ಮಾರುಕಟ್ಟೆಗೆ ಹೊಸದಾಗಿ ಮತ್ತೊಂದು ಸ್ಕೂಟರ್ ಬರುತ್ತಿದೆ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು..!

0

ನಮಸ್ಕಾರ ಸ್ನೇಹಿತರೆ ಈಗ ನಿಮಗೆ ತಿಳಿಸಿತ್ತಿರುವುದು ಮಾರುಕಟ್ಟೆಗೆ ಹೊಸ ಎಲೆಕ್ಟ್ರಾನಿಕ್ಸ್ ಸ್ಕೂಟರ್ ಬರುವುದರ ಬಗ್ಗೆ. ಈ ಎಲೆಕ್ಟ್ರಾನಿಕ್ಸ್ ಸ್ಕೂಟರ್ ಅಂದರೆ ಓಲಾ S2 ಪ್ರೊ ಸ್ಕೂಟರ್ ಹೊಸದಾಗಿ ಮಾರುಕಟ್ಟೆಗೆ ಬರಲು ತಯಾರಾಗಿದೆ. ಈ ಸ್ಕೂಟರ್ ನ ಬೆಲೆ ಎಷ್ಟು , ಇದು ಒಮ್ಮೆ ಚಾರ್ಜ್ ಮಾಡಿದರೆ ಎಷ್ಟು ಕಿಲೋಮೀಟರ್ ವರೆಗೆ ಮೈಲೇಜ್ ಅನ್ನು ನೀಡುತ್ತದೆ ಹಾಗೂ ಇದರಲ್ಲಿರುವ ವಿಶಿಷ್ಟ ಲಕ್ಷಣಗಳೇನು ಎಂಬುದರ ಬಗ್ಗೆ ನಿಮಗೀಗ ಸಂಪೂರ್ಣ ಮಾಹಿತಿಯನ್ನು ತಿಳಿಸಲಾಗುತ್ತದೆ.

Ola S2 Pro is a new scooter
Ola S2 Pro is a new scooter

ಮಾರುಕಟ್ಟೆಗೆ ಹೊಸ ಸ್ಕೂಟರ್ :

ಹಲವಾರು ಎಲೆಕ್ಟ್ರಾನಿಕ್ ಸ್ಕೂಟರ್ ಗಳು ಈಗಾಗಲೇ ಮಾರುಕಟ್ಟೆಗೆ 8 ನೀಡಿದ್ದು ಈಗ ಇನ್ನೊಂದು ಹೊಸ ಸ್ಕೂಟರ್ ಮಾರುಕಟ್ಟೆಗೆ ಎಂಟ್ರಿ ಕೊಡಲು ಸಜ್ಜಾಗಿದೆ. ಆ ಸ್ಕೂಟರ್ ಎಂದರೆ ಓಲಾ S2 ಪ್ರೊ. ಈ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು ಇನ್ನೂರ ಹತ್ತು ಕಿಲೋಮೀಟರ್ ವರೆಗೆ ಮೈಲೇಜ್ ಅನ್ನು ನೀಡುತ್ತದೆ. ಇದರಿಂದ ಸುಲಭವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮುಗಿಸಿಕೊಳ್ಳಬಹುದಾಗಿದೆ. ಜನರು ಎಲೆಕ್ಟ್ರಾನಿಕ್ ವಾಹನಗಳ ಕಡೆಗೆ ಹೀಗಾಗಿ ಹೆಚ್ಚು ಗಮನ ಹರಿಸುತ್ತಿರುವುದಕ್ಕೆ ಕಾರಣ ಪೆಟ್ರೋಲ್ ಡೀಸೆಲ್ಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದು. ಈ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಎಲೆಕ್ಟ್ರಾನಿಕ್ ಸ್ಕೂಟರ್ ಗಳ ಬೇಡಿಕೆ ಹೆಚ್ಚಾಗುತ್ತಿದೆ. ಆದ್ದರಿಂದ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಗಳು ವಿವಿಧ ವಿನ್ಯಾಸದ ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಡುತ್ತಿವೆ.

ಭಾರತೀಯ ಮಾರುಕಟ್ಟೆ :

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಹಾವಳಿ ಹೆಚ್ಚುತ್ತಿದ್ದು ಎಲೆಕ್ಟ್ರಿಕ್ ವಾಹನಗಳು ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾರತದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿರುವುದನ್ನು ಕಾಣಬಹುದಾಗಿದೆ. ಇದರ ಜೊತೆಗೆ ಎಲೆಕ್ಟ್ರಿಕ್ ವಾಹನಗಳನ್ನು ಇತ್ತೀಚಿನ ದಿನಗಳಲ್ಲಿ ಜನರು ಹೆಚ್ಚಾಗಿ ಇಷ್ಟಪಡುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣ ಡೀಸೆಲ್ ಮತ್ತು ಪೆಟ್ರೋಲ್ ಗಳ ಬೆಲೆ ಏರಿಕೆ ಆಗಿರುವುದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಲು ಜನರು ಹೆಚ್ಚು ಆಸಕ್ತಿಯನ್ನು ವಹಿಸುತ್ತಿದ್ದಾರೆ.

ಓಲಾ S2 ಪ್ರೊ ಸ್ಕೂಟರ್ :

ಹೊಸ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಇದೀಗ ಓಲಾ ಕಂಪನಿಯ ಬಿಡುಗಡೆ ಮಾಡುತ್ತಿದ್ದ ಇದರ ಕೆಲವೊಂದು ಲಕ್ಷಣಗಳನ್ನು ನಿಮಗಿದೀಗ ತಿಳಿಸಲಾಗುತ್ತದೆ. ಓಲಾ ಕಂಪನಿಯು ಬಿಡುಗಡೆ ಮಾಡುತ್ತಿರುವ ಎಲೆಕ್ಟ್ರಿಕ್ ಸ್ಕೂಟರ್‌ನ ಹೆಸರು ಓಲಾ S2 ಪ್ರೊ. ಅತ್ಯುತ್ತಮ ಹೆಡ್ ಲೈಟ್ ಸೆಟಪ್ ಮತ್ತು ಹೊಳೆಯುವ ವಿನ್ಯಾಸವನ್ನು ಈ ಸ್ಕೂಟರ್ ಹೊಂದಿರುವುದನ್ನು ನೋಡಬಹುದು. ಈ ಸ್ಕೂಟರ್ ಓಲಾ ಕಂಪನಿಯು ಈ ಹಿಂದೆ ಬಿಡುಗಡೆ ಮಾಡಲಾಗಿದ್ದ ಓಲಾ S1 ಅಂತೆಯೇ ಓಲಾ S2 ಅನ್ನೋ ಪ್ರಸ್ತುತಪಡಿಸಲಾಗುತ್ತಿದೆ.

ಇದನ್ನು ಓದಿ : ಸರ್ಕಾರದ ಅಟಲ್ ಪಿಂಚಣಿ ಯೋಜನೆ, ಪ್ರತಿ ತಿಂಗಳು 5000 ಪಿಂಚಣಿ

ಓಲಾ S2 ಪ್ರೊ ಸ್ಕೂಟರ್ ನ ಬೆಲೆ :

ಓಲಾ ಕಂಪನಿಯು ಬಿಡುಗಡೆ ಮಾಡುತ್ತಿರುವ ಈ ಸ್ಕೂಟರ್ ಅನ್ನು ಒಮ್ಮೆ ಚಾರ್ಜ್ ಮಾಡಿದರೆ ಸಾಕು ಸುಲಭವಾಗಿ 210 ಕಿ.ಮೀ ದೂರವನ್ನು ತಲುಪಬಹುದಾಗಿದೆ. ಈ ಸ್ಕೂಟರ್ನ ಮುಖ್ಯ ವಿಶೇಷತೆ ಇದೆ ಆಗಿದೆ. ಈ ಸ್ಕೂಟರ್ 3.74 ಕೆ ಡಬ್ಲ್ಯೂ ಹೆಚ್ ಗಿಂತ ಹೆಚ್ಚು ಶಕ್ತಿಶಾಲಿ ಬ್ಯಾಟರಿ ಯನ್ನು ಹೊಂದಿದೆ ಅಲ್ಲದೆ ಇದು ಗಂಟೆಗೆ 140 ಕಿಲೋಮೀಟರ್ ವರೆಗೆ ಹೆಚ್ಚಿನ ವೇಗವನ್ನು ನೀಡುತ್ತದೆ. ಈ ಸ್ಕೂಟರ್ನ ಬೆಲೆ ಸುಮಾರು 1.15 ಲಕ್ಷದಿಂದ 1.60 ಲಕ್ಷದವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಈ ಸ್ಕೂಟರ್ ಆನೇಕ ವಿಶೇಷತೆಗಳನ್ನು ಒಳಗೊಂಡಿರುವುದನ್ನು ನಾವು ನೋಡಬಹುದು.

ಹೀಗೆ ಓಲಾ ಕಂಪನಿಯು ಬಿಡುಗಡೆ ಮಾಡುತ್ತಿರುವ ಈ ಸ್ಕೂಟರ್ ಜನಸಾಮಾನ್ಯರಲ್ಲಿ ಒಂದು ಖುಷಿಯ ಸಂಗತಿಯಾಗಿದ್ದು ಇದರಿಂದ ಜನರು ಸುಲಭವಾಗಿ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ ಹಾಗೂ ಪೆಟ್ರೋಲ್ ಹಾಗೂ ಡೀಸೆಲ್ ಗಳಿಗೆ ಹೆಚ್ಚೋ ಹಣವನ್ನು ಸುರಿಯುವುದನ್ನು ಈ ಸ್ಕೂಟರ್ ಕಡಿಮೆ ಮಾಡಬಹುದಾಗಿದೆ. ಹೀಗೆ ಈ ಮಾಹಿತಿಯ ಬಗ್ಗೆ ನಿಮ್ಮ ಸ್ನೇಹಿತರು ಯಾರಾದರೂ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಖರೀದಿಸಲು ಬಯಸುತ್ತಿದ್ದರೆ ಅವರಿಗೆ ಶೇರ್ ಮಾಡಿ ಹಾಗೂ ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೂ ಸಹ ಈ ಎಲೆಕ್ಟ್ರಿಕ್ ಸ್ಕೂಟರ್ನ ಮಾಹಿತಿಯನ್ನು ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

5 ನಿಮಿಷದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು ನಿಮ್ಮ ಮೊಬೈಲ್ ಮುಖಾಂತರವೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

 1.75 ಲಕ್ಷ ಅಗ್ನಿ ವೀರರ ನೇಮಕಕ್ಕೆ ಅರ್ಜಿ ಆಹ್ವಾನ, ಈ ಕೂಡಲೇ ಅರ್ಜಿ ಸಲ್ಲಿಸಿ

Leave A Reply

Your email address will not be published.