Good News : ವಿದ್ಯಾರ್ಥಿಗಳಿಗೆ ಸರ್ಕಾರ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಿದೆ

0

ನಮಸ್ಕಾರ ಸ್ನೇಹಿತರೆ ರಾಜ್ಯ ಸರ್ಕಾರವು ಬಿ ಎಸ್ಸಿ ನರ್ಸಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ಮಾಹಿತಿ ಒಂದನ್ನು ನೀಡಿದೆ. ಜೊತೆಗೆ ಸರ್ಕಾರವು ಸಾಮಾನ್ಯ ಪ್ರವೇಶ ಪರೀಕ್ಷೆ ಅಂದರೆ ಸಿಇಟಿ ಬರೆಯದ ವಿದ್ಯಾರ್ಥಿಗಳಿಗೂ ಅನುಕೂಲವಾಗುವಂತೆ ಒಂದು ಬಾರಿ ವಿನಾಯಿತಿ ನೀಡಲು ನಿರ್ಧರಿಸಿದೆ. ಈ ವಿನಾಯಿತಿಯ ಮಾಹಿತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಿಮಗೀಗ ತಿಳಿಸಲಾಗುತ್ತದೆ.

Nursing Course Update
Nursing Course Update

ರಾಜ್ಯದಲ್ಲಿ ಬಿ ಎಸ್ಸಿ ನರ್ಸಿಂಗ್ ಕೋರ್ಸ್ ಗೆ ಪ್ರವೇಶ :

ರಾಜ್ಯ ಸರ್ಕಾರವು ಒಂದು ಬಾರಿ ವಿನಾಯಿತಿಯನ್ನು ಬಿ ಎಸ್ಸಿ ನರ್ಸಿಂಗ್ ಕೋರ್ಸ್ ಗೆ ವಿನಾಯಿತಿ ನೀಡುವ ಬಗ್ಗೆ ಚಿಂತನೆ ನಡೆಸಿದೆ. ನರ್ಸಿಂಗ್ ಸಂಸ್ಥೆಗಳ ಹಿತರಕ್ಷಣೆಗೆ ಹಾಗೂ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಈ ರೀತಿಯ ಕ್ರಮ ವಹಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರಾದ ಡಾಕ್ಟರ್ ಶರಣ ಪ್ರಕಾಶ ಪಾಟೀಲ್ ವಿಧಾನಪರಿಷತ್ ನಲ್ಲಿ ಮಾಹಿತಿ ನೀಡಿದರು.

ಇದನ್ನು ಓದಿ : ಸರ್ಕಾರದ ಅಟಲ್ ಪಿಂಚಣಿ ಯೋಜನೆ, ಪ್ರತಿ ತಿಂಗಳು 5000 ಪಿಂಚಣಿ

ಭಾರತೀಯ ನರ್ಸಿಂಗ್ ಕೌನ್ಸಿಲ್ :

ನರ್ಸಿಂಗ್ ಕೋರ್ಸ್ಗಳ ಪ್ರವೇಶಕ್ಕೂ ಭಾರತೀಯ ನರ್ಸಿಂಗ್ ಕೌನ್ಸಿಲ್ ಸೂಚನೆಯಂತೆಯೇ ಕೆಇಎ ಮೂಲಕ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಹಿಂದಿನ ಸರ್ಕಾರವು ನಡೆಸಿತ್ತು. ಈ ಪರೀಕ್ಷೆಯು ತರಾತುರಿ ಪರೀಕ್ಷೆ ಯಾಗಿರುವುದಂತೂ ನಿಜ. ಇದರಿಂದ ವಿದ್ಯಾರ್ಥಿಗಳಿಗೆ ಸಿಇಟಿಗೆ ಪೂರ್ವ ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಲು ಸರಿಯಾದ ಕಾಲಾವಕಾಶ ಸಿಕ್ಕಿರುವುದಿಲ್ಲ. ಹಾಗಾಗಿ ಸಾವಿರಾರು ಅಭ್ಯರ್ಥಿಗಳು ಇದರಿಂದಾಗಿ ಅವಕಾಶ ವಂಚಿತರಾದರು. ಈ ಹಿನ್ನೆಲೆಯಲ್ಲಿ ಸಿಇಟಿ ಬರೆದವರಿಗೂ ಹಾಗೂ ಬರೆಯದ ವಿದ್ಯಾರ್ಥಿಗಳಿಗೂ ಅನ್ಯಾಯವಾಗದಂತೆ ಸಚಿವರು ಒಂದು ಬಾರಿ ವಿನಾಯಿತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ಒಂದು ಬಾರಿ ವಿನಾಯಿತಿ :

ಸಚಿವರು ಸಿಇಟಿ ಪರೀಕ್ಷೆ ಬರೆಯದ ಮತ್ತು ಬರೆಯಿರಿರುವ ವಿದ್ಯಾರ್ಥಿಗಳಿಗೆ ಅನ್ಯಾಯ ವಾಗದಂತೆ ಒಂದು ಬಾರಿ ವಿನಾಯಿತಿಯನ್ನು ನೀಡಲು ರಾಜ್ಯ ಸರ್ಕಾರವು ಚಿಂತಿಸಿದೆ ಎಂದು ತಿಳಿಸಿದ್ದಾರೆ. ಅದರಂತೆ ಸಿಇಟಿ ಬರೆದ ಅಭ್ಯರ್ಥಿಗಳ ಪ್ರವೇಶಕ್ಕಾಗಿ ಮೆರಿಟ್ ಆಧಾರದಲ್ಲಿ ವೈದ್ಯಕೀಯ ಸಂಸ್ಥೆಗಳು ಎರಡು ಸುತ್ತಿನ ಲಿಂಗನ್ನು ನಡೆಸಲಾಗುತ್ತದೆ ನಂತರ ಆಯಾ ಕಾಲೇಜುಗಳಿಗೆ ಉಳಿಯುವ ಸೀಟುಗಳಿಗೆ ಭರ್ತಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ವಿದ್ಯಾರ್ಥಿಗಳು ಈ ಹಂತದಲ್ಲಿ ಸಿಇಟಿ ಬರೆಯದೆ ಇದ್ದರೆ ಪ್ರವೇಶ ಪಡೆಯಬಹುದಾಗಿದೆ ಆದರೆ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಮಾನದಂಡಗಳನ್ನು ಕಡ್ಡಾಯವಾಗಿ ವಿದ್ಯಾರ್ಥಿಗಳು ಅನುಸರಿಸಬೇಕಾಗುತ್ತದೆ. ಹಾಗೂ ಪಿಯುಸಿ ವಿಜ್ಞಾನದಲ್ಲಿ ಪಿಸಿಎಂಬಿಯಲ್ಲಿ ಸಾಮಾನ್ಯ ವಿದ್ಯಾರ್ಥಿಗಳು ಶೇಕಡ 45ರಷ್ಟು ಹಾಗೂ ಶೇಕಡ 40ರಷ್ಟು ಅಂಕಗಳನ್ನು ಕನಿಷ್ಠ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಗಳಿಸಿರಬೇಕೆಂದು ಸಚಿವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳಿಗೆ ಮೆರಿಟ್ ಮೇಲೆ ಸೀಟುಗಳ ಭರ್ತಿಗೆ ಎರಡು ಸತ್ತಿನ ಕೌನ್ಸಿಲಿಂಗ್ ಅನ್ನು ನಡೆಸಲಾಗುತ್ತದೆ ಎಂದು ಹೇಳುವ ಮೂಲಕ ನಂತರ ಉಳಿದಿರುವ ಸೀಟುಗಳಿಗೆ ಒಂದು ಬಾರಿ ಮಾತ್ರ ವಿನಾಯಿತಿ ನೀಡಬೇಕೆಂದಿದೆ ಹಾಗೂ ಈ ಕ್ರಮದಿಂದ ವಿದ್ಯಾರ್ಥಿಗಳು ಹಾಗೂ ಖಾಸಗಿ ಕಾಲೇಜುಗಳಲ್ಲಿ ಅನುಕೂಲವಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. 33,000 ನರ್ಸಿಂಗ್ ಸೀಟ್ಗಳು ರಾಜ್ಯದಲ್ಲಿ ಈಗಾಗಲೇ ಲಭ್ಯವಿದ್ದು ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಈಗಾಗಲೇ ನಡೆಸಲಾಗಿದೆ. ಒಟ್ಟು ಈ ಬಾರಿ 1,75,688 ಅಭ್ಯರ್ಥಿಗಳು ಬಿಎಸ್ಸಿ ನರ್ಸಿಂಗ್ ಸೀಟ್ ಗಳನ್ನ ಹಂಚಿಕೆಗೆ ಅರ್ಹತೆಯನ್ನು ಪಡೆದಿದ್ದಾರೆ ಎಂದು ಸಚಿವರಾದ ಡಾಕ್ಟರ್ ಶರಣ ಪ್ರಕಾಶ್ ಪಾಟೀಲ್ ರವರು ವಿಧಾನ ಪರಿಷತ್ ನಲ್ಲಿ ಮಾಹಿತಿಯನ್ನು ನೀಡಿದರು.

ಹೀಗೆ ಬಿಎಸ್ಸಿ ನರ್ಸಿಂಗ್ ಪ್ರವೇಶಕ್ಕೆ ಒಂದು ಬಾರಿ ವಿನಾಯಿತಿಯನ್ನು ನೀಡಲು ರಾಜ್ಯ ಸರ್ಕಾರವು ಮುಂದಾಗಿದೆ ಎಂಬುದರ ಮಾಹಿತಿಯನ್ನು ನಿಮ್ಮ ಸ್ನೇಹಿತರು ಹಾಗೂ ಸಂಬಂಧಿಕರಿಗೆ ತಿಳಿಸುವುದರ ಮೂಲಕ ಈ ಮಾಹಿತಿಯನ್ನು ಶೇರ್ ಮಾಡಿ. ಈ ಮಾಹಿತಿಯನ್ನು ಶೇರ್ ಮಾಡುವುದರ ಮೂಲಕ ನಿಮ್ಮ ಸ್ನೇಹಿತರು ಯಾರಾದರೂ ಬಿಎಸ್ಸಿ ನರ್ಸಿಂಗ್ ಕೋರ್ಸ್ಗಳ ಪ್ರವೇಶಕ್ಕೆ ಕಾಯುತ್ತಿದ್ದರೆ ಅವರಿಗೆ ಇದರ ಪ್ರವೇಶದ ಬಗ್ಗೆ ಅಂದರೆ ವಿನಾಯಿತಿ ನೀಡಿರುವುದರ ಬಗ್ಗೆ ತಿಳಿಸಿ ಧನ್ಯವಾದಗಳು.

ಇತರೆ ವಿಷಯಗಳು :

5 ನಿಮಿಷದಲ್ಲಿ ಡ್ರೈವಿಂಗ್ ಲೈಸೆನ್ಸ್ ಪಡೆಯಬಹುದು ನಿಮ್ಮ ಮೊಬೈಲ್ ಮುಖಾಂತರವೇ ಅರ್ಜಿ ಸಲ್ಲಿಸಿ ಇಲ್ಲಿದೆ ಮಾಹಿತಿ

ಪ್ರದೀಪ್ ಈಶ್ವರ್ ಅವರು ಸರ್ಕಾರಿ ಆಸ್ಪತ್ರೆಯನ್ನು ಉಳಿಸುವುದಕ್ಕಾಗಿ ಕೆಲವೊಂದು ತಮ್ಮ ವೈಯಕ್ತಿಕ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ

Leave A Reply

Your email address will not be published.