ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ಮನೆ ಮನೆಗೂ LPG ಉಚಿತ ಗ್ಯಾಸ್

0

ನಮಸ್ಕಾರ ಸ್ನೇಹಿತರೆ ನಿಮಗೆ ಈಗ ತಿಳಿಸುತ್ತಿರುವುದು ಕೇಂದ್ರ ಸರ್ಕಾರದ ಮತ್ತೊಂದು ಮಹತ್ವದ ಯೋಜನೆಯ ಬಗ್ಗೆ. ಭಾರತ ಸರ್ಕಾರವು ಕಲ್ಯಾಣ ಯೋಜನೆಗಳನ್ನು ಆರ್ಥಿಕವಾಗಿ ದುರ್ಬಲ ಮತ್ತು ಬಡಜನರ ಸಹಾಯಕ್ಕಾಗಿ ನಡೆಸುತ್ತಿದೆ. ಅದರಂತೆ ಉಜ್ವಲ ಯೋಜನೆಯು ಸಹ ಭಾರತ ಸರ್ಕಾರ ನಡೆಸುತ್ತಿರುವ ಕಲ್ಯಾಣ ಯೋಜನೆಗಳಲ್ಲಿ ಒಂದು. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿರುವ ಎಲ್ಲಾ ಮಹಿಳೆಯರಿಗೆ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಅನ್ನು ಲಭ್ಯವಾಗಿರುತ್ತಿರುವುದನ್ನು ನಾವು ಇದೀಗ ನೋಡಬಹುದು.

Pradhan Mantri Ujwala Yojana
Pradhan Mantri Ujwala Yojana

ಅದರಂತೆ ಇದರ ಅಡಿಯಲ್ಲಿ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಲು ಮಹಿಳೆಯರಿಗೆ 3200 ಅನುದಾನವನ್ನು ನೀಡಲಾಗುತ್ತಿದೆ. ಹಾಗಾಗಿ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀವು ಕೆಳಗಿನಂತೆ ನೋಡಬಹುದು.

ಪ್ರಧಾನ ಮಂತ್ರಿ ಉಜ್ವಲ ಯೋಜನೆ :

ಕೇಂದ್ರ ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಗ್ಯಾಸ್ ಸಿಲಿಂಡರನ್ನು ನೀಡುತ್ತಿದೆ. ಹಾಗೆಯೇ ಈ ಯೋಜನೆಯ ಅಡಿಯಲ್ಲಿ ಗ್ಯಾಸ್ ಸಿಲಿಂಡರನ್ನು ಖರೀದಿಸಲು ಎಲ್ಲಾ ಮಹಿಳೆಯರಿಗೂ 3200ಗಳ ಅನುದಾನವನ್ನ ನೀಡಲು ನಿರ್ಧರಿಸಿದೆ. ಅದರಂತೆ ಮೇ ಒಂದು 2016 ರಂದು ನಮ್ಮ ದೇಶದ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿಯವರು ಶುದ್ಧ ಇಂಧನ ಉತ್ತಮ ಜೀವನ ಎಂಬ ಘೋಷಣೆಯನ್ನು ಮಾಡಿದ್ದಾರೆ.

ಈ ಯೋಜನೆಯಡಿಯಲ್ಲಿ ಶುದ್ಧ ಇಂಧನವನ್ನು ಅಡುಗೆಮನೆಗಳಲ್ಲಿ ಎಲ್ಲಾ ಭಾರತೀಯರು ಹೊಗೆ ರಹಿತವನ್ನಾಗಿ ಮಾಡುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಅದರಂತೆ ಸರ್ಕಾರದ ಈ ಯೋಜನೆಯ 5 ಕೋಟಿಗೂ ಹೆಚ್ಚು ಕುಟುಂಬಗಳಿಗೆ ಉಚಿತ ಎಲ್ಪಿಜಿ ಗ್ಯಾಸ್ ಸಂಪರ್ಕವನ್ನು ಕಲ್ಪಿಸಿದೆ.

ಪ್ರಧಾನಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳು ಯಾರ್ಯಾರು :

ಪ್ರಧಾನಮಂತ್ರಿ ಉಜ್ವಲ ಯೋಜನೆಯನ್ನು ಪಡೆಯಲು ಯಾವ ಯಾವ ಸಮುದಾಯದವರು ಈ ಪ್ರಯೋಜನವನ್ನು ಪಡೆಯಬಹುದು ಎಂದು ತಿಳಿಸಲಾಗುತ್ತದೆ ಅವರೆಂದರೆ ಗ್ರಾಮೀಣ ವಸತಿ ಯೋಜನೆಯ ಎಸ್ ಸಿ ಎಸ್ ಟಿ ನಾಗರೀಕರು, ಬಿಪಿಎಲ್ ಕಾರ್ಡ್ ಹೊಂದಿದವರು, ಎಸ್ ವಿ ಸಿ ಸಿ 11ರ ಅಡಿಯಲ್ಲಿ ಪಟ್ಟಿ ಮಾಡಲಾದ ನಾಗರಿಕರು, ಅರಣ್ಯ ವಾಸಿಗಳು, ಓಬಿಸಿ ವರ್ಗದ ನಾಗರಿಕರು, ಅಂತ್ಯೋದಯ ಯೋಜನೆ ಅಡಿಯಲ್ಲಿ ಒಳಗೊಳ್ಳುವಂತಹ ನಾಗರಿಕರು, ನದಿತೀರದ ನಿವಾಸಿಗಳು ಹಾಗೂ ದ್ವೀಪವಾಸಿಗಳು.

ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅಗತ್ಯವಾಗಿರುವ ದಾಖಲೆಗಳು :

ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದಂತಹ ಅಗತ್ಯ ದಾಖಲೆಗಳೆಂದರೆ, ಆಧಾರ್ ಕಾರ್ಡ್, ಪಡಿತರ ಚೀಟಿ, ಆಧಾರ್ ಕಾರ್ಡ್ ಗೆ ಲಿಂಕ್ ಆದ ಮೊಬೈಲ್ ನಂಬರ್, ಬಿಪಿಎಲ್ ಪಡಿತರ ಚೀಟಿ, ವಿಳಾಸಪುರಾವೆ, ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಐಎಫ್‌ಎಸ್‌ಸಿ ಕೋಡ್, ಮತದಾರರ ಗುರುತಿನ ಚೀಟಿ, ಪಾಸ್ಪೋರ್ಟ್ ಸೈಜ್ ನ ಫೋಟೋ ಹೀಗೆ ಕೆಲವೊಂದು ಅಗತ್ಯ ದಾಖಲೆಗಳನ್ನು ಈ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುತ್ತದೆ.

ಇದನ್ನು ಓದಿ : ಪ್ರತಿ ತಿಂಗಳು ಜುಲೈ 1 ರಿಂದ ಅಕ್ಕಿ ಸಿಗುವವರೆಗೂ ಎಲ್ಲರ ಖಾತೆಗೆ ಹಣ ಜಮಾ ಆಗಲಿದೆ

ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಸೌಲಭ್ಯಗಳು :

ಭಾರತ ಸರ್ಕಾರವು 2023 ಪ್ರಧಾನ ಮಂತ್ರಿ ಜುಲೈ ಯೋಜನೆಯನ್ನು ನಡೆಸುತ್ತಿದ್ದು ಪ್ರಸ್ತುತ ಈ ಯೋಜನೆಯ ಅಡಿಯಲ್ಲಿ ಸುಮಾರು 10 ಕೋಟಿ ಕುಟುಂಬಗಳು ಪ್ರಯೋಜನವನ್ನು ಪಡೆದುಕೊಂಡಿವೆ. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಗ್ರಾಮೀಣ ಪ್ರದೇಶದಲ್ಲಿರುವ ಮಹಿಳೆಯರಿಗೆ ಉಚಿತ ಎಲ್ಪಿಜಿ ಗ್ಯಾಸ್ ಸಿಲಿಂಡರ್ ಗಳು ಸಿಗಲಿದೆ. ಇದರಲ್ಲಿ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹಾಗೂ ಅದರೊಳಗಿನ ಬಡ ಮಹಿಳೆಯರಿಗೆ 3200 ಗ್ಯಾಸ್ ಏಜೆನ್ಸಿಗೆ, ಕೇಂದ್ರ ಸರ್ಕಾರದಿಂದ 1600 ರೂಪಾಯಿಗಳು ಹಾಗೂ 1600 ರೂಪಾಯಿಗಳನ್ನು ತೈಲ ಕಂಪನಿಗಳಿಂದ ನೀಡಲಾಗುತ್ತದೆ.

ಹೀಗೆ ಪ್ರಧಾನಮಂತ್ರಿ ಉಜ್ವಲ ಯೋಜನೆಯು ಆರ್ಥಿಕವಾಗಿ ಹಿಂದುಳಿದಂತಹ ಮಹಿಳೆಯರಿಗೆ ಹಾಗೂ ಬಡ ಮಹಿಳೆಯರಿಗೂ ಉಚಿತ ಗ್ಯಾಸ್ ಸಿಲಿಂಡರನ್ನು ನೀಡುವುದರ ಮೂಲಕ ಅವರ ಅಡುಗೆ ಮನೆ ಕೆಲಸಕ್ಕೆ ಪೂರಕವಾಗಿದೆ ಎಂದು ಹೇಳಬಹುದು. ಈ ಮಾಹಿತಿಯನ್ನು ನಿಮ್ಮ ಸಂಬಂಧಿಕರು ಹಾಗೂ ಸ್ನೇಹಿತರಿಗೂ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

ಪೋಸ್ಟ್‌ ಆಫೀಸ್‌ ಸೇವಿಂಗ್ ಸ್ಕೀಮ್:‌ ಇಂದೇ ಈ ಯೋಜನೆಯಲ್ಲಿ ಉಳಿತಾಯ ಮಾಡಿ, 1 ಲಕ್ಷದವರೆಗೆ ಲಾಭ ಗಳಿಸಿ

ಮಹಿಂದ್ರ ಕಂಪನಿಯಿಂದ 5 ಡೋರ್ ಖರೀದಿಸಲು ಕಾಯುತ್ತಿದ್ದ ಜನರಿಗೆ ಬೇಸರದ ಸುದ್ದಿ

Leave A Reply

Your email address will not be published.