ಮಹಿಳಾ ಸಬಲೀಕರಣ ಪ್ರಬಂಧ | Women Empowerment Essay In Kannada

0

ಮಹಿಳಾ ಸಬಲೀಕರಣ ಪ್ರಬಂಧ,  Women Empowerment Essay In Kannada, Mahila Sabalikarana Prabandha mahila sabalikarana essay writing in kannada

ಮಹಿಳಾ ಸಬಲೀಕರಣ ಪ್ರಬಂಧ

ಹಲೋ ಸ್ನೇಹಿತರೆ ನಾವಿಂದು ಈ ಲೇಖನದಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ತಿಳಿದುಕೊಳ್ಳೋಣ, ಮಹಿಳೆಯರಿಗೆ ಪುರುಷನಷ್ಟೆ ಸಮಾನ ಹಕ್ಕು ಮತ್ತು ಗೌರವನ್ನು ನೀಡಬೇಕು ಅವಳು ಮನೆ ಕೆಲಸಗಳಿಗೆ ಮಾತ್ರ ಸೀಮಿತವಲ್ಲಾ ಜಗತ್ತನ್ನೆ ಆಳಬಹುದು, ಮಹಿಳಾ ಸಬಲೀಕರಣದ ಮಹತ್ವ, ಬೇಡಿಕೆ, ಮಹಿಳಾ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದ ಕ್ರಮಗಳು ಇದೆಲ್ಲದರ ಬಗ್ಗೆ ಈ ಲೇಖನದಲ್ಲಿ ತಿಳಿಸಿದ್ದೆವೆ. ಆದ್ದರಿಂದ ಈ ಲೇಖನವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

Women Empowerment Essay In Kannada
Women Empowerment Essay In Kannada

ಪೀಠಿಕೆ:

ಮಹಿಳಾ ಸಬಲೀಕರಣದ ಉದ್ದೇಶ ಮಹಿಳೆಯನ್ನು ಪುರುಷನಂತೆ ಸಮಾನವಾಗಿ ಕಾಣುವುದು. ಮಹಿಳೆ ಪುರುಷರಿಗಿಂತ ಕೆಳಗಿನವಳು ಎಂಬ ಭಾವನೆಯನ್ನು ಹೋಗಲಾಡಿಸಬೇಕು. ಅವಳು ಅಡುಗೆ ಮನೆಗೆ ಮಾತ್ರ ಸೀಮಿತ ಎನ್ನುವ ಭಾವನೆಯನ್ನು ತೆಗೆದು ಹಾಕಬೇಕು. ಅವಳಿಗೆ ಎಲ್ಲಾ ಕ್ಷೇತ್ರದಲ್ಲು ಪುರುಷನಸ್ಟೆ ಸಮಾನ ಹಕ್ಕುನ್ನು ನೀಡಬೇಕು. ಮಾನವ ಹಕ್ಕುಗಳು ಮತ್ತು ವಯಕ್ತಿಕ ಹಕ್ಕುನ್ನು ಒದಗಿಸಬೇಕು ಅವರಿಗೆ ಅವರ ಜೀವನವನ್ನು ಸ್ವತಂತ್ರವಾಗಿ ಮತ್ತು ಯಾವುದೇ ಭಯವಿಲ್ಲದೆ ಬದುಕವಂತೆ ಮಾಡಬೇಕು ಎನ್ನುವುದೆ ಮಹಿಳಾ ಸಬಲೀಕರಣದ ಉದ್ದೇಶ. ಮಹಿಳೆಯರಿಗೆ ಅವರ ಜೀವನಕ್ಕೆ ಅವಶ್ಯಕವಾದ ಅವಕಾಶಗಳನ್ನುಪಡೆದುಕೊಳ್ಳಲು ಬಡಬೇಕು.

ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅನೇಕ ದೌರ್ಜನ್ಯಗಳು ನೆಡೆಯುತ್ತಿವೆ. ಹೆಚ್ಚಾಗಿ ಲೈಂಗಿಕ ದೌರ್ಜನ್ಯಗಳು ನೆಡೆಯುತ್ತಿವೆ. ಹೆಣ್ಣುಮಕ್ಕಳು ಕೆಲಸ ಮಾಡುವ ಸ್ಥಳದಲ್ಲಿ, ಮನೆಯಲ್ಲಿ, ಚಲಿಸುವ ವಾಹನದಲ್ಲಿ , ಶಾಲಾ ಕಾಲೇಜುಗಳಲ್ಲಿ ಹೀಗೆ ಪ್ರತಿಯೊಂದು ಸ್ಥಳದಲ್ಲೂ ದೌರ್ಜನ್ಯಗಳು ಕಂಡು ಬರುತ್ತಿದೆ.

ಮಹಿಳಾ ಸಬಲೀಕರಣದ ಅರ್ಥ

ಎಲ್ಲಾ ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲು ಯಾವುದೇ ಲಿಂಗ, ಜಾತಿ ತಾರತಮ್ಯವನ್ನು ತೋರದೆ ಯಾವುದೆ ಹಿಡಿತದಲ್ಲಿಟ್ಟುಕೊಳ್ಳದೆ ಸಮಾನವಾಗಿದೆ ಕಾಣುವುದೆ ಮಹಿಳಾ ಸಬಲೀಕರಣದ ಅರ್ಥವಾಗಿದೆ.

ವಿವರಣೆ:

ದೇಶದ ಯಾವುದೇ ನಾರಿಯು ಮಧ್ಯ ರಾತ್ರಿ ನಿರ್ಭಯದಿಂದ ದೇಶದ ಹಿತದೃಷ್ಟಿಯಿಂದ ಅಲೆದಾಡುವಳೊ ಆಗ ಮಾತ್ರ ಆ ದೇಶ ರಾಮರಾಜ್ಯವಾಗುವುದು. ಎಂದು ಗಾಂಧೀಜಿ ಹೇಳಿದ್ದರು ಮತ್ತು ಅದು ಅವರ ಕನಸ್ಸಾಗಿತ್ತು ಅವರ ಆ ಕನಸ್ಸು ಇಂದಿಗೂ ಕನಸ್ಸಾಗೆ ಉಳಿದಿದೆ. ಮಹಿಳಾ ಸಬಲೀಕರಣ ಸಾಧಿಸುವುದು ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ಮತ್ತು ದಬ್ಬಾಳಿಕೆಯನ್ನು ತಡೆಯುವುದು ಅತಿ ಅವಶ್ಯಕವಾಗಿದೆ .

ಮಹಿಳೆಯರ ಶೋಷಣೆ ಹಿಂದಿನ ಕಾಲದಿಂದಲು ನಡೆದುಬರುತ್ತಿದೆ. ಹೆಣ್ಣು ಕಲಿತರೆ ಶಾಲೆಯೊಂದು ತೆರೆದಂತೆ ಹೆಣ್ಣು ಎಲ್ಲರ ಜೀವನದಲ್ಲು ಅನೇಕ ಪಾತ್ರವನ್ನು ವಹಿಸುತ್ತಾಳೆ ತಾಯಿ, ಹೆಂಡತಿ, ತಂಗಿ, ಅಕ್ಕ, ಅಜ್ಜಿ ಹೀಗೆ ಹೆಣ್ಣು ದೇಶದ ಕಣ್ಣಿದಂತೆ ಅವಳು ಅವಳ ಇಡೀ ಜೀವನವನ್ನೆ ತನ್ನವರಿಗೊಸ್ಕರನೆ ಬದುಕುತ್ತಳೆ. ಹಿಂದಿನಿಂದಲು ನಮ್ಮ ದೇಶ ಪುರುಷ ಪ್ರಧಾನ ದೇಶವಾಗಿತ್ತು ಪುರುಷರದ್ದೆ ಮೇಲುಗೈ ಪುರುಷರೆ ಕುಟುಂಬದ ಎಲ್ಲಾ ಜವಾದ್ದಾರಿಗಳನ್ನು ತೆಗೆದುಕೊಳ್ಳುವು ಮತ್ತುಅವರೆ ಶ್ರೇಷ್ಠ ವ್ಯಕ್ತಿಗಳು ಅನ್ನಿಸಿಕೊಳ್ಳುತ್ತಿದ್ದರು. ಹೆಣ್ಣು ಬರಿ ಮಗುವನ್ನು ಹೆರುವ ಯಂತ್ರ ಮತ್ತು ಮನೆಕೆಲಸ ಮಾಡುವ ಯಂತ್ರ ಎಂದು ತಿಳಿದಿದ್ದರೆ. ಆದ್ದರಿಂದ ಹೆಣ್ಣುಎಲ್ಲಾ ಅವಕಾಶಗಳಿಂದ ವಂಚಿತರಾಗುತ್ತಿದ್ದರೆ ಮಹಿಳಾ ಸಬಲೀಕರಣದಿಂದ ದೇಶದ ಅಭಿವೃಧ್ದಿಸಾದ್ಯವಾಗುತ್ತದೆ. ತೊಟ್ಟಿಲ್ಲನ್ನು ತೂಗುವ ಕೈ ಜವತ್ತನ್ನೆ ಆಳುಬಹುದು.

ಮಹಿಳಾ ಸಬಲೀಕರಣಕ್ಕೆ ಸರ್ಕಾರ ಜಾರಿಗೆ ತಂದ ಕ್ರಮಗಳು:

  • ಭಾಗ್ಯಲಕ್ಷ್ಮೀ ಯೋಜನೆ:ಇದು ಒಂದು ಕುಟುಂಬ ಯೋಜನೆಯಾಗಿದೆ. ಈ ಯೋಜನೆಗೆ ಹಸಿರು ಕಾರ್ಡ ( BPL) ಹೊಂದಿರಬೇಕು ಇದಕ್ಕಿಂತ ಕೆಳಗಿರಬೇಕು. 18 ವರ್ಷದ ನಂತರ ಈ ಯೋಜನೆಯಡಿಯಲ್ಲಿರುವ ಮಗುವಿಗೆ ಇದರ ಪೂರ್ಣ ಸವಲತ್ತನ್ನು ಸಿಗುತ್ತದೆ. ಮೂರು ಮಕ್ಕಳಿದ್ದರೆ ಮೊದಲ ಎರಡು ಹೆಣ್ಣು ಮಕ್ಕಳಿಗೆ ಈ ಯೋಜನೆ ಸೌಲಭ್ಯ ದೊರೆಯುತ್ತಿದೆ. ಮೊದಲನೇಯ ಮಗುವಿಗೆ ರೂ.1,00,097/- ಹಾಗೂ ಎರಡನೇ ಮಗುವಿಗೆ ರೂ.1,00,052/, ಈ ಯೋಜನೆ 31.3.2006ರ ನಂತರ ಜನಿಸಿದ ಮಕ್ಕಳಿಗೆ.
  • ಹೆಣ್ಣು ಮಕ್ಕಳ ದಿನಾಚರಣೆ:ಹೆಣ್ಣು ಮಕ್ಕಳ ದಿನಾಚರಣೆಯನ್ನು ಜನವರಿ ೨೪ರಂದು ಆಚರಿಸಲಾಗುತ್ತದೆ. ಹೆಣ್ಣಿನ ಪ್ರಾಮುಖ್ಯತೆ, ಭ್ರೂಣ ಹತ್ಯೆಯ, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಶೋಷಣೆ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಇದರ ಬಗ್ಗೆ ತಿಳುವಳಿಕೆ ಹೆಚ್ಚಿಸುವ ಕಾರ್ಯಕ್ರಮವನ್ನು ಸಂಬಂಧ ಪಟ್ಟ ಇಲಾಖೆ ಹಮ್ಮಿಕೊಳ್ಳುತ್ತದೆ.
  • ಸುಕನ್ಯಾ ಸಮೃದ್ಧಿ ಯೋಜನೆ: ಹೆಣ್ಣು ಮಗು ಜನಿಸಿದರೆ ಅದರ ಹೆಸರಿನಲ್ಲಿ ಸಣ್ಣ ಉಳಿತಾಯ ಠೇವಣಿ ಇಡುವುದೆ ಸುಕನ್ಯಾ ಸಮೃದ್ಧಿ ಯೋಜನೆ
  • ಮಹಿಳಾ ಶಕ್ತಿ ಕೇಂದ್ರ : ಮಹಿಳಾ ಶಕ್ತಿ ಕೇಂದ್ರ ಯೋಜನೆಯು ವಿದ್ಯಾರ್ಥಿಗಳು ಮತ್ತು ವೃತ್ತಿಪರ ಸಮುದಾಯ ಸ್ವಯಂಸೇವಕರು, ಗ್ರಾಮೀಣ ಮಹಿಳೆಯರಿಗೆ ಅವರ ಹಕ್ಕುಮತ್ತು ಕಲ್ಯಾಣ ಯೋಜನೆಗಳ ಬಗ್ಗೆ ಮಾಹಿತಿ ನೀಡುವುದಾಗಿದೆ.
  • ಸ್ತ್ರೀ ಶಕ್ತಿ ಸಂಘಗಳು :ಸ್ತ್ರೀ ಶಕ್ತಿ ಸಂಘಗಳು ಮಹಿಳೆ ಸ್ವಾವಲಂಬಿಗಲಾಗಿಸುವ ಮತ್ತುಮಹಿಳಾ ಸಬಲೀಕರಣ ನಿಟ್ಟಿನಲ್ಲಿ2000-01ರಲ್ಲಿ ಪ್ರಾರಂಭಿಸಲಾಯಿತು. ಹಿಂದುಳಿದ ಕುಟುಂಬ, ಕೃಷಿ ಕೂಲಿ ಕಾರ್ಮಿಕರು, ಭೂರಹಿತ ಕುಟುಂಬಗಳು, ಮಹಿಳೆಯನ್ನ ಸಣ್ಣ ಉಳಿತಾಯವನ್ನು ಪ್ರಾರಂಭಿಸಿ ಆರ್ಥಿಕವಾಗಿ ಸಬಲೀಕರಣಗೊಳಿಸುವುದು ಮೂಲ ಉದ್ದೇಶವಾಗಿದೆ.
  • ನಾರಿ ಶಕ್ತಿ ಪುರಸ್ಕಾರ :ಇದನ್ನು1999ರಲ್ಲಿ ಜಾರಿಗೆತರಲಾಯಿತು. ಇದು ದುಡಿಯುವ ಹೆಣ್ಣು ಮಕ್ಕಳನ್ನು ಗುರುತಿಸಿ ಕೊಡುವ ಪುರಸ್ಕಾರವಾಗಿದೆ. ಇದು ಭಾರತದಲ್ಲಿ ನೀಡವ ಉನ್ನತ ಗೌರವಗಳಲ್ಲಿ ಒಂದಾಗಿದೆ. ಪ್ರತೀ ವರ್ಷ ಮಾರ್ಚ್ 8 ರಂದು ರಾಷ್ಟ್ರಪತಿ ಅರ್ಹ ಸಾಧಕಿಯರಿಗೆ ಈ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಾರೆ ಇದು ರೂ.1,00,000 ಒಳಗೊಂಡಿರುತ್ತದೆ.

ಮಹಿಳಾ ಸಬಲೀಕರಣದ ಬೇಡಿಕೆಗಳು:

  1. ಗೌರವ ಮತ್ತು ಘನತೆಯನ್ನು ಕಾಣಬೇಕು, ವ್ಯಕ್ತಿತ್ವ ಅವರ ಶಕ್ತಿಯನ್ನು ಹಿಯಾಳಿಸಬಾರದು
  2. ಮಾನವ ಮತ್ತು ವಯಕ್ತಿಕ ಹಕ್ಕುಗಳನ್ನು ಒದಗಿಸಬೇಕು.
  3. ಲಿಂಗ ಸಮಾನತೆ
  4. ವಿಧ್ಯಾಭ್ಯಾಸ ಒದಗಿಸಬೇಕು
  5. ಆರ್ಥಿಕ ಮತ್ತು ಔದ್ಯೋಗಿಕ ಸಬಲೀಕರಣ
  6. ಕಾನೂನಾತ್ಮಕ ಬೆಂಬಲ
  7. ರಾಜಕೀಯ ಸಬಲೀಕರಣ
  8. ಕೆಲಸ ಮಾಡುವ ಸ್ಥಳದಲ್ಲಿ ಸೂಕ್ತ ಭದ್ರತೆ ಒದಗಿಸುವುದು

ಮಹಿಳಾ ಸಬಲೀಕರಣದ ಮಹತ್ವ:

  • ವೈಯಕ್ತಿಕ ನೆಲೆಗಟ್ಟಿಲ್ಲಿ ಮಹಿಳಾ ಸಬಲೀಕರಣದಿಂದ ಕುಟುಂಬದ ಆರ್ಥಿಕ ಅಭಿವೃಧ್ದಿಯನ್ನು ಉಂಟುಮಾಡುವುದು.
  • ದೌರ್ಜನ್ಯ ಕಡಿಮೆಯಾಗುತ್ತದೆ: ಇವತ್ತಿನ ಮೀ-ಟೂ ಅಭಿಯಾನ ಇದಕ್ಕೊಂದು ಸಾಕ್ಷಿಯಾಗಿದೆ.
  • ಭ್ರಷ್ಟಾಚಾರಾದ ನಿಯಂತ್ರಣ
  • ಬಡತನಸ ನಿವಾರಣೆಗೆ ಸಹಕಾರ: ದೇಶದಲ್ಲಿ ಇಂದಿಗು 26% ಜನರು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದರೆ
  • ಅಭಿವೃದ್ಧಿ
  • ಪ್ರಜಾಪ್ರಭುತ್ವದ ಉಳಿವಿಕೆ : ಜಾಗತಿಕ ರಾಷ್ಟ್ರಗಳ ಸಾಲಿನಲ್ಲಿ ಸರಿಸಮಾನ ಸ್ಥಾನದಲ್ಲಿ ನಿಲ್ಲಲು ಮಹಿಳಾ ಸಬಲೀಕರಣವು ಸಹಾಯ ಮಾಡುತ್ತದೆ, ರಾಜಕೀಯ ಕ್ಷೇತ್ರದಲ್ಲಿ ,ಅಂತರ್‌ ರಾಷ್ಟ್ರೀಯ ಸ್ಪರ್ಧೇಗಳು.

ಉಪಸಂಹಾರ;

ಮಹಿಳಾ ಸಬಲೀಕರಣವು ವ್ಯಕ್ತಿ, ಸಮಾಜ ಮತ್ತು ರಾಷ್ಟ್ರದ ಮೇಲೆ ಬಹುಮುಖಿಯಾಗಿ ಪ್ರಯೋಜನಗಳನ್ನು ಹೊಂದಿದೆ. ರಾಷ್ಟ್ರದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯಲ್ಲಿ ಇದು ಬಹು ಮುಖ್ಯ ಪಾತ್ರ ವಹಿಸುತ್ತದೆ. ಇದು ಮಹಿಳೆಯರ ಪ್ರಗತಿಗೆ ಮತ್ತು ಬೆಳವಣಿಗೆಗೆ ಅಡೆತಡೆಗಳನ್ನು ತೆಗೆದುಹಾಕುತ್ತದೆ.

ಮಹಿಳೆಯ ಮನಸ್ಸನ್ನು ಮುಕ್ತಗೊಳಿಸುತ್ತದೆ ಅವರ ನಿರ್ಧಾರಗಳನ್ನು ಮುಕ್ತವಾಗಿ ವ್ಯಕ್ತ ಪಡಿಸಲು ಸಹಾಯ ಮಾಡುತ್ತದೆ. ಬೇಟಿ ಪಡಾವ್‌ ಬೇಟಿ ಬಚಾವ್‌. ಹೆಣ್ಣು ಭ್ರಣ ಹತ್ಯೆಯನ್ನು ತಡೆದು ಮಹಿಳಾ ಸಬಲೀಕರಣಕ್ಕೆ ಪ್ರೋತ್ಸಹ ನೀಡಿ ಅವರ ಮೇಲಿನ ದೌರ್ಜನ್ಯ ತಡೆಯೋಣ ಅವಳು ಶಕ್ತಿ ಹೀನಳು ಒಂದೆ ಕೆಲಸಕ್ಕೆ ಮಾತ್ರ ಸೀಮಿತಳು ಅವಳಿಂದ ಏನು ಮಾಡಲು ಸಾದ್ಯವಿಲ್ಲ ಎಂಬ ಎಲ್ಲಾ ಮುಡನಂಬಿಕೆಗಳನ್ನು ತಗೆದುಹಾಕಿ ದೇಶದ ಅಭಿವೃದ್ಧಿಗೆ ಕಾರಣವಾಗೋಣ.

FAQ

1. ಹೆಣ್ಣು ಮಕ್ಕಳ ದಿನಾಚರಣೆಯನ್ನು ಯಾವಾಗ ಆಚರಿಸಲಾಗುತ್ತದೆ?

ಜನವರಿ ೨೪ರಂದು ಆಚರಿಸಲಾಗುತ್ತದೆ.

2.ನಾರಿ ಶಕ್ತಿ ಪುರಸ್ಕಾರ ಯಾವಾಗ ಜಾರಿಯಾಯಿತು?

1999ರಲ್ಲಿ ಜಾರಿಯಾಯಿತು.

3.ಸ್ತ್ರೀ ಶಕ್ತಿ ಸಂಘಗಳು ಯಾವ ಉದ್ದೇಶದಿಂದ ಸ್ಥಾಪಿಸಿದರು?

ಮಹಿಳಾ ಸಬಲೀಕರಣ ಉದ್ದೇಶದಿಂದ ಸ್ಥಾಪಿಸಿದರು.

ಇತರೆ ವಿಷಯಗಳು

ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಬಂಧ

ಮತದಾನ ಜಾಗೃತಿ ಪ್ರಬಂಧ

ಬಡತನದ ಬಗ್ಗೆ ಪ್ರಬಂಧ

ಕರ್ನಾಟಕ ಏಕೀಕರಣ ಪ್ರಬಂಧ

Leave A Reply

Your email address will not be published.