Breaking news: 1.75 ಲಕ್ಷ ಅಗ್ನಿ ವೀರರ ನೇಮಕಕ್ಕೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ

0

ನಮಸ್ಕಾರ ಸ್ನೇಹಿತರೆ ನಿಮಗೀಗ ನೇಮಕಾತಿಯ ಬಗ್ಗೆ ಅಂದರೆ ಅಗ್ನಿಪತ್ ಯೋಜನೆಯ ಅಗ್ನಿವೀರರ ನೇಮಕಾತಿಯ ಬಗ್ಗೆ ನಿಮಗೀಗ ಕೆಲವೊಂದಿಷ್ಟು ಮಾಹಿತಿಗಳನ್ನು ತಿಳಿಸಲಾಗುತ್ತದೆ. ಈ ಯೋಜನೆಯ ಅಡಿಯಲ್ಲಿ ನೇಮಕವಾಗುವಂತಹ ಅರ್ಧದಷ್ಟು ಅಗ್ನಿ ವೀರರನ್ನು ಕಾಯಂ ಗೊಳಿಸುವ ಹಾಗೂ ವಯೋಮಿತಿಯನ್ನು ಅರ್ಜಿಗೆ ಹೆಚ್ಚಿಸುವ ಕುರಿತು ಹಲವಾರು ಪ್ರಸ್ತಾಪಗಳಿದ್ದು, ಅವುಗಳಿಗೆ ಸಂಬಂಧಿಸಿದಂತೆ ನಿಮಗೀಗ ಮಾಹಿತಿಯನ್ನು ನೀಡಲಾಗುತ್ತದೆ.

Agnipath Project
Agnipath Project

ಅಗ್ನಿಪಥ್ ಯೋಜನೆ :

ಕೇಂದ್ರ ಸರ್ಕಾರವು ಅಗ್ನಿಪತ್ ಯೋಜನೆ ಅಡಿಯಲ್ಲಿ ಅಗ್ನಿವೀರರ ನೇಮಕಾತಿಗೆ ಕೆಲವೊಂದು ಮಾಹಿತಿಗಳನ್ನು ಬದಲಾಯಿದೆ. ಕೆಲವೊಂದಿಷ್ಟು ಜನ ಭಾರತೀಯರಲ್ಲಿ ಭಾರತೀಯ ಸೇನೆಗೆ ಸೇರಬೇಕೋ ದೇಶ ಸೇವೆ ಮಾಡಬೇಕು ಎಂಬ ಭಾವನೆ ಇದ್ದು ಇನ್ನು ಕೆಲವರಲ್ಲಿ ಕೇಂದ್ರ ಸರ್ಕಾರ ಸಂಬಳ ಪಡೆಯಬೇಕು ಹಾಗೂ ಸರ್ಕಾರಿ ಕೆಲಸದ ಜೊತೆಗೆ ಪದವಿ ಕೋರ್ಸ್ ಗಳನ್ನು ಮುಗಿಯಬೇಕು ಎಂಬ ಆಕಾಂಕ್ಷೆಗಳನ್ನು ಹೊಂದಿರುತ್ತಾರೆ. ಇಂಥವರಿಗೆ ಒಂದು ಭರ್ಜರಿ ಗುಡ್ ನ್ಯೂಸ್ ಅನ್ನು ಕೇಂದ್ರ ಸರ್ಕಾರವು ನೀಡಿದೆ.

ಅದರಂತೆ ದೇಶದ ಸೇನೆಯ ಬಲವನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರವು ಅಗ್ನಿಪಥ ಯೋಜನೆಯನ್ನು ಪ್ರಾರಂಭಿಸಿದೆ. ಹಾಗೂ ಕೊರತೆ ಇರುವಂತಹ ಸೈನಿಕರ ಹುದ್ದೆಗೆ ಭರ್ತಿ ಮಾಡುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. 1.75 ಲಕ್ಷ ಅಗ್ನಿ ವೀರರ ಹುದ್ದೆಯನ್ನು 2026ರ ವೇಳೆಗೆ ಭರ್ತಿ ಮಾಡುವ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಅದರಂತೆ ಅಗ್ನಿವೀರ ನೇಮಕಾತಿ ಸಂಖ್ಯೆಯು ಪ್ರಸ್ತುತ 40,000 ಗಳು ಇದ್ದು ಇನ್ನೂ ಒಂದು ಪಾಯಿಂಟ್ 25 ಲಕ್ಷದವರೆಗೆ ಈ ಹುದ್ದೆಗಳನ್ನು ಏರಿಸಲಾಗಿದೆ ಎಂದು ರಕ್ಷಣಾ ಸಚಿವಾಲಯದ ಮಿಲಿಟರಿ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯಾದ ಲೇ. ಅನಿಲ್ ಪುರಿ ಅವರು ಹೇಳಿದ್ದಾರೆ.

ಅಗ್ನಿಪಥ ಯೋಜನೆಯ ಗುಡ್ ನ್ಯೂಸ್ :

ಮಿಲಿಟರಿ ಪಡೆಗಳ ಅಗ್ನಿಪಥ ಅಗ್ನಿ ವೀರರ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಕೆಲವೊಂದು ಸುದ್ದಿಗಳನ್ನು ನೀಡಿದೆ ಅವುಗಳೆಂದರೆ. ಅಗ್ನಿ ವೀರರ ನೇಮಕಾತಿಗೆ ಗರಿಷ್ಟ 21 ವರ್ಷ ವಯಸ್ಸನ್ನು ನಿಗದಿಪಡಿಸಲಾಗಿದೆ ಎಂದು ಹೇಳಿದ್ದು ಅರ್ಹ ಅಭ್ಯರ್ಥಿಗಳು ಈ ನಿಯಮದಿಂದ ಸಾಕಷ್ಟು ಸಿಗುವುದು ಸಮಸ್ಯೆ ಆಗಿದೆ ಆದ್ದರಿಂದ ವಯಸ್ಸಿನ ಗರಿಷ್ಠ ಮಿತಿಯನ್ನು 23ಕ್ಕೆ ಏರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದ್ದು, ಡಿಪ್ಲೋಮೋ ಓದು ಮುಗಿಸಿ ಹೊರಬರುವ ದೇಶದ ಪ್ರಜೆಗಳು ಈ ನೇಮಕಕ್ಕೆ ಲಭ್ಯವಾಗುವ ನಿರೀಕ್ಷೆ ಇದೆ ಎಂದು ಎಲ್ಲಾ ಮೂಲಗಳು ತಿಳಿಸಿವೆ ಎಂದಿದ್ದಾರೆ.

ಕನಿಷ್ಠ ವಯಸ್ಸು :

ಅಗ್ನಿಪಥ ಯೋಜನೆಯಡಿಯಲ್ಲಿ ಅಗ್ನಿವೀರರ ಹುದ್ದೆಗೆ ಪ್ರಸ್ತುತ ಕನಿಷ್ಠ 17 ವರ್ಷ ಆರು ತಿಂಗಳು ಪೂರೈಸಿದ ಹಾಗೂ 21 ವರ್ಷ ಮೀರದ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು ಆದರೆ ಇದನ್ನು ಈಗ 23 ವರ್ಷಕ್ಕೆ ಏರಿಸಲಾಗಿದೆ.

ಶೇಕಡ 50 ಅಭ್ಯರ್ಥಿಗಳ ಖಾಯಂ ನೇಮಕಾತಿ :

ಯೋಧರ ಕೊರತೆಯನ್ನು ಸೇನೆಗಳಲ್ಲಿ ನೀಗಿಸುವ ಸಲುವಾಗಿ ಸೇನೆಗೆ ಕಾಯಮಾಗಿ ನೇಮಿಸಿಕೊಳ್ಳುವ ಅಗ್ನಿ ವೀರರ ಸಂಖ್ಯೆಯನ್ನು ಶೇಕಡ 50ಕ್ಕೆ ಹೆಚ್ಚಿಸುವ ಸಂಬಂಧ ಸೇನೆ ಯೋಜನೆಯನ್ನು ರೂಪಿಸುತ್ತಿದೆ. ಅದರಂತೆ ವೈಮಾನಿಕ, ಇಂಜಿನಿಯರಿಂಗ್, ಎಲೆಕ್ಟ್ರಾನಿಕ್ಸ್ ಮತ್ತು ಇತರೆ ತಾಂತ್ರಿಕ ವಿಭಾಗಗಳಿಗೆ ಅರ್ಹರನ್ನು ನೇಮಿಸಿಕೊಳ್ಳಲು ಕೂಡ ಕೇಂದ್ರ ಸರ್ಕಾರವು ಪರಿಶೀಲನೆ ನಡೆಸುತ್ತಿರುವುದನ್ನು ಪ್ರಸ್ತಾಪಿಸಲಾಗಿದೆ. ಭೂಸೇನೆಯಲ್ಲಿ ರೂ. 1, 04,053 ನೌಕಾಪಡೆಯಲ್ಲಿ ಪ್ರಸ್ತುತ , 12431 ನೌಕಾಪಡೆಯಲ್ಲಿ ಹಾಗೂ ವಾಯುಪಡೆಯಲ್ಲಿ 5,471 ಯೋಧರ ಕೊರತೆ ಇದೆ.

ವೇತನದ ಮಾಹಿತಿ :

ಭಾರತ ರಕ್ಷಣಾ ಪಡೆಗಳು ಆಗ್ನಿವೀರ ಹುದ್ದೆಗಳಿಗೆ ಕೆಲವೊಂದು ಸೌಲಭ್ಯಗಳನ್ನು ನೀಡುತ್ತದೆ. ಹಾಗೂ ವೇತನ ಸೌಲಭ್ಯವನ್ನು ಸಹ ನೋಡಬಹುದು ಅವುಗಳೆಂದರೆ, 30000 ಹಾಗೂ ಇತರೆ ಭತ್ಯಗಳು ಮೊದಲನೇ ವರ್ಷ ನೀಡಲಾಗುತ್ತದೆ. 33,000 ಹಾಗೂ ಇತರೆ ಭತ್ಯೆಗಳನ್ನು ಎರಡನೇ ವರ್ಷ ನೀಡಲಾಗುತ್ತದೆ. ನಾಲ್ಕನೇ ವರ್ಷದಲ್ಲಿ 40,000 ಗಳು ಹಾಗೂ ಇದರ ಭತ್ಯೆ ಗಳನ್ನು ನೀಡಲಾಗುತ್ತದೆ.

ಇದನ್ನು ಓದಿ : ಸರ್ಕಾರದಿಂದ ರೈತರಿಗೆ ಹೊಸ ಸುದ್ದಿ ಹೈನುಗಾರಿಕೆಗೆ 7 ಲಕ್ಷ ಸಹಾಯಧನ ಅರ್ಜಿ ಅಹ್ವಾನ

ಇತರೆ ಸೌಲಭ್ಯಗಳು :

ಅಗ್ನಿಪಥ ಯೋಜನೆಯಲ್ಲಿ ಅಗ್ನಿ ವೀರರಿಗೆ ಕೆಲವೊಂದು ಸೌಲಭ್ಯಗಳನ್ನು ನೀಡಲಾಗುತ್ತದೆ ಅವುಗಳೆಂದರೆ ನಾಲ್ಕನೇ ವರ್ಷದಲ್ಲಿ ವಾರ್ಷಿಕವಾಗಿ 4. 76 ಲಕ್ಷ ರೂಪಾಯಿಗಳು ಹಾಗೂ 6.72 ಲಕ್ಷದವರೆಗೆ ವೇತನ ನೀಡಲಾಗುತ್ತದೆ. 4 ವರ್ಷದ ನಿವೃತ್ತಿ ನಂತರ ಸೇವಾ ನಿಧಿ ಪ್ಯಾಕೇಜ್ ಅನ್ನು ಟ್ಯಾಕ್ಸ್ ಫ್ರೀ ಆಗಿ 11.71 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಇನ್ಸೂರೆನ್ಸ್ ಪ್ಯಾಕೇಜ್ ಆಗಿ 48 ಲಕ್ಷ ರೂಪಾಯಿಗಳನ್ನು ನೀಡಲಾಗುತ್ತದೆ. ಇದರ ಜೊತೆಗೆ ಅಗ್ನಿವೀರ್ ಸ್ಕಿಲ್ಸ್ ಸರ್ಟಿಫಿಕೇಟ್ ಅನ್ನು ಸಹ ಅಭ್ಯರ್ಥಿಗಳಿಗೆ ನೀಡಲಾಗುತ್ತದೆ.

ಹೀಗೆ ಕೇಂದ್ರ ಸರ್ಕಾರವು ಅಗ್ನಿಪಥ ಯೋಜನೆಯ ಅಡಿಯಲ್ಲಿ ಅಗ್ನಿವೀರರ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಹೊಸ ಯೋಜನೆಗಳನ್ನು ಬಿಡುಗಡೆ ಮಾಡುವುದರ ಮೂಲಕ ನೇಮಿಸಿಕೊಳ್ಳಲು ಮುಂದಾಗಿದೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಜಿಯೋ ಗ್ರಾಹಕರಿಗೆ ಭರ್ಜರಿ ರಿಚಾರ್ಜ್ ಆಫರ್ ಬಿಡುಗಡೆ, ಅನಿಯಮಿತ ಕರೆ ಉಚಿತ ಡೇಟಾ ಜಿಯೋ ಸಿನಿಮಾ ಫ್ರೀ…..!

ರೈತರು ಸರ್ಕಾರದಿಂದ 3 ಲಕ್ಷದವರೆಗೂ ಲಾಭ ಪಡೆಯಬಹುದು, ಅರ್ಜಿಯನ್ನು ಆಹ್ವಾನಿಸಲಾಗಿದೆ

Leave A Reply

Your email address will not be published.