ಕ್ರೀಡೆ ಮತ್ತು ನಮ್ಮ ಆರೋಗ್ಯ ಪ್ರಬಂಧ | Kride Mattu Namma Arogya Prabandha In Kannada
ಕ್ರೀಡೆ ಮತ್ತು ನಮ್ಮ ಆರೋಗ್ಯ ಪ್ರಬಂಧ, Kride Mattu Namma Arogya Prabandha In Kannada, sports and health essay in kannada
ಕ್ರೀಡೆ ಮತ್ತು ನಮ್ಮ ಆರೋಗ್ಯ ಪ್ರಬಂಧ
ಹಲೋ ಎಲ್ಲಾರಿಗೂ ನಮಸ್ತೆ,ನಾವಿಂದು ಪ್ರತಿಯೊಬ್ಬರಿಗೂ ಸಹಾಯಕವಾಗಿರುವ ಕ್ರೀಡೆಯ ಬಗ್ಗೆ ತಿಳಿಸುತ್ತಿದ್ದೆವೆ. ಇಂದು ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಾಗಿರುವ ಅಂಶ ಎಂದರೇ ಅದು ಆರೋಗ್ಯ ಅದಕ್ಕಾಗಿ ಅವನು ತನ್ನ ದೇಹವನ್ನು ಗಟ್ಟಿಮುಟ್ಟಾಗಿಸಿಕೊಳ್ಳಲು ಕ್ರೀಡೆ, ಜಿಮ್ ಗಳ ಮೊರೆಹೊಗುತ್ತಾರೆ. ಆರೋಗ್ಯದ ಬಗ್ಗೆ ಎಲ್ಲಾರು ತಿಳಿದಿರಲೆ ಬೇಕಾದ ಸಂಗತಿ ಎಂದರೆ ಆರೋಗ್ಯ ಒಂದು ಚೆನ್ನಾಗಿದ್ದಾರೆ ಮನುಷ್ಯ ಸಂತೋಷದಿಂದ ಜೀವನ ನಡೆಸುತ್ತಾನೆ. ಹಾಗಾಗಿ ನಾವಿಂದು ಈ ಪ್ರಬಂಧದಲ್ಲಿ ನಾವು ಕ್ರೀಡೆಯ ಶಕ್ತಿ, ಕ್ರೀಡೆ ನಮ್ಮ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ.
ಪೀಠಿಕೆ:
ಕ್ರೀಡೆ ಆರೋಗ್ಯವನ್ನು ಬಲಪಡಿಸುತ್ತದೆ. ನಾವು ನಮ್ಮ ದೇಶದಲ್ಲಿ ಅನೇಕ ಬಗೆಯ ಕ್ರೀಡೆಗಳನ್ನು ನೋಡಿದ್ದೇವೆ ಹಾಗೇ ಎಲ್ಲಾ ಕ್ರೀಡೆಗಳಿಂದ ಅಲ್ಲವಾದರು ಕೆಲವು ಕ್ರೀಡೆಗಳನ್ನು ಆಡುವುದರಿಂದ ನಮ್ಮ ಆರೋಗ್ಯದ ಮೇಲೆ ಸಕಾರತ್ಮಕ ಮತ್ತು ನಕಾರತ್ಮಕ ಪರಿಣಾಮವನ್ನು ಬೀರುತ್ತದೆ. ಕ್ರೀಡೆ ಕೆಲವು ವರ್ಷಗಳಿಂದ ಇರುವುದಲ್ಲ ಇದು ಸಾವಿರಾರು ವರ್ಷಗಳಿಂದ ಬಳಕೆಯಲ್ಲಿದೆ. ಕ್ರೀಡೆಯು ಸ್ಪರ್ಧಾತ್ಮಕ ಚಟುವಟಿಕೆ. ಈ ಚಟುವಟಿಕೆಯಿಂದ ಚೈತನ್ಯವನ್ನು ಪುನರುಜೀವನಗೊಳಿಸುತ್ತದೆ. ಆಸಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ವ್ಯಕ್ತಿಯಲ್ಲಿ ಸಂತೋಷದ ಹಾಮೊನ್ ಗಳನ್ನು ಉತ್ಪತ್ತಿ ಮಾಡುತ್ತದೆ.
ಕ್ರೀಡೆಯ ಶಕ್ತಿ:
ಕ್ರೀಡೆ ಒಂದು ಉತ್ತಮ ಸಾಧನ ಏಕೆಂದರೆ ಅದು ಮನಸ್ಸು ಮತ್ತು ದೇಶವನ್ನು ತನ್ನ ಬಳಿ ಹಿಡಿದಿಟ್ಟುಕೊಳ್ಳಲು ಸಹಾಯಕ. ವ್ಯಾಯಮ, ಯೋಗ ಗಳ ಮೂಲಕ ನಾವು ಮನಸ್ಸನ್ನು ಕೇಂದ್ರೀಕರಿಸಬಹುದು. ಕ್ರೀಡೆಗಳಲ್ಲಿ 2 ವಿಧ ಅವುಗಳೆಂದರೆ ಒಂದು ಒಳಾಂಗಣ ಕ್ರೀಡೆ, ಇನೊಂದು ಹೊರಂಗಣ ಕ್ರೀಡೆ. ಇವು ಕ್ರೀಡೆಯ ವಿಧ ಬಿಟ್ಟರೆ ಎರಡರಲ್ಲಿಯು ಬುದ್ದಿ ಮತ್ತು ದೇಹದ ಸಹಕಾರ ತುಂಬ ಮುಖ್ಯ.
- ದೇಹ ಸಮಥ್ಯ ಹೆಚ್ಚುತ್ತದೆ.
- ಬುದ್ದಿ ಮತ್ತು ದೇಹಕ್ಕೆ ಉತ್ಸಹ.
- ಮಾನಸಿಕ ಆರೋಗ್ಯ.
- ಆತ್ಮಸ್ಥರ್ಯ.
- ಹುಮ್ಮಸ್ಸು
- ಸೋಮರಿತನದ ನಿರ್ಮೂಲನೆ.
ಕ್ರೀಡೆ ನಮ್ಮ ಆರೋಗ್ಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ:
ಕ್ರೀಡೆಯಿಂದ ನಾವು ನಮ್ಮ ಆರೋಗ್ಯವನ್ನು ಸುಧಾರಿಸಬಹುದು ಅದೇನೆಂದರೆ ನಾವು ಯಾವ ರೀತಿಯ ಕ್ರೀಡೆ ಆಯ್ಕೆ ಮಾಡುತ್ತೆವೆ ಎನ್ನುವುದು ಅತ್ಯಂತ ಮುಖ್ಯವಾದ ವಿಷಯ. ನಾವು ಮೆಂಟಲ್ ಗೇಮ್ಸ್ ಆಡುವುದರಿಂದ ನಮ್ಮ ಅಲೋಚನ ಶಕ್ತಿ ಹೆಚ್ಚುತ್ತದೆ. ಮತ್ತು ನಾವು ಫಿಜಿಕಲ್ ಗೇಮ್ಸ್ ಆಡುವುದರಿಂದ ನಮ್ಮ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಲು ಸಹಕಾರಿ ಯಾಗುತ್ತದೆ. ದೈಹಿಕ ವ್ಯಾಯಮ ಮೂಲಕ ಯಾವುದೇ ವ್ಯಕ್ತಿಯು ಆರೋಗ್ಯಕರ, ಬಲಶಾಲಿ,ಮತ್ತು ಯಾವಾಗಲೂ ಉತ್ತಮ ಆರೋಗ್ಯವನ್ನು ಹೊಂದಲು ಬಯಸುತ್ತಾರೆ.
- ಕ್ರೀಡೆಯಿಂದ ಹೃದಯ ಬಡಿತ ವೇಗವಾಗುತ್ತದೆ.
- ಕ್ರೀಡೆ ಸಾಹಸ ಮನೋಭಾವ ಮುಡಿಸುತ್ತದೆ.
- ರೋಗನಿರೋಧಕ ಶಕ್ತಿ.
- ತೂಕ ಕಡಿಮೆ ಮಾಡಿಕೊಳ್ಳಲು ಉಪಯುಕ್ತ.
- ಕ್ರೀಡೆಯಿಂದ ಮೆದುಳಿನ ಕೆಲಸ ಹೆಚ್ಚಾತ್ತದೆ.
- ರಕ್ತಪರಿಚಲನೆಯು ಹೆಚ್ಚಾಗುತ್ತದೆ.
- ಸಕಾರತ್ಮಕನಾಲೋಚನೆಗಳನ್ನು ಹೆಚ್ಚಿಸುವ ಮೂಲಕ ನಕಾರತ್ಮಕ ಅಲೋಚನೆಗಳನ್ನು ತೊಡೆದು ಹಾಕುತ್ತದೆ.
- ಉಸಿರಾಟದ ಸಮಸ್ಯೆಯಿಂದ ಅದಷ್ಟು ದೂರವಿರಿಸುತ್ತದೆ.
ಕ್ರೀಡೆ ಎಲ್ಲಾ ರೋಗಗಳಿಗು ಮದ್ದಿನಂತೆ ಕಾರ್ಯನಿರ್ವಹಿಸುತ್ತದೆ. ಈಜುವುದು, ಓಡುವುದು, ಸೈಕ್ಲಿಂಗ್, ಜಿಮ್ ಮುಂತಾದವುಗಳಿಂದ ನಾವು ಎಲ್ಲಾ ಸ್ನಾಯುಗಳಿಗೆ ವ್ಯಾಯಮವನ್ನು ನೀಡುತ್ತದೆ. ಇದರಿಂದ ನಮ್ಮ ದೇಹವನ್ನು ಸದೃಢವಾಗಿಸಿಕೊಳ್ಳಬಹುದು.
ಉಪಸಂಹಾರ:
ನಾವು ಯಾವುದೇ ಕ್ರೀಡೆಯನ್ನು ತೆಗೆದುಕೊಂಡರು ಅದರಲ್ಲಿ ಮನುಷ್ಯನಿಗೆ ಉಪಯುಕ್ತವಾಗುವ ಆಸನಗಳೆ ಇರುತ್ತವೆ. ಇದರಿಂದ ಮನುಷ್ಯ ಇನ್ನು ಜಾಗರುಕನಾಗಿರ ಬಹುದು. ಕ್ರೀಡೆಗೆ ಮನುಷ್ಯ ನಷ್ಟೆ ಇತಿಹಾಸ ಇದ್ದರು ಇರವಹುದು ಮನುಷ್ಯ ಹುಟ್ಟಿಬಂದ ಹಾಗೆ ಕ್ರೀಡೆಯು ಬೆಳೆದು ಬಂದಿದೆ. ಇದರಿಂದಲೆ ಮನುಷ್ಯ ಮತ್ತು ಕ್ರೀಡೆ ಒಂದಕ್ಕೊಂದು ಸಹಯಾಕವಾಗಿದೆ.
FAQ:
ಕ್ರೀಡೆಯಲ್ಲಿ ಎಷ್ಟು ವಿಧ?
2
ವಿಶ್ವ ಕ್ರೀಡ ದಿನ?
ಏಪ್ರೀಲ್ 6
ಕ್ರೀಡೆಯಿಂದ ಆಗುವ ಪ್ರಯೋಜನ?
1. ರೋಗ ನಿರೋಧಕ ಶಕ್ತಿ
2. ದೇಹದ ತೂಕ ಕಡಿಮೆಗೆ ಸಹಯಾಕ
ಇತರೆ ವಿಷಯಗಳು:
ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ
ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ