಾರತದಲ್ಲಿ ಯಾವುದೇ ರೀತಿಯ ಹಣಕಾಸಿನ ವಹಿವಾಟುಗಳನ್ನು ಹಾಗೂ ಸರ್ಕಾರಿ ಸೇವೆಗಳನ್ನು ಪಡೆಯಲು ಆಧಾರ್ ಕಾರ್ಡ್ ಅಥವಾ ಆಧಾರ್ ಸಂಖ್ಯೆ ಹೆಚ್ಚು ಮುಖ್ಯವಾಗಿದೆ. ಹಾಗೆಯೇ ಪಾನ್ ಕಾರ್ಡ್ ಸಹ ಮುಖ್ಯವಾಗಿ ಬೇಕೆ ಬೇಕು. ಆದಾಯ ಇಲಾಖೆಯಿಂದ ಈ ಪಾನ್ ಕಾರ್ಡನ್ನು ಪಡೆಯಬೇಕು.
ಪಾನ್ ಕಾರ್ಡ್ ಎಷ್ಟು ಅಂಕೆಗಳನ್ನು ಹೊಂದಿರುತ್ತದೆ
ಪಾನ್ ಕಾರ್ಡ್ ನಲ್ಲಿರುವ ಹತ್ತು ಅಂಕೆಗಳನ್ನು ಆಲ್ಫಾ ನ್ಯೂಮರಿಕ್ ಸಂಖ್ಯೆ ಎಂದು ಕರೆಯಲಾಗುತ್ತದೆ. ಪಾನ್ ಕಾರ್ಡ್ ತೆರಿಗೆ ಇಲಾಖೆಯಲ್ಲಿ ನಡೆಸಲಾಗುವ ವಹಿವಾಟುಗಳ ವಿಶಿಷ್ಟ ಗುರುತಿಸುವಿಕೆಯಾಗಿದೆ. ಈ ಪಾನ್ ಕಾರ್ಡ್ ತೆರಿಗೆ ಪಾವತಿಗಳು ಮತ್ತು ಆದಾಯದ ದಾಖಲೆಗಳನ್ನು ಹೊಂದಿರುತ್ತದೆ. ಇದಲ್ಲದೆ ಮತ್ತೊಂದೆಡೆ ಭಾರತದಲ್ಲಿ ವಿಶಿಷ್ಟ ಗುರುತಿನ ಪ್ರಾಧಿಕಾರವು ಆಧಾರ್ ಕಾರ್ಡ್ ಅನ್ನು ನೀಡುತ್ತದೆ. ಈ ಆಧಾರ್ ಕಾರ್ಡ್ ನಲ್ಲಿ 12 ಅಂಕೆಗಳ ಗುರುತಿನ ಸಂಖ್ಯೆ ಗಳಿರುತ್ತವೆ. ಇದರಿಂದ ನಾವು ದೇಶದ ಯಾವುದೇ ಸ್ಥಳದಲ್ಲಿದ್ದರು ಅಥವಾ ಇದು ನಮ್ಮ ವಿಳಾಸದ ಗುರುತಿಸುವಿಕೆಯ ಪುರಾವೆಯಾಗಿ ಕಾರ್ಯನಿರ್ವಹಿಸುತ್ತದೆ. ಹೀಗೆ ಭಾರತದಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ತನ್ನ ಕಾರ್ಯವನ್ನು ನಿರ್ವಹಿಸುತ್ತದೆ.
ಸರ್ಕಾರವು ಇತ್ತೀಚಿಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಲು ಸೂಚಿಸಿರುವುದನ್ನು ನೋಡಬಹುದು. ಈ ಎರಡು ಆಧಾರ್ ಕಾರ್ಡ್ ಗಳ ಲಿಂಕ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಇತ್ತೀಚಿನ ವಿಳಾಸ ಮತ್ತು ವಿವರಗಳು ಹೊಂದಿರಬೇಕು. ಅಲ್ಲದೆ ಪಾನ್ ಕಾರ್ಡ್ ನಲ್ಲಿನ ವಿಳಾಸವನ್ನು ನವೀಕರಿಸಲು ಆಧಾರ್ ಕಾರ್ಡ್ ವಿವರಗಳನ್ನು ಬಳಸಿಕೊಳ್ಳಬಹುದು ಎಂದು ಸರ್ಕಾರವು ತಿಳಿಸಿದೆ.
ಪಾನ್ ಕಾರ್ಡ್ ನಲ್ಲಿ ವಿವರಗಳನ್ನು ಬದಲಾಯಿಸುವ ಪ್ರಕ್ರಿಯೆ:
ಪಾನ್ ಕಾರ್ಡ್ ನಲ್ಲಿ ವಿವರಗಳನ್ನು ಅಥವಾ ವಿಳಾಸವನ್ನು ಬದಲಾಯಿಸಲು ಮೊದಲು UTIITSL (UTI ಇನ್ಫ್ರಾಸ್ಟ್ರಕ್ಚರ್ ಟೆಕ್ನಾಲಜಿ ಮತ್ತು ಸರ್ವೀಸ್ ಲಿಮಿಟೆಡ್) ಎಂಬ ಪೋರ್ಟಲ್ ಅನ್ನು ತೆರೆಯಬೇಕು.
ಪೋರ್ಟಲ್ ಓಪನ್ ಆದ ನಂತರ ಅಪ್ಲೈ ಫಾರ್ ಚೇಂಜ್ / ಕರೆಕ್ಷನ್ ಇನ್ ಪಾನ್ ಕಾರ್ಡ್ ವಿವರಗಳು ಎಂಬ ಆಯ್ಕೆಯ ಮೇಲೆ ಪಾನ್ ಕಾರ್ಡ್ ನಲ್ಲಿರುವ ವಿವರಗಳನ್ನು ಬದಲಾಯಿಸಲು ಅಥವಾ ಸರಿಪಡಿಸಲು ಕ್ಲಿಕ್ ಮಾಡಬೇಕು.
- ಪಾನ್ ಸಂಖ್ಯೆಯನ್ನು ನಮೂದಿಸಿ ಮತ್ತು ಆಧಾರ್ ಬೇಸ್ ಇ – KYC ವಿಳಾಸ ನವೀಕರಣ ಆಯ್ಕೆಯನ್ನು ಕ್ಲಿಕ್ ಮಾಡಿ.
- ಇದರಿಂದ UIDAI ಡೇಟಾಬೇಸ್ ನಿಂದ ನಿಮ್ಮ ಬದಲಾಯಿಸಿದ ವಿಳಾಸದ ವಿವರಗಳನ್ನು ಪಡೆಯುತ್ತದೆ.
- ಇದಲ್ಲದೆ ಆ ಪೋರ್ಟಲ್ ಕೇಳಿದಂತೆ ಆಧಾರ್ ಸಂಖ್ಯೆ, ಮೊಬೈಲ್ ಸಂಖ್ಯೆ, ಇ – ಮೇಲ್ ಐಡಿ ಮೊದಲಾದ ವಿವರಗಳನ್ನು ಸರಿಯಾಗಿ ನಮೂದಿಸಿ ನಂತರ ಸಲ್ಲಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು.
- ಆಧಾರ್ ಕಾರ್ಡ್ ಗೆ ನಮುದಿಸಲಾದ ಮೊಬೈಲ್ ನಂಬರ್ ಗೆ OTP ನಂಬರ್ ಅನ್ನು ಕಳುಹಿಸಲಾಗುತ್ತದೆ. OTP ನಂಬರ್ ಅನ್ನು ನಮೂದಿಸಿ ಸಲ್ಲಿಸು ಮೇಲೆ ಕ್ಲಿಕ್ ಮಾಡಬೇಕು.
- ಈ ಪ್ರಕ್ರಿಯೆ ನಡೆದ ನಂತರ ಆಧಾರ್ ಕಾರ್ಡ್ ನಲ್ಲಿರುವ ವಿವರದಂತೆ ಪಾನ್ ಕಾರ್ಡ್ ನಲ್ಲಿಯೂ ಸಹ ವಿವರಗಳನ್ನು ಯಶಸ್ವಿಯಾಗಿ ಬದಲಾಯಿಸಲಾಗಿದೆ ಎಂಬ ಸಂದೇಶ ಬರುತ್ತದೆ.
- ಜೊತೆಗೆ ಇ – ಮೇಲ್ ಐಡಿ ಗು ಸಹ SMS ಅನ್ನು ಕಳುಹಿಸಲಾಗುತ್ತದೆ. ಇದರಿಂದ ನವೀಕರಿಸಿದ ಪಾನ್ ಕಾರ್ಡ್ ನ ಸ್ಥಿತಿಯನ್ನು ತಿಳಿಯಬಹುದು.
ಹೀಗೆ ಪಾನ್ ಕಾರ್ಡ್ ನ ಇತ್ತೀಚಿನ ವಿವರಗಳನ್ನು ನಾವೇ ಸುಲಭವಾಗಿ ಬದಲಾಯಿಸಿಕೊಳ್ಳಬಹುದು ಹಾಗೂ ಎಲ್ಲಾ ರೀತಿಯ ಸರ್ಕಾರಿ ಸೇವೆಗಳನ್ನು ಯಾವುದೇ ಅಡೆತಡೆ ಇಲ್ಲದೆ ಪಡೆಯಬಹುದಾಗಿದೆ.
ಈ ಮೇಲ್ಕಂಡ ಮಾಹಿತಿಯು ನಿಮಗೆ ಉಪಯೋಗಕರವಾಗಲಿದ್ದು. ಇದೇ ರೀತಿ ನಿಮಗೆ ಹೆಚ್ಚಿನ ಮಾಹಿತಿ ಬೇಕಾದರೆ ನಮ್ಮ ಜಗತ್ತು ವೆಬ್ಸೈಟ್ ಗೆ ಪದೇಪದೇ ಭೇಟಿ ನೀಡಿ .ಸರ್ಕಾರದ ಯೋಜನೆ ಹಾಗೂ ಇತರೆ ಮುಖ್ಯ ವಿಷಯಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ ಲೇಖನವನ್ನು ಪೂರ್ಣ ಓದಿದ್ದಕ್ಕಾಗಿ ಧನ್ಯವಾದ,
ಇತರೆ ವಿಷಯಗಳು :
ಮಹಿಳೆಯರಿಗೆ ಉಚಿತ ಸ್ಮಾರ್ಟ್ ಫೋನ್ ದೊರೆಯಲಿದೆ ಉಚಿತ ಇಂಟರ್ನೆಟ್ ಸೌಲಭ್ಯ ಬೇಗ ಅರ್ಜಿ ಸಲ್ಲಿಸಿ ನಾಳೆ ಕೊನೆಯ ದಿನಾಂಕ
ಹಾಲಿನ ವ್ಯಾಪಾರಕೆ ಸಿಗುತ್ತದೆ 8 ಲಕ್ಷ ರೂಪಾಯಿ ಸಹಾಯಧನ ರೈತರಿಗೆ ಸಿಹಿ ಸುದ್ದಿ ಇಂದೇ ಅರ್ಜಿ ಸಲ್ಲಿಸಿ