ರೈತ ದೇಶದ ಬೆನ್ನೆಲುಬು ಪ್ರಬಂಧ | Raitha Deshada Bennelubu Prabandha in Kannada

0

ರೈತ ದೇಶದ ಬೆನ್ನೆಲುಬು ಪ್ರಬಂಧ, Raitha Deshada Bennelubu Prabandha Backbone of the Farmer Country Essay in Kannada

ರೈತ ದೇಶದ ಬೆನ್ನೆಲುಬು ಪ್ರಬಂಧ

ನಮಸ್ತೆಗಳೆಯರೇ, ನಾವಿಂದು ನಮ್ಮ ದೇಶದ ರೈತರು ನಮ್ಮ ದೇಶದ ಬೆನ್ನೆಲುಬು ಎಂದು ಚರ್ಚೆ ಮಾಡುತ್ತಿದ್ದೆವೆ. ಯಾವುದೇ ಒಂದು ದೇಶದಲ್ಲಿ ರೈತರ ಸಂಖ್ಯೇಯ ಮೇಲೆ ಆ ದೇಶದ ಶಕ್ತಿ ನಿರ್ಧಾರವಾಗುತ್ತದೆ. ಹಾಗಾಗಿ ನಾವು ಈ ಲೇಖನದಲ್ಲಿ ಚರ್ಚೆ ಮಾಡೋಣ. ಹಾಗಾಗಿ ನಾವಿಂದು ರೈತ ಎಂದರೆ ಯಾರು, ಅವರ ಕಾರ್ಯ ಏನು, ಅವರಿಂದ ದೇಶಕ್ಕೆ ಅಗುವ ಉಪಯೋಗ ಏನು, ಎನ್ನುವ ಬಗ್ಗೆ ಚರ್ಚೆ ಮಾಡೋಣ.

 Raitha Deshada Bennelubu Prabandha in Kannada
Raitha Deshada Bennelubu Prabandha in Kannada

ಪೀಠಿಕೆ:

ನಮ್ಮ ದೇಶಕ್ಕೆ ರೈತನೆ ಬೆನ್ನೆಲುಬು ಅವನಿಂದ ಮಾತ್ರ ದೇಶವನ್ನು ಮುನ್ನಡೆಸಲು ಮತ್ತು ದೇಶದ ಅಭಿವೃದ್ಧಿಯ್ ಸಾಧ್ಯ. ಭಾರತವನ್ನು ಪ್ರಾಚೀನ ಕಾಲದಿಂದಲು ಕೃಷಿ ಪ್ರಧಾನ ದೇಶ ಎಂದು ಕರೆಯಾಲಾಗಿದೆ ಇಲ್ಲಿನ ಬಹುಪಾಲು ಜನರ ಉದ್ಯೋಗವು ಕೃಷಿಯಾಗಿದೆ. ಇವರು ಕೃಷಿ ಮಾಡುವುದು ಇವರ ಮುಖ್ಯ ಕಸುಬು. ಗಡಿಯಲ್ಲಿ ನಿಂತು ಸೈನಿಕ ನಮ್ಮನ್ನು ಕಾಪಡುತ್ತಿದ್ದರೆ ರೈತ ಅಂತಹ ಸೈನಿಕನಿಗೆ ಅನ್ನವನ್ನು ಅಂದರೆ ಆಹಾರವನ್ನು ನೀಡುವ ಕೆಲಸವನ್ನು ಮಾಡುತ್ತಾನೆ. ಇದಕ್ಕಾಗಿಯೆ ನಾವು ರೈತನನ್ನು ನಮ್ಮ ದೇಶದ ಆಸ್ತಿ ಎಂದು ಕರೆಯುವುದು. ಇಂತಹ ರೈತನನ್ನು ವಿಶ್ವದಲ್ಲಿಯೇ ಶ್ರಮ ಜೀವಿ ಎಂದು ಕರೆಯಾಲಾಗಿದೆ.

ರೈತ ಎಂದರೆ ಯಾರು?

ಒಂದು ದೇಶದಲ್ಲಿ ಇತರಿಗಾಗಿ ತನ್ನ ಆಸೆ, ಸಿರಿತನವನ್ನು ಮರೆತು ಸರಳವಾಗಿ ಜೀವನ ಮಾಡುವ ಮತ್ತು ಹೆಚ್ಚು ಪ್ರತಿಭಾವಂತರನ್ನು ನಾವು ರೈತ ಎಂದು ಕರೆಯುತ್ತೇವೆ.

ಪ್ರತಿದಿನ ನಾವು ಆಹಾರವನ್ನು ಸೇವಿಸುವಾಗ ನೆನೆಯ ಬೇಕಾದ ವ್ಯಕ್ತಿಗಳೆಂದರೆ ಅವರು ಒಂದು ರೈತ ಮತ್ತು ಸೈನಿಕರನ್ನು ರೈತನ ಪರಿಶ್ರಮದಿಂದ ಮಾತ್ರನಾವು ಅನ್ನ ತಿನ್ನಲು ಸಾಧ್ಯ ಅದಕ್ಕಾಗಿಯೇ ನಮ್ಮ ಪುರಾಣಗಳಲ್ಲಿಯೇ ಹೇಳಿರುವಂತೆ “ಅನ್ನದಾತೋ ಸುಖಿಭವ” ಅನ್ನವನ್ನು ನೀಡಿದವರು ಎಂದು ಸುಖವಾಗಿ ಇರಬೇಕು. ಇನ್ನೊಬ್ಬ ಸೈನಿಕ ಅವನಿಲ್ಲ ವಾದರೆ ನಾವು ಸ್ವಾತಂತ್ರ್ಯವಾಗಿ ಬದುಕಲು ಅಸಾಧ್ಯವಿಲ್ಲ. ಹಾಗಾಗಿ ನಮ್ಮ ಜೀವ ಮತ್ತು ಜೀವನಕ್ಕೆ ಇವರೇ ಮುಖ್ಯ ಕಾರಣರು ಎನ್ನಬಹುದು.

ರೈತನಿಂದ ದೇಶಕ್ಕೆ ಆಗುವ ಪ್ರಯೋಜನಗಳೆನು:

ರೈತನೇ ಇಲ್ಲವಾದರೆ ಈ ದೇಶದ ಅಭಿವೃಧ್ಧಿ ಸಾಧ್ಯವಿಲ್ಲ ಹಾಗಾಗಿ ರೈತ ತುಂಬ ಮುಖ್ಯ.

  1. ದೇಶದ ಎಲ್ಲಾರಿಗೂ ಆಹಾರ.

ರೈತ ಕಷ್ಟ ಪಟ್ಟು ಬೆಳೆಯನ್ನು ಬೆಳೆಯುವುದರಿಂದಲೆ ನಾವು ಇಂದು ನೆಮ್ಮದಿಯಿಂದ ಊಟ ಮಾಡಲ್ ಸಾಧ್ಯ ಇಲ್ಲವಾದರೆ ನಾವು ಪ್ರತಿದಿನ ಹಸಿವಿನಿಂದ ಬಳಲ ಬೇಕಾಗುತ್ತದೆ. ಹಾಗಾಗಿ ರೈತನಿಲ್ಲದೆ ದೇಶದ ಯಾರು ಬದುಕಲ್ ಸಾ‍ಧ್ಯವಿಲ್ಲ. ಪ್ರತಿಯೊಂದು ಬೆಳೆಯನ್ನು ಬೆಳೆಯುತ್ತಾನೆ ಅಂದರೆ ಅಕ್ಕಿ, ರಾಗಿ, ತೊಗರಿ, ಇನ್ನೂ ಅನೇಕ ಧಾನ್ಯಗಳನ್ನು ಬೆಳೆಯುವ ರೈತ ದೇಶಕ್ಕೆ ಅನ್ನ ನೀಡ ಬಲ್ಲ.

2. ಆರ್ಥಿಕ ಸ್ಥಿತಿಯ ಸುಧಾರಣೆ.

ದೇಶ ಒಂದು ಆರ್ಥಿಕವಾಗಿ ಸುಧಾರಣೆ ಹೊಂದಲು ಮುಖ್ಯ ಮತ್ತು ಮೊದಲ ಕಾರಣ ಎಂದರೆ ಅದು ಕೇವಲ ರೈತರಿಂದ ಸಾಧ್ಯ. ಉತ್ತಮ ರೀತಿಯಲ್ಲಿ ಬೆಳೆಗಳನ್ನು ರೈತ ಬೆಳೆಯುತ್ತಿದ್ದಾನೆ ಎಂದರೆ ಆ ದೇಶದಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ. ಆದೆ ರೈತ ಬೆಳೆಯನ್ನೆ ಬೆಳೆಯದೆ ಸುಮ್ಮನೆ ತನ್ನ ಪಡಿಗೆ ತಾನು ಇದ್ದರೆ ಆದೇಶದ ಸ್ಥಿತಿ ಅತ್ಯಂತ ಅವನತಿಯತ್ತ ಹೋಗುವುದು ಕಂಡಿತ.

3. ಬೇರೆ ದೇಶಗಳ ಮೇಲಿನ ಅವಲಂಬನೆಯಿಂದ ಮುಕ್ತ.

ಹೌದು ತಾನು ಕೃಷಿಯನ್ನು ಮಾಡುವುದಿಲ್ಲ ಎಂದು ಸಿಟ್ಟನ್ನು ಮಾಡಿದರೆ ಯಾವುದೇ ದೇಶ ಇನ್ನೊಂದು ದೇಶದ ಮೇಲೆ ಅವಲಂಬನೆಯನ್ನು ಮಾಡಬೇಕಾಗುತ್ತದೆ. ಆದೇ ರೈತ ತನ್ನ ಕೆಲಸವನ್ನು ಮಾಡಿದರೆ ನಾವೇ ಬೇರೆ ದೇಶಕ್ಕೆ ಆಹಾರವನ್ನು ನೀಡಬಹುದು. ಉದಾಹರಣೆಗೆ: ಭಾರತ ಪಾಕಿಸ್ತಾನ ಮತ್ತು ಅಫಘಾನಿಸ್ತಾನಗಳಿಗೆ ಆಹಾರ ಪಧಾರ್ಥಗಳ ಸರಬರಾಜನ್ನು ಮಾಡುತ್ತಿರುವುದು.

4. ಹೊಸ ಹೊಸ ಮಾದರಿ ಬೆಳೆಗಳ ಪರಿಚಯ.

ರೈತ ತನ್ನ ಇಡೀ ಜೀವನವನ್ನು ಬೇರೆಯವರಿಗಾಗಿಯೆ ಮುಡಿಪಾಗಿಸಿದ್ದಾನೆ. ಅಂತಹ ರೈತರು ಹೊಸ ಹೊಸ ಮಾದರಿಯ ಮೂಲಕ ಕೃಷಿ ಮೂಲ ಹೆಚ್ಚಿನ ಸಾಧನೆ ಮಾಡಲು ಸಹಕಾರಿಯಾಗಿದೆ. ಇದರಿಂದ ದೇಶಕ್ಕೂ ಕೂಡ ಉಪಯೋಗ ವಾಗುತ್ತದೆ ಮತ್ತು ರೈತನಿಗು ಹೌದು. ಇದರಿಂದ ಅಧಿಕ ಇಳುವರಿಯನ್ನು ರೈತ ತನ್ನದಾಗಿಸಿಕೊಳ್ಳ ಬಹುದು.

ರೈತನ ಸಮಸ್ಯೆಗಳು:

ರೈತ ಹುಟ್ಟಿನಿಂದ ಕೊನೆಯವರೆಗು ಕಷ್ಟವನ್ನು ಅನುಭವಿಸುತ್ತಾನೆ. ಅದರೆ ಅದನ್ನು ಹೇಳಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ಮುಖ್ಯ ಕಾರಣ ಅವನ ಪರಿಸ್ಥಿತಿಗಳು ಅವನ್ನು ಎಷ್ಟು ನಮ್ಮ ಹೆಮ್ಮೆ ಎಂದರು ಅವನ ಕಷ್ಟಗಳು ಅವನಿಗೆ ಗೊತ್ತು.

  1. ಆರ್ಥಿಕ ಸಮಸ್ಯೆ.

ರೈತನ ಸಮಸ್ಯೆಗಳು ಅನೇಕ ಅದನ್ನು ಯಾರು ಹೇಳಲು ಸಾಧ್ಯವಿಲ್ಲ ಅದು ಕೇವಲ ರೈತನಿಗೆ ಗೊತ್ತು. ಅವನು ಆರ್ಥಿಕವಾಗಿಯು ಸಬಲನಾಗಿರುವುದಿಲ್ಲ ಮತ್ತು ಅವನಲ್ಲಿ ಇರಲು ಮನೆಯು ಇರುವುದಿಲ್ಲ. ಅವನಿಗೆ ಬೇಕಾದ ಬೆಳೆಯನ್ನು ಬೆಳೆಯನ್ನು ಬೆಳೆಯಲು ಮೊದಲಿಗೆ ಬೇಕಾದ ಅಂಶ ಎಂದರೆ ಅದು ಕೇವಲ ಧನ ಸಹಾಯ ಇದರಿಂದ ಅವು ಅವನ ಇಚ್ಛೆಯ ಕಸುಬನ್ನು ಮಾಡಲ್ ಸಾಧ್ಯ ಅದರೆ ಇಲ್ಲಿ ಆರ್ಥಿಕತೆಯೇ ಹದಗೆಟ್ಟಿದೆ.

2. ಸಾಲದ ಸಮಸ್ಯೆ.

ಸಾಲ ಎಂದರೆ ಶೂಲ ಎಂಬ ಮಾತಿದೆ ಅದರಂತೆ ಸಾಲಕ್ಕೆ ಸಿಕ್ಕ ಮನುಷ್ಯ ತನ್ನ ಜೀವನವನ್ನು ಹಾಳುಮಾಡಿಕೊಳ್ಳುವುದು ಕಂಡಿತ. ರೈತ ಮುಖ್ಯವಾಗಿ ಸಾಲ ಮಾಡಲು ಕಾರಣ ಎಂದರೆ ಅದು ಬೆಳೆ ಸಾಲ ಬೆಳೆ ಬೆಳೆಯಲು ಸಾಲವನ್ನು ಮಾಡಿಕೊಳ್ಳುತ್ತಾನೆ ಅದರೆ ಈ ಸಾಲವನ್ನು ತಿರಿಸಲು ಆಗದೆ ಇರುವುದು ಮುಖ್ಯ ಸಮಸ್ಯೆಯಾಗುತ್ತದೆ. ಸಾಲದ ಹೊರೆಯ್ನನು ತಡೆಯಲಾಗದೆ ಕೊನೆಗೆ ಆತ್ಮಹತ್ಯೆಗೆ ಶರಣಗುತ್ತಾರೆ.

3. ಸರಿಯಾದ ಕಾಲಕ್ಕೆ ಮಳೆಯಾಗದೆ ಇರುವುದು.

ಇದು ರೈತನ ಮುಖ್ಯ ಸಮಸ್ಯೆ ಅವನು ಎನೋ ಈ ಸಲ ಮಳೆ ಬರುತ್ತದೆ ಎಂದು ಬೆಳೆ ಬೆಳೆಯಲು ಪ್ರಾರಂಭಿಸಿರುತ್ತಾನೆ ಆದರೆ ಸಕಾಲದಲ್ಲಿ ಮಳೆ ಬರದ ಕಾರಣ ಆ ಬೆಳೆ ನಾಶವಾಗುತ್ತದೆ ಅಥವಾ ಮಳೆ ಬಂದರು ಹೆಚ್ಚಿನ ಮಳೆಯಾಗುವುದರಿಂದ ಬೆಳೆನಾಶವಾಗುತ್ತದೆ.

4. ಅತಿವೃಷ್ಠಿ- ಅನಾವೃಷ್ಠಿ ಸಮಸ್ಯೆ.

ರೈತ ಒಂದು ಬೆಳೆ ಬೆಳೆಯಲು ಎಷ್ಟು ಸಮಯಬೇಕು ಆದರೆ ಆ ಬೆಳೆಯ ನಾಶಕ್ಕೆ ಕೆಲವು ಗಂಟೆಗಳೆ ಸಾಕು. ಅತಿಯಾದ ಮಳೆ, ಅತಿಯಾದ ಬರಗಾಲ, ಅತಿಯಾದ ಬೇಸಿಗೆ, ಅತಿಯಾದ ಚಳಿ ಇವೇಲ್ಲವು ರೈತನಿಗೆ ಸಮಸ್ಯೆಯಾಗಿದೆ. ರೈತನ ಜೀವನ ಅತಿ ಕಷ್ಟಕರವಾಗಿದೆ. ದೇಶಕ್ಕೆ ರೈತ ಎಷ್ಟು ಮುಖ್ಯವೋ ಅಷ್ಟೇ ರೈತನಿಗೆ ಪರಿಸರ, ಕಾಡು, ಗುಡ್ಡ- ಬೆಟ್ಟ ಎಲ್ಲಾವು ಮುಖ್ಯ.

ಉಪಸಂಹಾರ:

ನಾವು ರೈತನ ಬಗ್ಗೆ ತಿಳಿದಿರುವುದು ಕೇವಲ 10% ಆದರೆ ತಿಳಿಯಾ ಬೇಕಾಗಿರುವುದು ಇನ್ನು ಬಹಳ ಇದೆ. ಪ್ರತಿಯೊಬ್ಬ ವ್ಯಕ್ತಿಯು ರೈತನನ್ನು ಗೌರವದಿಂದ ನೋಡಬೇಕು. ಅವನೆ ನಮ್ಮನು ಕಾಪಾಡುವ ಶಕ್ತಿ. ಅವನು ತನ್ನ ಎಲ್ಲಾ ಕನಸುಗಳನ್ನು ಮರೆತು ತನ್ನ ಜೀವವನ್ನು ಧಣಿಸಿ ನಮಗಾಗಿ ಕಷ್ಟಪಡುತ್ತಿದ್ದಾನೆ ಅಂತಹ ಜೀವಕ್ಕೆ ನಾವು ನಮ್ಮ ಕೈಯಲ್ಲಿ ಆದ ಸಹಾಯವನ್ನು ಮಾಡೋಣ. ಒಂದು ಅಗುಳು ಅನ್ನವನ್ನು ವ್ಯರ್ಥ ಮಾಡದೆ ಅನ್ನದ ಹಸಿರುವುವರಿಗೆ ಹಂಚೋಣ ಎಂದು ಈ ಲೇಖನದ ಮೂಲಕ ತಿಳಿಯೋಣ.

FAQ:

ರೈತ ಎಂದರೆ ಯಾರು?

ಒಂದು ದೇಶದಲ್ಲಿ ಇತರಿಗಾಗಿ ತನ್ನ ಆಸೆ, ಸಿರಿತನವನ್ನು ಮರೆತು ಸರಳವಾಗಿ ಜೀವನ ಮಾಡುವ ಮತ್ತು ಹೆಚ್ಚು ಪ್ರತಿಭಾವಂತರನ್ನು ನಾವು ರೈತ ಎಂದು ಕರೆಯುತ್ತೇವೆ.

ಕೃಷಿಯ ಪಿತಾಮಹ ಯಾರು?

ನಾರ್ಮನ್‌ ಅರ್ನೆಸ್ಟ್‌ ಬೋರ್ಲಾಗ್

ವಿಶ್ವದಲ್ಲಿಯೇ ಅತಿ ಹೆಚ್ಚು ಕೃಷಯನ್ನು ಉತ್ಪದಿಸುವ ಮತ್ತು ರಫ್ತು ಮಾಡುವ ದೇಶ ಯಾವುದು?

ಚೀನಾ

ಇತರೆ ವಿಷಯಗಳು:

ರಾಷ್ಟ್ರೀಯ ಹಬ್ಬಗಳ ಮಹತ್ವ ಪ್ರಬಂಧ

ಗ್ರಾಮ ಸ್ವರಾಜ್ಯ ಪ್ರಬಂಧ

ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಪ್ರಬಂಧ

ಸ್ವಾಮಿ ವಿವೇಕಾನಂದರ ಜೀವನ ಚರಿತ್ರೆ ಪ್ರಬಂಧ

Leave A Reply

Your email address will not be published.