ಬಿಲ್ ಬಾಕಿ ಇರುವ ಕಾರಣಕ್ಕಾಗಿ ಕೆಲವೊಂದು ಭಾಗಗಳಲ್ಲಿ ವಿದ್ಯುತ್ ಸಂಪರ್ಕ ಕಡಿತ

0

ನಮಸ್ಕಾರ ಸ್ನೇಹಿತರೇ ಎಸ್ಕಾಮ್ ಗಳು ಬಿಲ್ ಬಾಕಿ ಇರುವ ಕಾರಣ ದಿಂದಾಗಿ ಹಲವಾರು ಯೋಜನೆಗಳ ಸಂಪರ್ಕವನ್ನು ಕಡಿತ ಮಾಡಿವೆ. ಅಲ್ಲದೆ ಕೆಲವೊಂದು ಭಾಗಗಳಲ್ಲಿ ಕುಡಿಯುವ ನೀರು ಹಾಗೂ ನೀರು ಸಿಗದೆ ರೈತರ ಬೆಳೆಗಳಿಗೆ ಅನಾನುಕೂಲವಾಗುತ್ತಿದೆ. ವಿಧಾನ ಸಭೆಯಲ್ಲಿ ಮಂಗಳವಾರ ಪ್ರತಿಧ್ವನಿಸಿದವು. ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕೆ.ಸಿ ವ್ಯಾಲಿ ಸೇರಿದಂತೆ ರಾಜ್ಯಾದ್ಯಂತ ಸಣ್ಣ ಮತ್ತು ಬೃಹತ್ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಎಲ್ಲಾ ಏತ ನೀರಾವರಿ ಯೋಜನಗಳ ನಿರ್ವಹಣೆಗೆ ಈ ಸಮಸ್ಯೆಗಳು ಎದುರಾಗಿವೆ ಎಂದು ರಾಜ್ಯ ಸರ್ಕಾರವು ತಿಳಿಸಿದೆ.

Department of Electricity
Department of Electricity

ಸೋಲಾರ್ ಜೋಡಣೆ :

ಏತ ನೀರಾವರಿಯೂ ಚಾರ್ಜ್ ಬೊಕ್ಕಸಕ್ಕೆ ಭಾರವಾಗಿರುವ ಯೋಜನೆಗಳ ನಿರ್ವಹಣೆ, ಸಮಸ್ಯೆಗೆ ಸೌರಶಕ್ತಿಯೇ ಪರಿಹಾರ ಎಂಬ ಚಿಂತನೆಯನ್ನು ನಡೆಸಿದೆ. ಈ ಸಂಬಂಧವಾಗಿ ಪ್ರಶ್ನೋತ್ತರ ವೇಳೆಯ ಚರ್ಚೆಯಲ್ಲಿ ಇಂಧನ ಸಚಿವರಾದ ಕೆಜೆ ಜಾರ್ಜ್ ಅವರು ಮಧ್ಯಪ್ರದೇಶಿಸಿ ಏತ ನೀರಾವರಿ ಯೋಜನೆಗಳ ವಿದ್ಯುತ್ ವೆಚ್ಚವನ್ನು ಸಂಬಂಧಪಟ್ಟ ಪಂಚಾಯಿತಿಗಳಾಗಲಿ ಜಲಸಂಪನ್ಮೂಲ ಇಲಾಖೆಯಾಗಲಿ ಭರಿಸಲು ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ನವೀಕರಿಸಬಹುದಾದ ಇಂಧನ ಮೂಲಗಳು :

ಸೋಲಾರ್ ಮತ್ತು ಪವನಸ್ ವಿದ್ಯುತ್ ಶಕ್ತಿ ಈಗ ದುಬಾರಿಯಾಗಿಲ್ಲ ಆದ್ದರಿಂದ ನವೀಕರಿಸಬಹುದಾದ ಇಂಧನ ಮೂಲಗಳ ಅವಲಂಬನೆ ಸದ್ಯ ಕಡಿಮೆ ಬೆಲೆಯಲ್ಲಿದೆ ಹಾಗಾಗಿ ಏತ ನೀರಾವರಿ ಯೋಜನೆಗಳಿಗೆ ಪರ್ಯಾಯ ಇಂಧನ ಮೂಲಗಳ ಅವಲಂಬನಿಗೆ ಬದಲಾಯಿಸಲು ಚರ್ಚೆ ನಡೆಸಲಾಗುತ್ತಿದೆ ಎಂದು ಕೇಜೆ ಚಾರ್ಜ್ ಅವರು ತಿಳಿಸಿದರು.

ಇದನ್ನು ಓದಿ : ಬರೋಬ್ಬರಿ 180 ಕಿಲೋಮೀಟರ್ ಮೈಲೇಜ್ ಕೊಡುವ ಸ್ಕೂಟರ್! ಇದನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು

ಮೀನು ಸಾಕಿ ಬಿಲ್ ಕಟ್ತೀವಿ :

ಏತ ನೀರಾವರಿ ಯೋಜನೆಗಳ ಅಡಿಯಲ್ಲಿ ತುಂಬಿಸುವಂತಹ ಎಲ್ಲೈ ಕರೆಗಳನ್ನು ಪಟ್ಟಿ ಮಾಡಿ ಅಲ್ಲಿ ಮೀನು ಸಾಕಾಣಿಕೆ ಹರಾಜು ಹಾಕಲಾಗುತ್ತದೆ ಇದರಿಂದ ಬರುವ ಹಣವನ್ನು ವಿದ್ಯುತ್ ಶುಲ್ಕ ಬರೆಸಬಹುದು ಎಂಬ ಹೊಸ ಪರಿಹಾರ ಮಾರ್ಗವನ್ನು ಕಂಡುಕೊಳ್ಳಲಾಗಿದೆ ಎಂದು ವಿಧಾನಸಭಾ ಚರ್ಚೆಯಲ್ಲಿ ಜಲಸಂಪನ್ಮೂಲ ಖಾತೆಯನ್ನು ಹೊಂದಿರುವಂತಹ ಡಿಸಿಎಂ ಆದ ಡಿಕೆ ಶಿವಕುಮಾರ್ ಅವರು ಸದನದಲ್ಲಿ ತಮ್ಮ ಮಾಹಿತಿಯನ್ನು ಹಂಚಿಕೊಂಡರು. ಅದಕ್ಕಾಗಿ ಮೀನುಗಾರಿಕೆ ಸಚಿವರನ್ನು ಹಾಗೂ ಇಂಧನ ಸಚಿವರನ್ನು ಒಳಗೊಂಡಂತೆ ಸದ್ಯದಲ್ಲಿಯೇ ಪ್ರತ್ಯೇಕ ಸಭೆಯನ್ನು ಕರೆದು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ಡಿಕೆ ಶಿವಕುಮಾರ್ ಅವರು ವಿಧಾನಸಭೆಯ ಚರ್ಚೆಯಲ್ಲಿ ಪ್ರಕಟಿಸಿದರು.

ಕೆರೆಗಳ ನಿರ್ವಹಣೆಗಾಗಿ ಹಿಂದೆ ಎಸ್ ಎಂ ಕೃಷ್ಣ ರವರ ಕಾಲದಲ್ಲಿ ರೈತರ ಸಹಭಾಗಿತ್ವದಲ್ಲಿ ಸಂಘಗಳನ್ನು ರಚಿಸಲಾಗಿತ್ತು. ಆದರೆ ಈಗ ಆ ಸಂಘಗಳು ಅಸ್ತಿತ್ವದಲ್ಲಿ ಇಲ್ಲ. ವೆಚ್ಚವನ್ನು ಬರಿಸಲು ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವದಕ್ಕಾಗಿ ವೆಚ್ಚಗಳನ್ನು ಬರಿಸಲು ಮುಂದಾಗುತ್ತಿಲ್ಲ. ಇದರಿಂದಾಗಿ ಐದರಿಂದ ಐದು ಕೋಟಿ ಚನ್ನಪಟ್ಟಣ ಕ್ಷೇತ್ರದಲ್ಲಿ ಹಾಗೂ ಆರು ಕೋಟಿ ಕುಣಿಗಲ್ ಕ್ಷೇತ್ರದಲ್ಲಿ ಸೇರಿದಂತೆ ರಾಜ್ಯಾದ್ಯಂತ ವಿದ್ಯುತ್ ಬಿಲ್ ಬಾಕಿಯೂ ನಾಲ್ಕು ಸಾವಿರ ಕೋಟಿ ರೂಪಾಯಿಗಳಷ್ಟು ಉಳಿದುಕೊಂಡಿದೆ.

ಹಾಗಾಗಿ ಮೀನುಗಾರಿಕೆಗೆ ಅವಕಾಶ ಕಲ್ಪಿಸುವುದರ ಮೂಲಕ ಹರಾಜು ಹಾಕುವುದರ ಮೂಲಕ ಹಣವನ್ನು ಸಂಗ್ರಹಿಸುವುದು ಸೂಕ್ತ ತೀರ್ಮಾನವಾಗಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಪಾದಿಸಿದರು.

ಹೀಗೆ ಕೆಲವೊಂದು ಬಿಲ್ಗಳ ಬಾಕಿ ಇರುವುದರಿಂದ ಹಲವಾರು ಯೋಜನೆಗಳ ವಿದ್ಯುತ್ ಸಂಪರ್ಕವನ್ನು ಕಡಿತ ಮಾಡುವಲ್ಲಿ ಎಸ್ಕಾಂಗಳು ಮುಂದಾಗಿವೆ. ಹೀಗೆ ಈ ಮಾಹಿತಿಯು ಬಜೆಟ್ ನಲ್ಲಿ ಮಂಡಿಸಲಾಗಿದ್ದು ಇದಕ್ಕೆ ಸಂಬಂಧಿಸಿದಂತೆ ಸೂಕ್ತ ತೀರ್ಮಾನಗಳನ್ನು ಕೈಗೊಳ್ಳಬಹುದಾ ಎಂದು ಆಶಿಸುತ್ತೇವೆ. ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಸರ್ಕಾರದ ಅಟಲ್ ಪಿಂಚಣಿ ಯೋಜನೆ, ಪ್ರತಿ ತಿಂಗಳು 5000 ಪಿಂಚಣಿ

ಮಹಿಳೆಯರ ಖಾತೆಗೆ ನೇರವಾಗಿ 5000 ಹಣ ಜಮಾ! ಮಹಿಳಾಮಣಿಯರಿಗೆ ವರದಾನವಾದ ಈ ಯೋಜನೆ ಯಾವುದು ಗೊತ್ತಾ?

Leave A Reply

Your email address will not be published.