ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಪ್ರಬಂಧ | Sir M Visvesvaraya Essay in Kannada

0

ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಪ್ರಬಂಧ, Sir M Visvesvaraya Essay Sir M Visvesvaraya Bagge Prabandha in kannada

ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಪ್ರಬಂಧ

ನಮಸ್ತೆ ಸ್ನೇಹಿತರೆ, ನಾವು ಈ ಪ್ರಬಂಧದಲ್ಲಿ ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ತಿಳಿಸಿದ್ದೆವೆ. ವಿಶ್ವೇಶ್ವರಯ್ಯ ಅವರು ಒಬ್ಬ ಮಹಾನ್‌ ವ್ಯಕ್ತಿ ಅವರ ಬಗ್ಗೆ ತಿಳಿಯುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಅವರ ಆರಂಭಿಕ ಜೀವನ ಮತ್ತು ಶಿಕ್ಷಣ, ವೃತ್ತಿ, ಅವರ ಕೊಡುಗೆ ಮತ್ತು ಕೊಡುಗೆಗೆ ಲಭಿಸಿರುವ ಪ್ರಶಸ್ತಿಗಳು ಇದೆಲ್ಲದರ ಬಗ್ಗೆ ತಿಳಿಯಲು ಈ ಪ್ರಬಂಧವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

Sir M Visvesvaraya Essay In Kannada
Sir M Visvesvaraya Essay In Kannada

ಪೀಠಿಕೆ:

ಸರ್ ಎಂ ವಿಶ್ವೇಶ್ವರಯ್ಯ ಒಬ್ಬ ಭಾರತೀಯ ಇಂಜಿನಿಯರ್‌ ಆಗಿದ್ದರು, ವಿದ್ವಾಂಸರು ಆಗಿದ್ದರು ಮತ್ತು ರಾಜಕಾರಣಿ ಕೂಡ ಹೌದು. ಮೈಸೂರಿನ ದಿವಾನ್‌ 1912-1918 ರ ವರೆಗೆ ಕಾರ್ಯ ನಿರ್ವಹಿಸಿದ್ದರು. ಇವರು ಭಾರತದ ಪ್ರಸಿದ್ದಿಇಂಜಿನಿಯರ್‌ ಆಗಿದ್ದರು ಆದ್ದರಿಂದ ಅವರ ಜನ್ಮ ದಿನದ ನೆನಪಿಗಾಗಿ ಸೆಪ್ಟೆಂಬರ್‌ 15 ರಂದು ಇಂಜಿನಿಯರ್‌ ದಿನವನ್ನು ಆಚರಿಸಲಾಗುತ್ತದೆ. ಇವರಿಗೆ ಗಣರಾಜ್ಯದ ಅತ್ಯುನ್ನತ ಗೌರವ ಭಾರತ ರತ್ನ ನೀಡಲಾಗಿದೆ ಮತ್ತು ಗಾಲ ಎಂಬ ಉನ್ನತ ಗೌರವವನ್ನು ಕೂಡ ಪಡೆದು ಕೊಂಡಿದ್ದರು. ಮೈಸೂರಿನ ಕೃಷ್ಣರಾಜಸಾಗರ ಆಣೆಕಟ್ಟು ನಿರ್ಮಣದ ಮುಖ್ಯ ಇಂಜಿನಿಯರ್‌ ಆಗಿ ಕಾರ್ಯ ನಿರ್ವಹಿಸಿದ್ದರು. ಹೈದರಾಬಾದ್‌ನ ಪ್ರವಾಹ ರಕ್ಷಣೆಗೆ ಪ್ರಮುಖ ಕಾರಣರಾಗಿದ್ದರು.

ವಿಶ್ವೇಶ್ವರಯ್ಯ ಆರಂಭಿಕ ಜೀವನ ಮತ್ತು ಶಿಕ್ಷಣ:

ಸರ್ ಎಂ ವಿಶ್ವೇಶ್ವರಯ್ಯ ಅವರು 15 ಸೆಪ್ಟೆಂಬರ್‌ 1861 ರಲ್ಲಿ ಜನಿಸಿದರು. ಇವರು ಬ್ರಾಹ್ಮಣ ಕುಟುಂಬದವರಾಗಿದ್ದರು.ಇವರ ತಂದೆಯ ಹೆಸರು ಮೋಕ್ಷಹುಂಡಂ ಶ್ರೀನಿವಾಸ ಶಾಸ್ತ್ರಿ ಇವರುಸಂಸ್ಕೃತ ವಿದ್ವಾಂಸರಾಗಿದ್ದರು, ತಾಯಿಯ ಹೆಸರು ವೆಂಕಟಲಕ್ಷಮ್ಮ. ವಿಶ್ವೇಶ್ವರಯ್ಯನವರ 12ನೇ ವಯಸ್ಸಿನಲ್ಲೆ ಅವರ ತಂದೆಯನ್ನು ಕಳೆದುಕೊಂಡರು. ಇವರ ಆರಂಭಿಕ ಶಿಕ್ಷಣವನ್ನು ಚಿಕ್ಕಬಳ್ಳಾಪುರದ ಪ್ರಾಥಮಿಕ ಶಾಲೆಯಲ್ಲಿ ಮುಗಿಸಿದರು ನಂತರ ಪ್ರೌಢಶಾಲೆಯನ್ನು ಬೆಂಗಳೂರಿನಲ್ಲಿ ಓದಿದರು. ನಂತರ ಪೂನಾದ ಸೈನ್ಸ್‌ ಕಾಲೇಜಿನಲ್ಲಿ ಇಂಜಿನಿಯರ್‌ ಓದಿದರು, ಎಲ್ಲಾ ಪರೀಕ್ಷೆಗಳಲ್ಲಿ ಪ್ರಥಮ ಸ್ಥಾನ ಪಡೆದರು. ವಿಶ್ವೇಶ್ವರಯ್ಯನವರ ಪೂರ್ಣ ಹೆಸರು ಮೋಕ್ಷಹುಂಡಂ ವಿಶ್ವೇಶ್ವರಯ್ಯ. ಇವರು ಒಳ್ಳೆಯ ರಾಜನೀತಿಜ್ಞರು ಆಗಿದ್ದರು.ಬೆಂಗಳೂರಿನ ಸೆಂಟ್ರಲ್‌ ಕಾಲೇಜಿನಲ್ಲಿ ಬ್ಯಾಚುಲರ್‌ ಆಫ್‌ ಆರ್ಟ್ಸ್‌ ಪದವಿಯನ್ನು ಪಡೆದರು.‌ ಇವರು ಓದಿನ ಸಮಯದಲ್ಲಿ ಶಿಕ್ಷಕರಾಗಿಯು ಸೇವೆ ಸಲ್ಲಿಸಿದ್ದರು.

ವಿಶ್ವೇಶ್ವರಯ್ಯ ವೃತ್ತಿ :

ಇಂಜಿನಿಯರಿಂಗ್‌ ಮುಗಿಸಿದ ಇವರನ್ನು ಸರ್ಕಾರ ನಾಸಿಕ್‌ ಜಿಲ್ಲೆಯಲ್ಲಿ ಸಹಾಯಕ ಇಂಜಿನಿಯರ್‌ ಆಗಿ ನೇಮಿಸಿತು. ಡೆಕ್ಕನ್‌ನಲ್ಲಿ ನೀರಾವರಿ ವ್ಯವಸ್ಥೆಯನ್ನು ಜಾರಿಗೆತಂದರು. ಸರ್ಕಾರ ಇವರನ್ನು ನೀರು ಸರಬರಾಜು ಮತ್ತು ಒಳಚರಂಡಿ ವ್ಯವಸ್ಥೆಅಧ್ಯಯನ ಮಾಡಲು ಅಡೆನ್‌ಗೆ ಕಳುಹಿಸಿತು. ಅದರ ಬಗ್ಗೆ ಅವರು ಸಿದ್ದಪಡಿಸಿದ ಯೋಜನೆಯನ್ನು ಏಡನ್‌ನಲ್ಲಿ ಯಶಸ್ವಿಯಾಗಿ ಜಾರಿಗೊಳಿಸಲಾಯಿತು. ವಿಶ್ವೇಶ್ವರಯ್ಯ ಕೃಷ್ಣರಾಜಸಾಗರ ಆಣೆಕಟ್ಟು ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖನೆ ಮೈಸೂರು ಸ್ಯಾಂಡಲ್‌ ಆಯಿಲ್‌, ಸೊಪ್‌ ಫ್ಯಾಕ್ಟರಿಗಳು, ಬ್ಯಾಂಕ್‌ ಆಫ್‌ ಮೈಸೂರ್‌, ವಿಶ್ವವಿದ್ಯಾನಿಲಯ ಇನ್ನು ಮುಂತಾದ ಯೋಜನೆಗಳನ್ನು ಜಾರಿಗೆ ತಂದರು.1894 ರಲ್ಲಿ ಸಕ್ಖರ್‌ ಆಣೆಕಟ್ಟು ನಿರ್ಮಿಸಿದರು, ನೀರಾವರಿ ವ್ಯವಸ್ಥೆಯನ್ನು ಜಾರಿಗೊಳಿಸಿದರು.

ಆಣೆಕಟ್ಟುಗಳಿಗೆ ಉಕ್ಕಿನ ಬಾಗಿಲುಗಳನ್ನು ಮಾಡಿ ನೀರು ವ್ಯರ್ಥವಾಗಿ ಹರಿಯದಂತೆ ವ್ಯವಸ್ಥೆ ಮಾಡಿದರು.ಇವರ ಈ ವ್ಯವಸ್ಥೆಗೆ ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದರು.ನಂತರ ಮೈಸೂರಿಗೆ ಮುಖ್ಯ ಇಂಜಿನಿಯರ್‌ ಆಗಿ ಸೇರಿದರು. ನಿರುಧ್ಯೋಗ ಹೊಗಲಾಡಿಸಿ ಮೂಲಭೂತ ವ್ಯವಸ್ಥೆಗಳನ್ನು ಸರಿಪಡಿಸುವುದರ ಬಗ್ಗೆ ಚಿಂತಿತರಾಗಿದ್ದರು. ನೀರಾವರಿ ವ್ಯವಸ್ಥೆಯ ಸಮಿತಿಯಲ್ಲಿ ಸದಸ್ಯರಾಗಿ ನೇಮಖ ಗೊಂಡರು.ಅವರ ಮಾತೃಭಾಷೆ ಕನ್ನಡದ ಮೇಲೆ ಅಪಾರ ಪ್ರೀತಿ ಹೊಂದಿದ್ದರು ಆದ್ದರಿಂದ ಕನ್ನಡ ಪರಿಷತ್ತನ್ನು ಸ್ಥಾಪಿಸಿದರು.

ವಿಶಾಖಪಟ್ಟಣಂ ಬಂದರನ್ನು ಸಮುದ್ರ ಕೊರತೆಯಿಂದ ಕೊರತೆಯಿಂದ ಅಭಿವೃದ್ದಿ ಪಡಿಸಿದರು, ಕಾವೇರಿ ನದಿಗೆ ಅಡ್ಡಲಾಗಿ ಕೆಆರ್‌ ಎಸ್‌ ಅಣೆಕಟ್ಟು ನಿರ್ಮಿಸಿದರು. ಇದು ಏಷ್ಯಾದ ಅತಿದೊಡ್ಡ ಜಲಾಶಯವಾಯಿತು. 90 ವರ್ಷದ ಆದರು ತನ್ನು ಕೆಲಸಕ್ಕೆ ನಿವೃತ್ತರಾಗದೆ ಉತ್ಸಹದಿಂದ ಮಾಡುತಿದ್ದರು.ಇವರನ್ನು ಆಧುನಿಕ ಮೈಸೂರಿನ ಪಿತಮಹ ಎನ್ನಲಾಗುತ್ತದೆ. ಇವರು ಅನೇಕ ಕೈಗಾರಿಕ ಉದ್ಯಮಗಳಿಗೆ ದೊಡ್ಡ ಕೊಡುಗೆಯನ್ನು ನೀಡಿದ್ದರೆ.

ವಿಶ್ವೇಶ್ವರಯ್ಯ ಇವರಿಗೆ ನೀಡಿದ ಗೌರವ ಮತ್ತು ಪ್ರಶಸ್ತಿಗಳು:

1. 1915ವಿಶ್ವೇಶ್ವರಯ್ಯ ಬ್ರಿಟಿಷರಿಂದ ಕಮಾಂಡರ್‌ ಆಫ್‌ ದಿ ಆರ್ಡರ್‌ ಆಫ್‌ ದಿ ಇಂಡಿಯನ್‌ ಎಂಪೈರ್‌ ಅನ್ನು ಪಡೆದರು.

2.1955 ರಲ್ಲಿ ಸ್ವತಂತ್ರ ಭಾರತದ ಶ್ರೇಷ್ಠ ಗೌರವ ಭಾರತ ರತ್ನ ಪಡೆದರು.

3. 8 ವಿಶ್ವವಿದ್ಯಾನಿಲಯಗಳಿಂದ ಗೌರವ ಡಾಕ್ಟರೇಟ್‌ ಪದವಿ ಪಡೆದರು.

4. 1906 ಕೇಸರ್‌ ಎ ಹಿಂದ್‌ ಬಿರುದು, ಮುಂತಾದವು

ವಿಶ್ವೇಶ್ವರಯ್ಯ ಕೊಡುಗೆಗಳು:

 • ಕೃಷ್ಣರಾಜಸಾಗರ ಆಣೆಕಟ್ಟು ನಿರ್ಮಣ
 • ಮೈಸೂರು ಸಾಬುನು ಕಾರ್ಖನೆ
 • ಕಬ್ಬಿಣ ಉಕ್ಕು ಕಾರ್ಖನೆ
 • ಮೈಸೂರು ವಿಶ್ವವಿದ್ಯಾನಿಲಯ
 • ಗ್ರಂಥಾಲಯ
 • ಮೈಸೂರು ಚೇಂಬರ್‌ ಆಫ್‌ ಕಾಮರ್ಸ್‌
 • ಕನ್ನಡ ಸಾಹಿತ್ಯ ಪರಿಷತ್
 • ಶ್ರೀ ಜಯಚಾಮರಾಜೇಂದ್ರ ವೃತ್ತಿಶಿಕ್ಷಣ
 • ಶ್ರೀಗಂಧದ ಎಣ್ಣೆ ಕಾರ್ಖನೆ
 • ಸೋಪ್‌ ಪ್ಯಾಕ್ಟರಿ
 • ಲೋಹದ ಕಾರ್ಖನೆ

ಉಪಸಂಹಾರ:

ವಿಶ್ವೇಶ್ವರಯ್ಯ ಅನೇಕ ತತ್ವ ಮೌಲ್ಯಗಳನ್ನು ಹೊಂದಿರುವ ಮತ್ತು ಪ್ರಾಮಾಣಿಕ ವ್ಯಕ್ತಿಯಾಗಿದ್ದರು. ದೇಶಕ್ಕೆ ಅವರು ನೀಡಿದ ಕೊಡುಗೆ ಅಪಾರ ಮತ್ತು ಅತ್ಯತ್ತಮ ಕೊಡುಗೆಗಳನ್ನು ನೀಡಿದ್ದರೆ.ಇದೆಲ್ಲದರ ಕಾರಣ ಅವರು ಇನ್ನು ನಮ್ಮ ನಾಡಿನ ಜನತೆಯ ನೆನಪಿನಲ್ಲಿ ಉಳಿದುಕೊಂಡಿದ್ದರೆ ಮತ್ತು ಇಲ್ಲರಿಗು ಸ್ಪೂರ್ತಿಯಾಗಿದ್ದರೆ.ಇವರು 1962 ಏಪ್ರಿಲ್‌ 14 ರಂದು ನಿಧನರಾದರು ಆಗ ಇವರಿಗೆ 102 ವಯಸ್ಸಾಗಿತ್ತು. ಗೌರವಾರ್ಥವಾಗಿ ಇವರ ಪ್ರತಿಮೆಯನ್ನು ಪುಣೆಯಲ್ಲಿ ಸ್ಥಾಪಿಸಲಾಗಿದೆ. ಇವರ ಕೊಡುಗೆ ನಾವೆಲ್ಲರು ಇಂದಿಗು ಎಂದೆಂದಿಗು ನೆನೆಯವಂತದದ್ದು.

FAQ

1.ಸರ್ ಎಂ ವಿಶ್ವೇಶ್ವರಯ್ಯ ಯಾವಾಗ ಜನಿಸಿದರು?

15 ಸೆಪ್ಟೆಂಬರ್‌ 1861 ರಲ್ಲಿ ಜನಿಸಿದರು.

2. ಸರ್ ಎಂ ವಿಶ್ವೇಶ್ವರಯ್ಯ ಅವರ ವೃತ್ತಿ ಯಾವುದು?

ಇಂಜಿನಿಯರ್‌ ಆಗಿದ್ದರು.

3.ವಿಶ್ವೇಶ್ವರಯ್ಯ ಯಾವಾಗ ನಿಧನರಾದರು?

1962 ಏಪ್ರಿಲ್‌ 14 ನಿಧನರಾದರು.

ಇತರೆ ವಿಷಯಗಳು

ಕುವೆಂಪು ಅವರ ಬಗ್ಗೆ ಪ್ರಬಂಧ

ಬಡತನದ ಬಗ್ಗೆ ಪ್ರಬಂಧ

ಮತದಾನ ಜಾಗೃತಿ ಪ್ರಬಂಧ

ಕರ್ನಾಟಕ ಏಕೀಕರಣ ಪ್ರಬಂಧ

Leave A Reply

Your email address will not be published.