ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ | Children’s Day Essay in Kannada
ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ, Children’s Day Essay in Kannada, Makkala Dinacharane Bagge Prabandha in kannada
ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ
ನಮಸ್ತೆ ಆತ್ಮೀಯ ಗೆಳೆಯರೆ, ನಾವಿಂದು ಚರ್ಚಿಸುತ್ತಿರುವ ವಿಷಯ ಮಕ್ಕಳ ದಿನಾಚರಣೆಯ ಬಗ್ಗೆ ಸುದೀರ್ಘವಾಗಿ ತಿಳಿಸಲಿದ್ದೇವೆ. ಮಕ್ಕಳ ದಿನಾಚರಣೆ ಏಕೆ ಆಚರಿಸಲಾಗುತ್ತದೆ, ಯಾವಾಗ ಆಚರಿಸಲಾಗುತ್ತದೆ ಹೇಗೆ ಆಚರಿಸುತ್ತಾರೆ ಅದರ ಮಹತ್ವ, ಮಕ್ಕಳ ದಿನಾಚರಣೆ ದಿನದ ಕಾರ್ಯಕ್ರಮಗಳೇನೂ ಎನ್ನುವ ಬಗ್ಗೆ ಈ ಪ್ರಬಂಧದಲ್ಲಿ ವಿವರಿಸಲಾಗಿದೆ. ಹಾಗಾಗಿ ಈ ಪ್ರಬಂಧವನ್ನು ಸಂಪೂರ್ಣವಾಗಿ ಓದಿ.
ಪೀಠಿಕೆ:
ಮಕ್ಕಳ ದಿನಾಚರಣೆಯು ಚಿಕ್ಕ ಮಕ್ಕಳಿಗಾಗಿ ಮಿಸಲಾಗಿದೆ. ಈ ದಿನವನ್ನು ಭಾರತ ದೇಶದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಸ್ಮರರ್ಣಾತದ ದಿನ ಅಥವಾ ಜನ್ಮದಿನದ ನೆನಪಿಗಾಗಿ ಆಚರಿಸಲಾಗಿದೆ. ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ನೆಹರುರವರಿಗೆ ಮಕ್ಕಳೆಂದರೆ ಬಹಳ ಪ್ರೀತಿ ಅದೇ ಕಾರಣಕ್ಕಾಗಿ ನೆಹರು ಜನ್ಮದಿನವನ್ನು ಮಕ್ಕಳ ದಿನಾಚರಣೆ ಎಂದು ಆಚರಿಸಲಾಗಿದೆ. ಈ ದಿನ ಮಕ್ಕಳ ಹಕ್ಕು ಮತ್ತು ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ದೇಶದಲ್ಲಿ ಬಾಲಾಕಾರ್ಮಿಕ ವ್ಯವಸ್ಥೆ ಮತ್ತು ಮಕ್ಕಳ ದೌರ್ಜನ್ಯ ಇನ್ನು ನೆಡೆಯುತ್ತಿದೆ. ಮಕ್ಕಳ ದಿನಾಚರಣೆ ಅದನೆಲ್ಲಾ ಕಂಡಿಸುತ್ತದೆ.
ಪಂಡಿತ್ ಜವಾಹರಲಾಲ್ ನೆಹರು ಬಗ್ಗೆ:
ನವೆಂಬರ್ 14, 1889ರಂದು ಅಲಹಾಬಾದ್ನಲ್ಲಿ ಜವಾಹರ ಲಾಲ್ ನೆಹರು ಜನಿಸಿದರು. ತಂದೆ ಶ್ರೀ ಮೋತಿಲಾಲ್ ನೆಹರು, ತಾಯಿ ಸ್ವರೂಪ್ ರಾಣಿ. ಖಾಸಗಿ ಶಿಕ್ಷಕರಿಂದ ಅವರು ಆರಂಭಿಕ ಶಿಕ್ಷಣವನ್ನುಮನೆಯಲ್ಲೇ ಪಡೆದರು. 15 ನೆ ವಯಸ್ಸಿನಲ್ಲಿಇಂಗ್ಲೆಂಡಿಗೆ ತೆರಳಿದರು. ನಂತರ ಅಲ್ಲಿಂದ ಹ್ಯಾರೊಗೆ ತೆರಳಿ ಕೇಂಬ್ರಿಡ್ಜ್ ವಿಶ್ವಿದ್ಯಾಲಯ ಸೇರಿದರು. ನೈಸರ್ಗಿಕ ವಿಜ್ಞಾನದಲ್ಲಿ ಪದವಿ ಪಡೆದರು. 1912ರಲ್ಲಿ ಭಾರತಕ್ಕೆ ಮರಳಿ ರಾಜಕೀಯಕ್ಕೆ ಸೇರಿದರು. ಬ್ರಿಟೀಷ್ ಆಳ್ವಿಕೆಗೆ ಒಳಗಾಗಿದ್ದ ರಾಷ್ಟ್ರಗಳ ಹೋರಾಟಗಳ ಕುರಿತು ವಿದ್ಯಾರ್ಥಿಯಾಗಿದ್ದಗಲೇ ಅವರು ಆಸಕ್ತಿ ಬೆಳೆಸಿಕೊಂಡಿದ್ದರು. ಅನಿವಾರ್ಯವಾಗಿ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಅವರನ್ನು ಕರೆತರಲಾಯಿತು..
1916ರಲ್ಲಿ ಅವರು ಮೊದಲ ಬಾರಿಗೆ ಮಹಾತ್ಮಾ ಗಾಂಧಿಯವರನ್ನು ಭೇಟಿಯಾಗಿ ಅವರಿಂದ ಅತೀವ ಸ್ಪೂರ್ತಿಗೊಳಗಾದರು. ಪ್ರತಾಪಗರ್ ಜಿಲ್ಲೆಯಲ್ಲಿ 1920ರಲ್ಲಿ ಮೊದಲ ಕಿಸಾನ್ ಯಾತ್ರೆಯನ್ನು ಆಯೋಜಿಸದರು. 1920-1922ರ ಅಸಹಕಾರ ಚಳುವಳಿಗೆ ಸಂಬಂಧಿಸಿದಂತೆ ಅವರನ್ನು ಬಂಧಿಸಲಾಯಿತು.
ನಂತರ ಪಂಡಿತ್ ಜವಾಹರಲಾಲ್ ನೆಹರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾದರು. 1926ರಲ್ಲಿ ಅವರು ಬೆಲ್ಜಿಯಮ್, ಜರ್ಮನಿ ಮುಂತಾದ ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದರು. ಇಂಡಿಯನ್ ನಾಷನಲ್ ಕಾಂಗ್ರೆಸ್ನಲ್ಲಿ ಅಧಿಕೃತ ಪ್ರತಿನಿಧಿಯಾಗಿ ಬ್ರುಸೆಲ್ಸ್ನಲ್ಲಿ ಭಾಗವಹಿಸಿದರು. ಸೈಮನ್ ಕಮಿಷನ್ನ ವಿರುದ್ಧ 1928ರಲ್ಲಿ ಹೋರಾಟದಲ್ಲಿ ನೇತೃತ್ವ ವಹಿಸಿ ಲಕ್ನೋದಲ್ಲಿ ಲಾಠಿ ಚಾರ್ಜ್ಗೆ ಒಳಗಾದರು. ಅದೇ ವರ್ಷ ಭಾರತವನ್ನು ಬ್ರಿಟಿಷರಿಂದ ಬೇರ್ಪಡಿಸುವ ಗುರಿ ಹೊಂದಿದ್ದ ‘ಇಂಡಿಪೆಂಡೆನ್ಸ್ ಫಾರ್ ಇಂಡಿಯಾ ಲೀಗ್’ನ್ನು ನೆಹರು ಸ್ಥಾಪಿಸಿದರು ಮತ್ತು ಅದರ ಕಾರ್ಯದರ್ಶಿಯಾದರು. ಇವರು ಭಾರತದ ದೇಶದ ಮೊದಲ ಪ್ರಧಾನಿಯಾಗಿದ್ದರು.
ಮಕ್ಕಳ ದಿನಾಚರಣೆ ಮಹತ್ವ:
ನೆಹರೂ ಮಕ್ಕಳ ಬಗ್ಗೆ ತುಂಬ ಪ್ರೀತಿಯನ್ನು ಹೊಂದಿದ್ದರು ಮತ್ತು ಇಂದಿನ ಮಕ್ಕಳೇ ನಾಳಿನ ಪ್ರಜೆಗಳು ಮತ್ತು ರಾಷ್ಟ್ರದ ಭವಿಷ್ಯದ ಸೃಷ್ಟಿಕರ್ತರು ಎಂದು ಪರಿಗಣಿಸಿದ್ದರು. ರಾಷ್ಟ್ರದ ಭವಿಷ್ಯವನ್ನು ಉಳಿಸಿಕೊಳ್ಳಬೇಕಾದರೆ ಮಕ್ಕಳ ಭವಿಷ್ಯವನ್ನು ಉತ್ತಮ ದಿಕ್ಕಿನಲ್ಲಿ ನಿರ್ಮಿಸುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ನೆಹರುಗೆ ಮಕ್ಕಳ ಮೇಲಿದ್ದ ಪ್ರೀತಿಯನ್ನು ನೋಡಿ ನಮ್ಮ ಭೂಮಿ ಅವರ ಜನ್ಮದಿನವನ್ನು ಮಕ್ಕಳ ದಿನವೆಂದು ನೆನಪಿಸಿಕೊಳ್ಳಲು ಪ್ರಾರಂಭಿಸಿದರು. ಮಕ್ಕಳ ದಿನಾಚರಣೆಯ ಮುಖ್ಯ ಉದ್ದೇಶ ಭಾರತದ ಎಲ್ಲಾ ನಾಗರಿಕರಿಗೆ ಶಿಕ್ಷಣ, ಮಕ್ಕಳಿಗೆ ಹಕ್ಕುಗಳನ್ನು ನೀಡುವ ಬಗ್ಗೆ ಅರಿವು ಮೂಡಿಸುವುದು. ಮಕ್ಕಳನ್ನು ಸರಿಯಾದ ಮಾರ್ಗದಲ್ಲಿ ಬೆಳೆಸುವುದು ಮತ್ತು ಆದ್ದರಿಂದ ಮಕ್ಕಳ ಭವಿಷ್ಯವನ್ನು ಸುಸಂಘಟಿತ ಮತ್ತು ರಾಷ್ಟ್ರವನ್ನು ಅಭಿವೃದ್ಧಿಪಡಿಸುವುದು. ರಾಷ್ಟ್ರದ ಅಭಿವೃದ್ಧಿ ಶಾಲೆಯಲ್ಲಿದೆ, ನಮ್ಮ ಮಕ್ಕಳೆ ದೇಶದ ಸಂಪತ್ತು. ಮಕ್ಕಳನ್ನು ರಕ್ಷಿಸಿ ಅವರ ಭವಿಷ್ಯವನ್ನು ಅಭಿವೃದ್ಧಿಪಡಿಸಿ.
ಮಕ್ಕಳ ದಿನಾಚರಣೆ ಮತ್ತು ಮಕ್ಕಳ ದಿನಾಚರಣೆ ಕಾರ್ಯಕ್ರಮಗಳು:
ಮಕ್ಕಳ ದಿನಾಚರಣೆಯನ್ನು ಹಲವಾರು ರೀತಿಯಲ್ಲಿ ಆಚರಿಸಲಾಗುತ್ತದೆ. ಶಾಲೆಗಳಲ್ಲಿ ಬಹಳ ವಿಶೇಷವಾಗಿ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳಿಗೆ ಆನಂದಿಸಲು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ ಮತ್ತು ಸ್ಪರ್ಧೆಗಳನ್ನುಕೂಡ ನಡೆಸಲಾಗುತ್ತದೆ. ಆ ದಿನ ಪಂಡಿತ್ ಜವಾಹರಲಾಲ್ ನೆಹರು ಅವರ ಭಾವ ಚಿತ್ರಕ್ಕೆ ಶ್ರದ್ದಾಂಜಲಿ ಅರ್ಪಿಸಲಾಗುತ್ತದೆ. ಮಕ್ಕಳ ದಿನಾಚರಣೆಯು ಮಕ್ಕಳೀಗಾಗಿಯೆ ಮೀಸಲಾಗಿದೆ. ಫೋರ್ಸ್ ಲೇಬರ್ ಆಕ್ಟ್ ಅಡಿಯಲ್ಲಿ ಬಾಲಕಾರ್ಮಿಕತೆಯಿಂದ ಮುಕ್ತಗೊಳಿಸಲಾಗಿದೆ. ಆದರೆ ಇನ್ನು ಬಾಲಕಾರ್ಮಿಕರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಯುತ್ತಲೆ ಇದೆ. ಈ ಆಕ್ಟಗೆ ಅಭಿವೃದ್ಧಿ ಗುರುತನ್ನು ನೀಡಲು ನಾವು ಇನ್ನೂ ವಿಫಲರಾಗಿದ್ದೇವೆ. ಮಕ್ಕಳ ಭವಿಷ್ಯ ಉಳಿಸುವುದು ಕೇವಲ ಸರ್ಕಾರದ ಜವಾಬ್ದಾರಿಯಲ್ಲ ಅದು ಇಲ್ಲರ ಕರ್ತವ್ಯವಾಗಿದೆ.
ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಬಹಳ ಸಂತೋಷ. ಸಂಬ್ರಮದಿಂದ ಅವರೆಲ್ಲಾ ಬಂದು ಶಾಲೆಗಳಲ್ಲಿ ಆ ದಿನ ನಡೆಯವು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಾರ್ಯಕ್ರಮದ ಕೇಂದ್ರ ಬಿಂದುಗಳಾಗಿರುತ್ತಾರೆ. ಅವರೆ ಆ ದಿನದ ಮೆರುಗು, ಮತ್ತು ಅವರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸ್ಫರ್ಧೆಗಳನ್ನು ನೆಡೆಸಲಾಗುತ್ತದೆ. ಸ್ಫರ್ಧೆಗಳಲ್ಲಿ ವಿಜೆತರಾದವರಿಗೆ ಪ್ರಶಸ್ತಿ ವಿತರಿಸಿ ಗೌರವಿಸಲಾಗುತ್ತದೆ. ಮಕ್ಕಳಿಗೆಲ್ಲಾಆ ದಿನ ಸಿಹಿ ಹಂಚಿ ಮತ್ತು ಸಿಹಿ ತಿಂದು ಸಂಭ್ರಮಿಸಲಾಗುತ್ತದೆ. ಮಕ್ಕಳ ಬಗ್ಗೆ ಮತ್ತು ಅವರ ಹಕ್ಕುಗಳ ಬಗ್ಗೆ ಭಾಷಣ ಮಾಡಲಾಗುತ್ತದೆ. ಸಭೆಗೆ ಗಣ್ಯ ವಕ್ತಿಗಳನ್ನು ಆಹ್ವನಿಸಲಾಗುತ್ತದೆ. ಅಂಧಕಾರದಲ್ಲಿ ಸಾಗುತ್ತಿರುವ ಮಕ್ಕಳಿಗಾಗಿ ಅವರ ಏಳಿಗೆಗಾಗಿ ಪ್ರಯತ್ನಿಸಬೇಕು
ಮಕ್ಕಳಗೆ ಮಕ್ಕಳ ದಿನಾಚರಣೆಯ ಅವಶ್ಯಕತೆ ಇದೆ. ಮಕ್ಕಳಿಗೆ ಶಾಲೆಗಳು ಮಾತ್ರವಲ್ಲದೆ ಸಮಾಜದಲ್ಲಿ ವಾಸಮಾಡುವ ಪ್ರತಿಯೊಂದು ಮಗುವಿಗು ಮಕ್ಕಳ ದಿನಾಚರಣೆ ಅಗತ್ಯವಿದೆ. ಅವರು ಸರಿಯಾಗಿ ಜೀವನವನ್ನು ನಡೆಸಲು ಸಮಾನತೆಯನ್ನು ಹೊಂದಿದ್ದಾರೆ. ಏಕೆಂದರೆ ಮಕ್ಕಳು ಸಮಾಜದ ಭವಿಷ್ಯ ಎಂದು ಪರಿಗಣಿಸಲಾಗುತ್ತದೆ ಮತ್ತು ಅವರು ಬಾಲ್ಯದಿಂದಲೇ ತಮ್ಮ ಹಕ್ಕು ಮತ್ತು ಹೊಣೆಗಾರಿಕೆಗಳ ಬಗ್ಗೆ ಜಾಗೃತರಾಗಿರಬೇಕು. ಅವರು ಅನುಭವಿಸುವ ಶೋಷಣೆಯ ವಿರುದ್ಧ ಅವರು ಧ್ವನಿಯೆತ್ತಬಹುದು. ಆದ್ದರಿಂದ ಮಕ್ಕಳ ದಿನಾಚರಣೆಯಂದು ಮಕ್ಕಳಿಗೆ ಸೇವೆ ಸಲ್ಲಿಸುವುದು ಮಾತ್ರವಲ್ಲದೆ ಪ್ರತಿ ದಿನವೂ ಅವರ ಯೋಗಕ್ಷೇಮ ಮತ್ತು ಪ್ರಯೋಜನಕ್ಕಾಗಿ ಮತ್ತು ಅವರ ಕನಸುಗಳನ್ನು ಸುರಕ್ಷಿತವಾಗಿ ಸಾಧಿಸಲು ಸಹಾಯ ಮಾಡಬೇಕು.
ಉಪ ಸಂಹಾರ:
ಮಕ್ಕಳ ದಿನಾಚರಣೆ ನಮ್ಮ ರಾಷ್ಟ್ರದ ಮುಂಬರುವ ಪೀಳಿಗೆಯ ಹಕ್ಕುಗಳ ಅರಿವು ದಾಖಲಿಸಲಾದ ಅಸಾಧಾರಣ ದಿನವಾಗಿದೆ. ಭಾರತ ಒಂದು ಅಭಿವೃದ್ಧಿಶೀಲ ರಾಷ್ಟ್ರವಾಗಿದೆ. ಬಾಲ ಕಾರ್ಮಿಕರು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸದೆ ಶೋಷಣೆ ಮಾಡುವ ಘಟನೆಗಳು ನಿಯಮಿತವಾಗಿ ನಡೆಯುತ್ತಲೆ ಇವೆ. ಮಕ್ಕಳ ಮೂಲಭೂತ ಹಕ್ಕು ಕರ್ತವ್ಯಗಳ ಬಗ್ಗೆ ಮಕ್ಕಳಷ್ಟೇ ಅಲ್ಲದೆ ಮಕ್ಕಳ ಪೋಷಕರು ಕೂಡ ಅದರ ಬಗ್ಗೆ ಮಾಹಿತಿ ತಿಳಿದುಕೊಂಡು ಮಕ್ಕಳಿಗು ಅದರ ಬಗ್ಗೆ ಅರಿವು ಮೂಡಿಸಬೇಕು.
FAQ
1.ಮಕ್ಕಳ ದಿನಾಚರಣೆಯನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ನವೆಂಬರ್ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.
2.ಪಂಡಿತ್ ಜವಾಹರಲಾಲ್ ನೆಹರು ಎಲ್ಲಿ ಜನಿಸಿದರು?
ಅಲಹಾಬಾದ್ನಲ್ಲಿ ಜವಾಹರ ಲಾಲ್ ನೆಹರು ಜನಿಸಿದರು.
ಇತರೆ ವಿಷಯಗಳು
ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಪ್ರಬಂಧ