ಗಾಂಧಿ ಜಯಂತಿ ಪ್ರಬಂಧ | Gandhi Jayanti Essay in Kannada

0

ಗಾಂಧಿ ಜಯಂತಿ ಪ್ರಬಂಧ, Gandhi Jayanti Essay in Kannada, ಮಹತ್ಮ ಗಾಂಧಿ ಜಯಂತಿ ಪ್ರಬಂಧ, Mahatma Gandhi Prabandha in Kannada

ಗಾಂಧಿ ಜಯಂತಿ ಪ್ರಬಂಧ

ಹಲೋ ಗೆಳೆಯರೆ ನಾವು ಈ ಲೇಖನದಲ್ಲಿ ಗಾಂಧಿ ಜಯಂತಿಯ ಬಗ್ಗೆ ತಿಳಿಯೊಣ. ಗಾಂಧೀಜಿ ಒಬ್ಬ ಮಹಾನ್‌ ವ್ಯಕ್ತಿಯಾಗಿದ್ದರು, ಭಾರತದ ಸ್ವಾತಂತ್ರ ಹೋರಾಟದಲ್ಲಿ ಇವರ ಪಾತ್ರ ಅಪಾರ ಆದ್ದರಿಂದ ಗಾಂಧೀಜಿ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಆಚರಿಸಲಾಗುತ್ತದೆ ಈ ಪ್ರಬಂಧದಲ್ಲಿ ಗಾಂಧಿ ಜಯಂತಿ ಹೇಗೆ ಆಚರಿಸಲಾಗುತ್ತದೆ ಯಾಕೆ ಆಚರಿಸಲಾಗುತ್ತದೆ ಎಂಬ ಎಲ್ಲಾ ವಿಷಯದ ಬಗ್ಗೆ ನಾವು ಪ್ರಬಂಧ ರೂಪದಲ್ಲಿ ನಿಮಗೆ ತಿಳಿಸಿದ್ದೆವೆ ಆದ್ದರಿಂದ ಈ ಪ್ರಬಂಧವನ್ನು ಕೊನೆಯವರೆಗು ಸಂಪೂರ್ಣವಾಗಿ ಓದಿ.

Gandhi Jayanti Essay in Kannada
Gandhi Jayanti Essay in Kannada

ಪೀಠಿಕೆ:

ಗಾಂಧೀಜಿ ಭಾರತದ ಸ್ವಾತಂತ್ರ ಹೋರಾಟಗಾರಾಗಿದ್ದರು. ಗಾಂಧೀಜಿಯವರನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಎಂದು ಕರೆಯಲಾಗುತ್ತದೆ.  ಅಕ್ಟೋಬರ್ 2 ರಂದು‌ ಪ್ರತಿ ವರ್ಷ ಗಾಂಧಿ ಜಯಂತಿಯನ್ನು ಸಂಭ್ರಮದಿಂದ ಶಾಲಾ ಕಾಲೇಜುಗಳಲ್ಲಿ ಆಚರಿಸಲಾಗುತ್ತದೆ. ಆ ದಿನದಂದು ಶಾಲಾ ಕಾಲೇಜುಗಳಲ್ಲಿಅನೇಕ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ, ಇದು ಒಂದು ರಾಷ್ಟ್ರಿಯ ಹಬ್ಬವಾಗಿದೆ. ಗಾಂಧೀಜಿ ಭಾರತಕ್ಕೆ ಸ್ವಾತಂತ್ರ ತಂದು ಕೊಡುವುದರಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.

ವಿವರಣೆ:

ಗಾಂಧೀಜಿ ಪೂರ್ಣ ಹೆಸರು ಮೋಹನ್‌ದಾಸ್‌ ಕರಮಚಂದ್ ಗಾಂಧಿ. ಗಾಂಧೀಜಿ ಹುಟ್ಟಿದ ದಿನವನ್ನು ಗಾಂಧಿ ಜಯಂತಿ ಎಂದು ಕರೆಯಲಾಗುತ್ತದೆ. ಗಾಂಧಿ ಜಯಂತಿ ಭಾರತದ ರಾಷ್ಟ್ರೀಯ ರಜಾದಿನಗಳಲ್ಲಿ ಒಂದಾಗಿದೆ. ಗಾಂಧೀಜಿ ಜನನ ಅಕ್ಟೋಬರ್ 2, 1869 ರಲ್ಲಿ ಪೋರ್‌ಬಂದರಿನಲ್ಲಿ ಜನಿಸಿದರು. ಇವರ ತಂದೆ – ಕರಮಚಂದ ಗಾಂಧಿ, ತಾಯಿ – ಪುತಲಿಭಾಯಿ. ಇವರನ್ನು ಬಾಪು ಮತ್ತು ರಾಷ್ಟ್ರಪಿತ ಎಂದು ಕರೆಯಲಾಗಿತ್ತು. ಇವರು 30 ಜನವರಿ 1948 ರಂದು ನಿಧನರಾದರು. ಗಾಂಧೀಜಿ ಬ್ರಿಟಿಷರ ವಿರುದ್ದ ಅಸಹಕಾರ ಚಳುವಳಿ, ದಂಡಿ ಮೆರವಣಿಗೆ ಕ್ವಿಟ್‌ ಇಂಡಿಯ ಚಳುವಳಿಗಳನ್ನು ನಡೆಸಿ ದೇಶಕ್ಕೆ ಸ್ವಾತಂತ್ರ್ಯ ವನ್ನು ದೊರಕಿಸಿಕೊಟ್ಟರು.

ಗಾಂಧೀಜಿ ಖಾದಿ ಬಟ್ಟೆಗಳನ್ನು ಧರಿಸಿದ್ದರು. ಬಹಳ ಸರಳ ಜೀವಿಯಾಗಿದ್ದರು. ಸತ್ಯಾಗ್ರಹ , ಶಾಂತಿ , ಅಹಿಂಸೆಯ ಮೂಲಕವೇ ಸಾಗಿ ಬ್ರಿಟಿಷರೆ ಭಾರತ ಬಿಟ್ಟು ತೊಲಗುವಂತೆ ಮಾಡಿದರು. ಜನರಿಗೆ ಮಾನವೀಯತೆಯ ಸಂದೇಶವನ್ನು ನೀಡಿದರು. ಆಗಸ್ಟ್ 15, 1947 ರಂದು ಭಾರತವು ಸ್ವತಂತ್ರವಾಯಿತು. ಗಾಂಧಿಯವರು ಹರಿಜನರ ಉನ್ನತಿಗಾಗಿ ಶ್ರಮಿಸಿದರು, ಅಸ್ಪೃಶ್ಯತೆಯನ್ನು ಅಳಿಸಿಹಾಕಬೇಕೆಂದು ಗಾಂಧಿ ಘೋಷಿಸಿದರು.

ಗಾಂಧಿ ಜಯಂತಿ ಹೇಗೆ ಆಚರಿಸಲಾಗುತ್ತದೆ:

ಗಾಂಧಿ ಜಯಂತಿ ದಿನವನ್ನು ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ನಡೆಸಲಾಗುತ್ತದೆ. ಆ ದಿನ ಮುಂಜಾನೆಯೆ ಎಲ್ಲರು ಸೇರಿ ಗಾಂಧಿ ಫೋಟೋವನ್ನು ಇಟ್ಟುಗಾಂಧೀಜಿಯನ್ನು ಸ್ಮರಿಸಲಾಗುತ್ತದೆ ಮತ್ತುಪ್ರಾರ್ಥನೆ ಸೇವೆಗಳು ಮತ್ತು ಶ್ರದ್ಧಾಂಜಲಿಗಳನ್ನು ನಡೆಸಲಾಗುತ್ತದೆ. ಶಾಲಾ ಕಾಲೇಜುಗಳಲ್ಲಂತು ಬಹಳ ವಿರ್ಜುಂಭಣೆಯಿಂದ ಆಚರಿಸಲಾಗುತ್ತದೆ. ಇದೆಲ್ಲಾ ದೇಶದಾದ್ಯಂತ ನಡೆಯುತ್ತದೆ. ಪ್ರಾರ್ಥನಾ ಸಭೆಗಳು ಸ್ಮರಣಾರ್ಥ ಸಮಾರಂಭಗಳು ಸಹ ನಡೆಯುತ್ತದೆ.

ಸಮಾಜದ ಗಣ್ಯ ವ್ಯಕ್ತಿಗಳನ್ನುಈ ಕರ್ಯಕ್ರಮದಲ್ಲಿ ಕಾಣಬಹುದು.ಹಿರಿಯ ಸೇವೆ ಸಲ್ಲಿಸುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳು ಬಾಪು ಅವರಿಗೆ ಗೌರವ ಸಲ್ಲಿಸಲು ನವದೆಹಲಿಯ ರಾಜ್ ಘಾಟ್‌ಗೆ ಭೇಟಿ ನೀಡುತ್ತಾರೆ. ಗಾಂಧಿ ಜಯಂತಿ ಕರ್ಯಕ್ರಮಗಳು  ಶಾಲಾ ಕಾಲೇಜುಗಳು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಹೆಚ್ಚಾಗಿ ನಡೆಯುತ್ತದೆ ಮತ್ತು ಸಮಾಜದ ಎಲ್ಲಾ ವರ್ಗದ ಜನರು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.

ಬಣ್ಣ ಬಣ್ಣದ ಹೂಗಳಿಂದ ರಂಗೋಲೆ ಮುಂತಾದ ಅಲಂಕಾರಿಕ ವಸ್ತುಗಳಿಂದ ಅಲಂಕರಿಸಿ ಪ್ರಾರ್ಥನೆ ಭಕ್ತಿಗಿತೆಗಳಿಂದ ಗಾಂಧಿ ಜಯಂತಿ ಆಚರಿಸಲಾಗುತ್ತದೆ. ದೇಶಾದ್ಯಂತ ಪ್ರತಿ ಬಾಪು ಪ್ರತಿಮೆಯನ್ನು ಗೌರವ ಸೂಚಕವಾಗಿ ಸ್ವಚ್ಛಗೊಳಿಸಿ ಹೂಮಾಲೆ ಹಾಕಲಾಗುತ್ತದೆ. ಮಕ್ಕಳಿಗಂತು ಆ ದಿನ ದೊಡ್ಡ ಹಬ್ಬ ಮತ್ತು ಸಂಬ್ರಮ. ಆ ದಿನ ರಜಾ ದಿನವಾದರು ಎಲ್ಲರು ಬಂದು ಬಹಳ ಶ್ರದ್ದೆಯಿಂದ ಗಾಂಧಿ ಜಯಂತಿ ಆಚರಿಸುತ್ತಾರೆ, ಅಂದು ಮಕ್ಕಳಿಗೆ ಯಾವಾಗಲೂ ಸತ್ಯವನ್ನು ಮಾತನಾಡಲು ಮತ್ತು ಅಹಿಂಸೆಯನ್ನು ಅನುಸರಿಸಲು ಕಲಿಸಲಾಗುತ್ತದೆ.

ಅನೇಕ ಶಾಲೆಗಳು ಮತ್ತು ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಮಹಾತ್ಮಾ ಗಾಂಧಿಯವರ ಜೀವನದ ಸಾಕ್ಷ್ಯಚಿತ್ರಗಳು ಪ್ರದರ್ಶನ, ಗಾಂಧಿ ಪ್ರತಿಮೆಗಳನ್ನು ಹೂವುಗಳು ಮತ್ತು ಹೂಮಾಲೆಗಳಿಂದ ಅಲಂಕರಿಸಲಾಗುತ್ತದೆ ಮತ್ತುಆ ದಿನ ಮಾಂಸ ತಿನ್ನುವುದನ್ನು ಅಥವಾ ಮದ್ಯಪಾನ ಮಾಡುವುದನ್ನು ತಪ್ಪಿಸುತ್ತಾರೆ.

ಗಾಂಧಿ ಜಯಂತಿಯ ಕಾರ್ಯಕ್ರಮಗಳು

  • ಗಾಂಧೀಜಿಯವರ ಬಗ್ಗೆ ಭಾಷಣ
  • ಚಿತ್ರಕಲೆ ಸ್ಪರ್ಧೆ
  • ಪ್ರಬಂಧ ಸ್ಪರ್ಧೆಗಳು
  • ಸಿಹಿ ತಿಂಡಿಗಳ ವಿತರಣೆ
  • ಪರಿಸರ ಸ್ವಚ್ಚತಾ ಕಾರ್ಯಕ್ರಮ
  • ಘೋಷಣೆಗಳು
  • ಮೆರವಣಿಗೆ ಕಾರ್ಯಕ್ರಮ
  • ಪ್ರಶಸ್ತಿಗಳ ವಿತರಣೆ
  • ಯುವಜನತೆಯಲ್ಲಿ ಅಹಿಂಸಾತ್ಮಕ ಜೀವನ ವಿಧಾನದ ಪ್ರಚಾರ
  • ಗಾಂಧೀಜಿಯವರ ನೆಚ್ಚಿನ ಭಜನೆಯ (ಹಿಂದೂ ಭಕ್ತಿಗೀತೆ) ಗಾಯನ ಕಾರ್ಯಕ್ರಮ

ಉಪಸಂಹಾರ:

ಗಾಂಧಿ ಜಯಂತಿಯಂದು ಮಹಾತ್ಮ ಗಾಂಧಿಯವರನ್ನು ಮತ್ತು ಅವರ ವ್ಯಕ್ತಿತ್ವವನ್ನುಸ್ಮರಿಸಲಾಗುತ್ತದೆ, ಮತ್ತು ಪ್ರತಿಯೊಬ್ಬರೂ ಈ ದಿನ ಅವರಂತೆ ಬದುಕಲು ಪ್ರಯತ್ನಿಸಬೇಕು. ಗಾಂಧಿ ಜಯಂತಿ ಭಾರತದಲ್ಲಿ ದೇಶಭಕ್ತಿಯ ದಿನವಾಗಿದೆ. ಅವರ ಇಡೀ ಜೀವನ ಅನುಕರಣೆ ಹಾಗು ಅವರ ಆದರ್ಶ ವಿಚಾರಗಳನ್ನುಅಳವಡಿಸಿಕೊಂಡು ಸಮಾಜದಲ್ಲಿ ಮಹತ್ವದ ಬದಲಾವಣೆಗಳನ್ನು ತರಬಹುದು. ಗಾಂಧಿ ಜಯಂತಿಯು ಲಕ್ಷಾಂತರ ಜನರ ಹಕ್ಕುಗಳಿಗಾಗಿ ಹೋರಾಡಿದ ಮತ್ತು ಭಾರತವನ್ನು ಬ್ರಿಟಿಷ್ ಸಾಮ್ರಾಜ್ಯದಿಂದ ವಿಮೋಚನೆಗೊಳಿಸಿದ ರಾಷ್ಟ್ರದ ರಾಷ್ಟ್ರೀಯ ಹಬ್ಬವಾಗಿದೆ . ಇದಲ್ಲದೆ, ಗಾಂಧಿ ಜಯಂತಿಯು ಭಾರತದ ಮೂರು ರಾಷ್ಟ್ರೀಯ ರಜಾದಿನಗಳಲ್ಲಿ ಒಂದಾಗಿದೆ. ವಿಶ್ವಸಂಸ್ಥೆಯು ಅಕ್ಟೋಬರ್ 2ನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನ ಎಂದು ಘೋಷಿಸಿದೆ. ನಾವೆಲ್ಲಾ ಹಿಂಸೆಯನ್ನು ತೊರೆದು ಅಹಿಂಸಾ ಮಾರ್ಗದಲ್ಲಿ ನಡೆದು ಗಾಂಧೀಜಿ ತತ್ವವನ್ನು ಉಳಿಸೋಣ.

FAQ

1.ಗಾಂಧಿ ಜಯಂತಿ ಯಾವಾಗ ಆಚರಿಸಲಾಗುತ್ತದೆ?

ಗಾಂಧಿ ಜಯಂತಿ ಅಕ್ಟೋಬರ್ 2 ರಂದು ಆಚರಿಸಲಾಗುತ್ತದೆ

2.ಗಾಂಧೀಜಿ ಎಲ್ಲಿ ಯಾವಾಗ ಜನಿಸಿದರು?

ಅಕ್ಟೋಬರ್ 2, 1869 ಪೋರ್‌ಬಂದರಿನಲ್ಲಿ ಜನಿಸಿದರು.

ಇತರೆ ವಿಷಯಗಳು

ಕ್ರೀಡೆ ಮತ್ತು ನಮ್ಮ ಆರೋಗ್ಯ ಪ್ರಬಂಧ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

ಕರ್ನಾಟಕದ ಬಗ್ಗೆ ಪ್ರಬಂಧ

Leave A Reply

Your email address will not be published.