ಚಂದ್ರನ ಮೇಲೆ ಮನುಷ್ಯರು ನಡೆದಾಡಿ ಬಂದರೂ ಸಹ ಅದರ ಮೇಲೆ ಇಳಿಯುವುದು ಯಾಕಿಷ್ಟು ಕಷ್ಟವಾಗುತ್ತಿದೆ..!

0

ನಮಸ್ಕಾರ ಸ್ನೇಹಿತರೆ ಈಗ ನಿಮಗೆ ತಿಳಿಸುತ್ತಿರುವ ವಿಷಯ ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಭಾರತದ ಇಸ್ರೋ ಕೆಲವೊಂದು ಸಂಶೋಧನೆಗಳನ್ನು ಮಾಡಿದೆ ಅದರಂತೆ ಚಂದ್ರಯಾನದ ಬಗ್ಗೆಯೂ ಸಹ ಕೆಲವೊಂದು ಮಾಹಿತಿಗಳನ್ನು ಈಗ ನಿಮಗೆ ತಿಳಿಸಲಾಗುತ್ತದೆ. ಭಾರತದ ಹೆಮ್ಮೆಯ ಇಸ್ರೋ ಸಂಸ್ಥೆಯು ಚಂದ್ರಯಾನ 3 ಕ್ಕೆ ಸಜ್ಜಾಗಿದ್ದು, ಮರಳಿ ಯತ್ನವ ಮಾಡು ಎಂಬಂತೆ ಈ ಅನ್ವೇಷಣೆಯನ್ನು ನಮ್ಮ ಹೆಮ್ಮೆಯ ಇಸ್ರೋ ಕೈಗೊಂಡಿದೆ.

Chandrayaan 3 News
Chandrayaan 3 News

ಇಸ್ರೋ ತನ್ನ ರೋವರ್ ಅನ್ನು ಚಂದ್ರನ ಮೇಲೆ ಸುರಕ್ಷಿತವಾಗಿ ಇಳಿಸಲು ಮತ್ತೊಮ್ಮೆ ಪ್ರಯತ್ನಿಸುತ್ತಿದೆ. ಆದ್ದರಿಂದ ಶ್ರೀಹರಿಕೋಟಾದಿಂದ ಎಲ್ವಿಎಂ 3 ,ರಾಕೆಟ್ ಚಂದ್ರಯಾನ 3 ನೌಕೆಯನ್ನು ಜುಲೈ 14 ಮಧ್ಯಾಹ್ನ 2:30ಕ್ಕೆ ಹೊತ್ತಯ್ಯಲಿದೆ. ಇದು ಇಸ್ರೋದ ಮತ್ತೊಂದು ಪ್ರಯತ್ನದ ಭಾಗವಾಗಿದೆ. ಮಾನವನ್ನು ಚಂದ್ರನ ಮೇಲೆ 50 ವರ್ಷಗಳ ಮುಂಚೆ ಇಳಿದಿದ್ದರು ಸಹ ಇಂದಿಗೂ ಚಂದ್ರನನ್ನು ತಲುಪುವ ಕಾರ್ಯದಲ್ಲಿ ಮನುಷ್ಯನು ಹರಸಾಹಸ ಪಡುತ್ತಿದ್ದಾನೆ. ಹೀಗೆ ಚಂದ್ರನ ಮೇಲೆ ಮನುಷ್ಯನು ಮತ್ತೊಮ್ಮೆ ಕಾಲಿಡಲು ಪ್ರಯತ್ನಿಸುತ್ತಿದ್ದು ಈ ಮಾಹಿತಿಯ ಬಗ್ಗೆ ಸಂಪೂರ್ಣವಾಗಿ ನೀವು ಈ ಲೇಖನದಲ್ಲಿ ತಿಳಿದುಕೊಳ್ಳಬಹುದಾಗಿದೆ.

ಚಂದ್ರಯಾನ :

ಅಮೆರಿಕಾದ ನೀಲ್ ಆರ್ಮ್‌ಸ್ಟ್ರಾಂಗ್ ಅವರು 1969ರಲ್ಲಿ ಚಂದ್ರನ ಮೇಲೆ ತನ್ನ ಮೊದಲ ಹೆಜ್ಜೆಯನ್ನು ಇಟ್ಟಿದ್ದಾನೆ. ಈ ಘಟನೆ ನಡೆದು 54 ವರ್ಷಗಳು ಕಳೆದರೂ ಸಹ ಚಂದ್ರನನ್ನು ಮುಟ್ಟುವ ಕೆಲಸ ಕಠಿಣವಾಗಿಯೇ ಉಳಿಯುತ್ತಿದೆ. ಇಸ್ರೋದ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈಗೆ 2019 ರ ಸೆಪ್ಟೆಂಬರ್ ನಲ್ಲಿ ಅಪ್ಪಳಿಸಿ ಸಂಪರ್ಕ ಕಡಿತಗೊಂಡಾಗ ಭಾರತ ಮಾಡಿದಂತಹ ಚಂದ್ರಯಾನ 2 ಯೋಜನೆ ವಿಫಲಗೊಂಡಿತ್ತು.

ಅಲ್ಲದೆ ಇಸ್ರೇಲ್ ಸಹ ಅದೇ ವರ್ಷದ ಆರಂಭದಲ್ಲಿ ಬೆರೆ ಶೀಟ್ ಯೋಜನೆಯ ಕೂಡ ನಮ್ಮ ವಿಕ್ರಂ ಲ್ಯಾಂಡರ್ ನಂತೆಯೇ ವಿಫಲವಾಗಿತ್ತು. ಈ ಎಲ್ಲಾ ಘಟನೆಗಳು ಸಂಭವಿಸಿ ಹಲವು ವರ್ಷಗಳು ಕಳೆದ ನಂತರ ಜಪಾನಿನ ಹಾಕೊಟೊ ಆರ್ ಎಂಬ ಯೋಜನೆಯು 2023ರ ಏಪ್ರಿಲ್ ನಲ್ಲಿ ಚಂದ್ರನ ಮೇಲೆ ಲ್ಯಾಂಡರ್ ಸಾಫ್ಟ್ ಲ್ಯಾಂಡಿಂಗ್ ಆಗದೆ ಜಪಾನಿನ ಈ ಯೋಜನೆಯು ಸಹ ವಿಫಲವಾಗಿತ್ತು. ಹೀಗೆ ಅನೇಕ ಯೋಜನೆಗಳು ಚಂದ್ರನನ್ನು ಸ್ಪರ್ಶಿಸಲು ಹೋಗಿ ವಿಫಲವಾಗಿರುವುದನ್ನು ಇಂತಹ ಅನೇಕ ಉದಾಹರಣೆಗಳನ್ನು ನಾವು ನೋಡಬಹುದು.

ಯಶಸ್ವಿ ಚಂದ್ರಯಾನ :

ರಷ್ಯಾ ಅಮೇರಿಕಾ ಮತ್ತು ಚೀನಾ ಮಾತ್ರ ಚಂದ್ರನ ಮೇಲೆ ಕಾಲಿಡಲು ಯಶಸ್ವಿಯಾಗಿವೆ. ಅಮೆರಿಕ ಹಾಗೂ ರಷ್ಯಾ ನಡುವೆ 1960ರ ದಶಕದಲ್ಲಿ ನಡೆದ ಸ್ಪೇಸ್ ರೇಸ್ ನಲ್ಲಿ ಒಂದರ ನಂತರ ಒಂದು ನೈಕಿಯನ್ನು ಕಳುಹಿಸಿದ್ದಕ್ಕಾಗಿ ಚಂದ್ರನ ಮೇಲೆ ಎರಡು ದೇಶಗಳು ತಮ್ಮ ನೌಕೆಯನ್ನು ಇಳಿಸಲು ಯಶಸ್ವಿಯಾದವು. ಇದಾದ ನಂತರ ಚಂದ್ರನಲ್ಲಿ ನೌಕೆಯನ್ನು ತಿಳಿಸಲು ಚೀನಾ ಮಾತ್ರ ಯಶಸ್ವಿಯಾಗಿದೆ. ಚೇಂಜಸ್ 5 ಮಿಷನ್ ನೊಂದಿಗೆ ಚೀನಾವು ತನ್ನ ಮೊದಲ ಯತ್ನದಲ್ಲಿಯೇ 2013 ರಲ್ಲಿ ಚಂದ್ರನನ್ನು ಚುಂಬಿಸುವಲ್ಲಿ ಯಶಸ್ವಿಯಾಯಿತು. ಹಾಗಾಗಿ ಇದುವರೆಗೆ ಚಂದ್ರನ ಮೇಲೆ ತನ್ನ ನೌಕೆಗಳನ್ನು ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಿರುವ ರಾಷ್ಟ್ರಗಳೆಂದರೆ ಅಮೆರಿಕ ರಷ್ಯಾ ಚೀನಾ ಮಾತ್ರ. ಬಾಹ್ಯಾಕಾಶ ಸಂಶೋಧನೆಯ ಇಷ್ಟು ವರ್ಷಗಳ ನಂತರವೂ ನಡೆದರೂ ಸಹ ಚಂದ್ರನನ್ನು ತಲುಪಲು ಕಷ್ಟವಾಗಿಯೇ ಉಳಿದಿರುವುದು ಏಕೆ ಎಂಬ ಪ್ರಶ್ನೆಗಳಿಗೆ ನೀವು ಉತ್ತರವನ್ನು ಈ ಕೆಳಗಿನಂತೆ ಕಂಡುಕೊಳ್ಳಬಹುದಾಗಿದೆ.

ಚಂದ್ರನನ್ನು ಸ್ಪರ್ಶಿಸಲು ಕಷ್ಟವಾಗುತ್ತಿದೆ ಏಕೆ :

ಭೂಮಿಯಿಂದ ಚಂದ್ರನ ಅಂತರವು 3,84,400 ಕಿಲೋಮೀಟರ್ ಇದ್ದು, ಇದು ದೀರ್ಘ ಪ್ರಯಾಣವಾಗಿದೆ. ಚಂದ್ರನ ಮೇಲೆ ಭೂಮಿಯ ನೈಸರ್ಗಿಕ ಉಪಗ್ರಹವನ್ನು ಇಳಿಸಲು ಯೋಚಿಸುವ ಮೊದಲು ಚಂದ್ರನ ಬಳಿಗೆ ಹೋಗುವುದು ಹೇಗೆ ಎಂಬುದನ್ನು ಮೊದಲು ಲೆಕ್ಕಾಚಾರ ಮಾಡಬೇಕಾಗುತ್ತದೆ. ಚಂದ್ರನು ಭೂಮಿಯಿಂದ ಸುಮಾರು 3,84,400 ಕಿಲೋಮೀಟರ್ ದೂರದಲ್ಲಿದ್ದು, ಅಲ್ಲದೆ ಭೂಮಿ ಮಾತ್ರ ಚಂದ್ರನ ನಡುವೆ ಅಂತರ ಬಾಹ್ಯಾಕಾಶ ನೌಕೆ ಸಾಗುವ ಮಾರ್ಗಕ್ಕೆ ಅನುಸಾರವಾಗಿ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಇಂತಹ ಸುದೀರ್ಘ ಪ್ರಯಾಣದಲ್ಲಿ ಯಾರಾದರೂ ಸಹ ಪ್ರಯತ್ನ ಪಡುತ್ತಿದ್ದರೆ ಇದರಿಂದ ವಿಫಲತೆ ಆಗುವ ಸಂಭವವೇ ಹೆಚ್ಚುರುತ್ತದೆ.

ಚಂದ್ರನ ಕಕ್ಷೆಯಲ್ಲಿ ಚಂದ್ರನ ಮೇಲೆ ಇಳಿಯದೆ ಕಾರ್ಯನಿರ್ವಹಿಸುವ ಉಪಗ್ರಹಗಳಿಗೂ ಇದು ಅನ್ವಯವಾಗುತ್ತದೆ. ಅಮೆರಿಕಾದ ನಾಸಾ ಲುನಾರ್ ಫ್ಲಾಶ್ ಲೈಟ್ ಎಂಬ ಮಿಷನ್ ಅನ್ನು ಚಂದ್ರನ ಕಕ್ಷೆಯು ಪ್ರವೇಶಿಸಲು ಆಗದಿದ್ದರಿಂದ ಸ್ಥಗಿತಗೊಳಿಸಬೇಕಾಯಿತು. ಲ್ಯಾಂಡಿಂಗ್ ಸಮಸ್ಯೆ : ಚಂದ್ರನ ಮೇಲ್ಮೈನಲ್ಲಿ ರಾಷ್ಟ್ರಗಳು ತಮ್ಮ ನೌಕೆಗಳನ್ನು ಲ್ಯಾಂಡಿಂಗ್ ಮಾಡಲು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಂತೆ ಚಂದ್ರನಿಂದ ಭೂಮಿಗೆ ಹಿಂತುರುಗಿದ ನಾಸಾದ ಒರಿಯನ್ ಬಾಹ್ಯಾಕಾಶ ನೌಕೆಯಾದ ಆರ್ಟಿಮಿಸ್ 1ಮಿಷನ್ ಬಳಿಕ ವಾತಾವರಣವನ್ನು ಅವಲಂಬಿಸಿರುತ್ತದೆ. ಚಂದ್ರನ ಮೇಲೆ ತಮ್ಮ ನೌಕೆಗಳನ್ನು ಸುರಕ್ಷಿತವಾಗಿ ಇಳಿಸಬೇಕೆಂದರೆ ನೌಕೆಯ ವೇಗವನ್ನು ನಿಧಾನಗೊಳಿಸಬೇಕಾಗುತ್ತದೆ ಆದರೆ ಚಂದ್ರನಲ್ಲಿನ ವಾತಾವರಣ ವೈರುಧ್ಯದಿಂದ ಚಂದ್ರನ ಬಳಿಗೆ ಹೋಗಿರುವ ಬಾಹ್ಯಾಕಾಶ ನೌಕೆಗಳು ಸಮಸ್ಯೆಗೆ ಸಿಲುಕುತ್ತವೆ ಈ ವೇಳೆ ಸಾಕಷ್ಟು ಘರ್ಷಣೆಗಳು ಉಂಟಾಗಿ ಚಂದ್ರಯಾನದಲ್ಲಿ ತಮ್ಮ ನೌಕೆಯನ್ನು ಸುರಕ್ಷಿತವಾಗಿ ಇರಿಸುವಲ್ಲಿ ವಿಫಲವಾಗುತ್ತದೆ.

ಆದ್ದರಿಂದ ಇಂತಹ ಸಂದರ್ಭದಲ್ಲಿ ನೌಕೆಗಳನ್ನು ಬಾಹ್ಯಾಕಾಶದಲ್ಲಿ ನಿಧಾನಗೊಳಿಸಬೇಕಾದ ಏಕೈಕ ವಿಷಯವೆಂದರೆ ಅದರ ಪ್ರೊಪಲ್ಷನ್ ಸಿಸ್ಟಮ್. ಇದರಿಂದ ಬಹಳ ವೇಗವಾಗಿ ನೌಕೆಯನ್ನು ಸುರಕ್ಷಿತ ಲ್ಯಾಂಡಿಂಗ್ ಮಾಡಲು ನಿಧಾನಗೊಳಿಸಬೇಕಾಗುತ್ತದೆ. ಇದನ್ನು ಮಾಡಲು ಸಾಕಷ್ಟು ಇಂಧನವು ಖರ್ಚಾಗುತ್ತದೆ ಆದ್ದರಿಂದ ಇಂಧನವನ್ನು ಹೆಚ್ಚಾಗಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಆದರೆ ಹೆಚ್ಚು ಇಂಧನವನ್ನು ತುಂಬಿದರೆ ಬಾಹ್ಯಾಕಾಶಯನಕ್ಕೆಯು ಹೆಚ್ಚು ಭಾರವಾಗುತ್ತದೆ ಇದರಿಂದ ರಾಕೆಟ್ಗಳ ಸಮೀಕರಣದಲ್ಲಿ ಕಂಡು ಬರುವ ಸಾಮಾನ್ಯ ಸಮಸ್ಯೆಯೂ ಈ ಇಂಧನವನ್ನು ತೆಗೆದುಕೊಂಡು ಹೋಗುವುದು.

ಇದನ್ನು ಓದಿ : ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಖಾತೆಗೆ 2,50,000 ರೂಗಳನ್ನು ಇಂದು ಜಮಾ ಮಾಡಲಾಗುತ್ತದೆ

ನೇಚರ್ ನಿಯತಕಾಲಿಕೆ :

ಚಂದ್ರನ ಬಳಿಗೆ ಹೋಗುವಂತಹ ಕೊನೆಯ ಕೆಲವು ಕಿಲೋಮೀಟರ್ಗಳಾಗಿ ಬಾಹ್ಯಾಕಾಶ ನೌಕೆಯು ಸಮಸ್ಯೆ ಎಂದು ನೇಚರ್ ಎಂಬ ನಿಯತಕಾಲಿಕೆ ತಿಳಿಸಿದೆ. ಈ ವೇಳೆಯಲ್ಲಿ ನೌಕೆಯ ಕಂಪ್ಯೂಟರ್ಗಳು ತಕ್ಷಣವೇ ಕೊನೆಯ ಕ್ಷಣದ ಸಮಸ್ಯೆಗಳಿಗೆ ಪ್ರತಿಕ್ರಿಯಿಸಬೇಕು. ಉದಾಹರಣೆಗೆ ಪ್ರಬಲಕ್ಸನ್ ಸಿಸ್ಟಮ್ ಗಳಿಂದ ಹೆಚ್ಚಿನ ಪ್ರಮಾಣದ ಧೂಳಿನಿಂದ ಸೆನ್ಸಾರ್ ಗಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ ಅದಕ್ಕಾಗಿ ಕಂಪ್ಯೂಟರ್ಗಳು ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಬೇಕು. ಅಲ್ಲದೆ ಇದರ ಜೊತೆಗೆ ಕುಳಿಗಳು ಹಾಗೂ ಬಂಡೆಗಳಿಂದ ಚಂದ್ರನ ಮೇಲ್ಮೈ ಕೂಡಿರುವುದರಿಂದ ನೌಕೆಗಳನ್ನು ಲ್ಯಾಂಡಿಂಗ್ ಮಾಡುವುದು ಮತ್ತಷ್ಟು ಕಷ್ಟಕರವಾಗುತ್ತದೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ನೌಕೆಯು ಲ್ಯಾಂಡಿಂಗ್ ಆಗಬಹುದು ಅಥವಾ ಲ್ಯಾಂಡರ್ ಅಪಾಯಕ್ಕೆ ಸಿಲುಕಿ ಅದು ನಾಶವೇ ಆಗಬಹುದು ಎಂದು ಹೇಳಲಾಗುತ್ತದೆ.

ಹೀಗೆ ಹಲವಾರು ರಾಷ್ಟ್ರಗಳು ಚಂದ್ರನ ಮೇಲೆ ತಮ್ಮ ಉಪಗ್ರಹಗಳನ್ನು ತಿಳಿಸುವಲ್ಲಿ ಸಾಕಷ್ಟು ಶ್ರಮವನ್ನು ವಹಿಸುತ್ತಿದ್ದು, ಚಂದ್ರನ ಮೇಲೆ ತಮ್ಮ ನೌಕೆಯನ್ನು ಸ್ಥಾಪಿಸಲು ಹೆಚ್ಚು ಪ್ರಯತ್ನ ಪಡುತ್ತಿವೆ. ಅದರಂತೆ ನಮ್ಮ ಭಾರತದ ಇಸ್ರೋ ಸಹ ಚಂದ್ರನ ಮೇಲೆ ಮತ್ತೊಮ್ಮೆ ತಮ್ಮ ಹೆಜ್ಜೆಯನ್ನು ಇಡಲು ಮರಳಿ ಯತ್ನವ ಮಾಡು ಎಂಬಂತೆ ಮತ್ತೊಮ್ಮೆ ಪ್ರಯತ್ನ ಮಾಡುತ್ತಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಹಾಗು ಸಂಬಂಧಿಕರಿಗೂ ಸಹ ಶೇರ್ ಮಾಡಿ ಅವರು ಸಹ ಚಂದ್ರಯಾನದ ಕೆಲವೊಂದು ಉಪಯುಕ್ತ ಮಾಹಿತಿಗಳನ್ನು ತಿಳಿದುಕೊಳ್ಳಲಿ ಧನ್ಯವಾದಗಳು.

ಇತರೆ ವಿಷಯಗಳು :

ಮಾರುಕಟ್ಟೆಗೆ ಹೊಸದಾಗಿ ಮತ್ತೊಂದು ಸ್ಕೂಟರ್ ಬರುತ್ತಿದೆ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು..!

 ವಿದ್ಯಾರ್ಥಿಗಳಿಗೆ ಸರ್ಕಾರ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಿದೆ

Leave A Reply

Your email address will not be published.