ಸುಭಾಷ್ ಚಂದ್ರ ಬೋಸ್ ಅವರ ಪ್ರಬಂಧ | Subhash Chandra Bose Essay in Kannada

0

ಸುಭಾಷ್ ಚಂದ್ರ ಬೋಸ್ ಅವರ ಪ್ರಬಂಧ

ಹಲೋ ಸ್ನೇಹಿತರೆ ನಾವು ಈ ಪ್ರಬಂಧದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ರವರ ಬಗ್ಗೆ ತಿಳಿಯೋಣ, ನಮ್ಮ ದೇಶಕ್ಕೆ ನೇತಾಜಿಯವರ ಕೊಡುಗೆ ಅಪಾರ ಅದ್ದರಿಂದ ಅವರ ಬಗ್ಗೆ ತಿಳಿದುಕೊಳ್ಳಲೇಬೇಕು ಅವರ ಬಾಲ್ಯ ಜೀವನ, ಸಿದ್ಧಾಂತ,ರಾಜಕೀಯ ಸಾಧನೆ, ಮತ್ತು ಇಂಡಿಯನ್ ನ್ಯಾಷನಲ್ ಆರ್ಮಿ ಹೇಗೆ ಸ್ಥಾಪಿಸಿದರು ಇದೆಲ್ಲದರ ಬಗ್ಗೆ ತಿಳಿಯಲು ಈ ಪ್ರಬಂಧವನ್ನು ಸಂಪೂರ್ಣವಾಗಿ ಕೋನೆಯವರೆಗೂ ಓದಿ.

Subhash Chandra Bose Essay in Kannada
Subhash Chandra Bose Essay in Kannada

ಪೀಠಿಕೆ:

ಸುಭಾಸ್ ಚಂದ್ರ ಬೋಸ್ ಅವರು ಮಹಾನ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಅಪಾರ ಅದನ್ನು ಎಂದಿಗೂ ಮರೆಯಲಾಗದು. ಅನೇಕ ವರ್ಷಗಳ ಕಾಲ ವಿಶ್ವದಾದ್ಯಂತ ಪ್ರವಾಸ ಮಾಡಿ ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಬೆಂಬಲವನ್ನು ಸಂಗ್ರಹಿಸಿದ್ದರು. ಇವರು ಮರೆಯಲಾಗದ ರಾಷ್ಟ್ರನಾಯಕ, ಇವರಿಗೆ ಭಗವತ್ಗೀತೆಯಲ್ಲಿ ಅಪಾರ ನಂಬಿಕೆ ಮತ್ತು ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಗೌರವಿಸುತ್ತಿದ್ದರು. ಇವರನ್ನು ನೇತಾಜಿ ಎಂದು ಕರೆಯಲಾಗುತ್ತದೆ. ಇವರ ರಾಷ್ಟ್ರ ಭಕ್ತಿ ಅನೇಕ ಜನರ ಮೇಲೆ ಪ್ರಭಾವ ಬೀರಿದೆ.

ಕುಟುಂಬ ಮತ್ತು ಬಾಲ್ಯ ಜೀವನ ಚರಿತ್ರೆ:

1897 ಜನವರಿ 23 ರಂದು 12:10 ಕ್ಕೆ ಕಟಕ್‌ನಲ್ಲಿ ಸುಭಾಸ್ ಚಂದ್ರ ಬೋಸ್ ಜನಿಸಿದರು. ಇವರ ತಂದೆ ಹೆಸರು ಜಾಂಕಿನಾಥ್ ಬೋಸ್ ಒರಿಸ್ಸಾದ ಕಟಕ್ ನಲ್ಲಿ ವಕೀಲರಾಗಿದ್ದರು, ತಾಯಿ ಪ್ರಭಾವತಿ ದತ್ ಬೋಸ್ ಗೃಹಿಣಿಯಾಗಿದ್ದರು. ಇವರ ತಂದೆ ತಾಯಿಗೆ 14 ಮಕ್ಕಳು ಅದರಲ್ಲಿ ಇವರು 9ನೆ ಮಗನಾಗಿದ್ದರು. ಸುಭಾಸ್ ಚಂದ್ರ ಬೋಸ್ ರವರ ಬಾಲ್ಯ ಜೀವನ ಅರಾಮದಾಯಕವಾಗಿತ್ತು. ಅವರ ತಂದೆ ಕುಟುಂಬವನ್ನು ನೊಡಿಕೊಳ್ಳುವಷ್ಟು ಸಂಪಾದನೆ ಮಾಡಿದ್ದರು. ಒಳ್ಳೆಯ ವಿದ್ಯಾರ್ಥಿ rank ಹೋಲ್ಡರ್‌ ಆಗಿದ್ದರು. ಬ್ರಿಟಿಷ್ ಭಾರತದಲ್ಲಿಇದ್ದ ಪ್ರತಿಷ್ಠಿತ ಶಾಲೆಗಳು ಮತ್ತು ಸಂಸ್ಥೆಗಳಲ್ಲಿ ಅಧ್ಯಯನ ಮಾಡಿದರು. ಅವರನ್ನು ಜನವರಿ 1902 ರಲ್ಲಿ ಐದನೇ ವಯಸ್ಸಿನಲ್ಲಿ ಸ್ಟೀವರ್ಟ್ ಹೈಸ್ಕೂಲ್‌ಗೆ ಸೇರಿಸಲಾಯಿತು.

ಸುಭಾಸ್ ಚಂದ್ರ ಬೋಸ್ ಬುದ್ಧಿವಂತ ವಿದ್ಯಾರ್ಥಿಯಾಗಿದ್ದರು ಮತ್ತು ಮಧ್ಯಂತರ ಪರೀಕ್ಷೆಯಲ್ಲಿ ಪ್ರಥಮ ವಿಭಾಗದಲ್ಲಿ ಉತ್ತೀರ್ಣರಾದರು. ಇವರಿಗೆ ಭಾರತೀಯ ಎಂದು ಹೆಮ್ಮೆ ಬಹಳ. ಒಮ್ಮೆ ಭಾರತೀಯರನ್ನು ಅವಮಾನಿಸಿದ್ದಕ್ಕಾಗಿ ಅವರು ಕಾಲೇಜಿನಲ್ಲಿ ತಮ್ಮ ಇಂಗ್ಲಿಷ್ ಶಿಕ್ಷಕರಿಗೆ ಕಪಾಳಮೋಕ್ಷ ಮಾಡಿದ್ದರು. ನೇತಾಜಿ 1919 ಯಲ್ಲಿ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ತಮ್ಮ ಬಿ.ಎ. ಪದವಿ ಪಡೆದರು.

ಸುಭಾಸ್ ಚಂದ್ರ ಬೋಸ್ ಸಿದ್ಧಾಂತ:

ಭಗವತ್ಗೀತೆಯಲ್ಲಿ ಅಪಾರ ನಂಬಿಕೆ ಹೊಂದಿದ್ದರು ಮತ್ತು ಸಣ್ಣ ವಯಸ್ಸಿನಲ್ಲಿಯೆ ಸ್ವಾಮಿ ವಿವೇಕಾನಂದರ ಬೋಧನೆಗಳನ್ನು ಕೇಳುತ್ತ ಬೆಳೆದು ಅದಕ್ಕೆ ಪ್ರಭಾವಿತರಾಗಿದ್ದರು. ತನ್ನು ದೇಶಕ್ಕೆ ಸೇವೆ ಸಲ್ಲಿಸುವ ಸಲುವಾಗಿ ಹೊರದೇಶದಿಂದ ವಿದ್ಯಾಭ್ಯಾಸ ಮುಗಿಸಿ ಭಾರತಕ್ಕೆ ಮರಳಿ ಬಂದಿದ್ದರು. ಮರಳಿ ಬಂದ ನಂತರ ಕಾಂಗ್ರೆಸ್ ಪಕ್ಷ ಸೇರಿದರು. ಕಮ್ಯುನಿಸಂ ಅನ್ನು ಸಂಯೋಜಿಸಿದರೆ ಅದು ಭಾರತದಲ್ಲಿ ಯಶಸ್ವಿಯಾಗುತ್ತದೆ ಎಂದು ಅವರು ಭಾವಿಸಿದರು, ಮತ್ತು ಲಿಂಗ ಸಮಾನತೆ, ಜಾತ್ಯತೀತತೆ ಮತ್ತು ಇತರ ಉದಾರವಾದಿ ಸಿದ್ಧಾಂತಗಳಿಗೆ ಒಲವು ತೋರಿದರು.

ರಾಜಕೀಯ ಸಾಧನೆ ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರ:

ಕಾಂಗ್ರೆಸ್ ಪಕ್ಷ ಸೇರಿ 1938 ರಲ್ಲಿ ಭಾರತಿಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು ಮತ್ತು ಮಹಾತ್ಮಾ ಗಾಂಧಿಯವರು ಸ್ಥಾಪಿಸಿದ ಅಹಕಾರ ಚಳುವಳಿಗೆ ಸೇರಿದರು. “ಸ್ವರಾಜ್” ಪತ್ರಿಕೆಯನ್ನು ಸ್ಥಾಪಿಸಿದರು. ಜವಾಹರಲಾಲ್ ನೆಹರು ಅವರೊಂದಿಗೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದರು. ಇದರಿಂದ ಅನೇಕ ಭಾರಿ ಗೃಹ ಬಂದನಕ್ಕೆ ಒಳಗಾಗಿದ್ದರು. ಆರು ತಿಂಗಳೊಳಗೆ ಬ್ರಿಟಿಷರಿಂದ ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯವನ್ನು ಕೋರಿದರು.ಇದರಿಂದಾಗಿ ಕಾಂಗ್ರೆಸ್‌ನ ಒಳಗಿನಿಂದ ತೀವ್ರ ಆಕ್ಷೇಪಣೆಗಳನ್ನು ಎದುರಿಸಿದರು, ಅದು ಅವರನ್ನು INC ಗೆ ರಾಜೀನಾಮೆ ನೀಡಲು ಮತ್ತು “ಫಾರ್ವರ್ಡ್ ಬ್ಲಾಕ್” ಎಂಬ ಹೆಚ್ಚು ಪ್ರಗತಿಪರ ಗುಂಪನ್ನು ರೂಪಿಸಲು ಕಾರಣವಾಯಿತು.

ಬೋಸ್ ವಿದೇಶಿ ಯುದ್ಧಗಳಲ್ಲಿ ಭಾರತೀಯ ಪುರುಷರನ್ನು ಬಳಸುವುದರ ವಿರುದ್ಧ ಸಾಮೂಹಿಕ ಚಳುವಳಿಯನ್ನು ಪ್ರಾರಂಭಿಸಿದರು. ಈ ಚಳುವಳಿ ಅಪಾರ ಬೆಂಬಲ ಮತ್ತು ಧ್ವನಿಯನ್ನು ಪಡೆಯಿತು, ಇದರಿಂದಾಗಿ ಅವರನ್ನು ಕಲ್ಕತ್ತಾದ ಗೃಹಬಂಧನದಲ್ಲಿ ಇಡಲಾಯಿತು ಆದರೆ ಅವರು ಜನವರಿ 1941 ರಲ್ಲಿ ಮಾರುವೇಷದಲ್ಲಿ ಮನೆಯನ್ನು ತೊರೆದು ಅಫ್ಘಾನಿಸ್ತಾನದ ಮೂಲಕ ಜರ್ಮನಿಯನ್ನು ತಲುಪಿದರು. ಬ್ರಿಟಿಷರನ್ನು ಭಾರತದಿಂದ ಓಡಿಸಲು ಅವರು ಜಪಾನ್‌ನ ಸಹಾಯವನ್ನೂ ಕೋರಿದರು. “ಶತ್ರುವಿನ ಶತ್ರು ಮಿತ್ರ” ಎಂಬ ತತ್ವವನ್ನು ಅವರು ಸಂಪೂರ್ಣವಾಗಿ ಬಳಸಿಕೊಂಡರು. 

ಸುಭಾಸ್ ಚಂದ್ರ ಬೋಸ್  (INA) ಇಂಡಿಯನ್ ನ್ಯಾಷನಲ್ ಆರ್ಮಿ ಸ್ಥಾಪಿನೆ:

ಎರಡನೆಯ ಮಹಾಯುದ್ಧದ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟದಲ್ಲಿನ ಪ್ರಮುಖ ಬೆಳವಣಿಗೆಯೆಂದರೆ ಆಜಾದ್ ಹಿಂದ್ ಫೌಜ್‌ನ ರಚನೆ ಮತ್ತು ಚಟುವಟಿಕೆಗಳು, ಇದನ್ನು ಇಂಡಿಯನ್ ನ್ಯಾಷನಲ್ ಆರ್ಮಿ (INA) ಅಥವಾ ಆಜಾದ್ ಹಿಂದ್ ಫೌಜ್ ಎಂದು ಕರೆಯಲಾಯಿತು. ಭಾರತದಿಂದ ತಪ್ಪಿಸಿಕೊಂಡು ಜಪಾನಿಗೆ ಹೋದ ಬೋಸ್ ಆಗ್ನೇಯ ಏಷ್ಯಾದ ದೇಶಗಳಲ್ಲಿ ವಾಸಿಸುವ ಭಾರತೀಯರ ಬೆಂಬಲದೊಂದಿಗೆ ಭಾರತೀಯ ಸ್ವಾತಂತ್ರ್ಯ ಲೀಗ್ ಅನ್ನು ಸ್ಥಾಪಿಸಿದರು.

ಜಪಾನ್ ಸಹಾಯ ಪಡೆದು ಬ್ರಿಟಿಷ್ ಸೈನ್ಯವನ್ನು ಸೋಲಿಸಿದಾಗ, ಭಾರತವನ್ನು ಬ್ರಿಟಿಷ್ ಆಳ್ವಿಕೆಯಿಂದ ವಿಮೋಚನೆ ಮಾಡುವ ಉದ್ದೇಶದಿಂದ ಲೀಗ್ ಭಾರತೀಯ ಯುದ್ಧ ಕೈದಿಗಳ ನಡುವೆ ಭಾರತೀಯ (INA) ರಚಿಸಿತು. ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಿದ್ದ ಜನರಲ್ ಮೋಹನ್ ಸಿಂಗ್ ಈ ಸೇನೆಯನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇ ನಡುವೆ ನೇತಾಜಿ 1941 ರಲ್ಲಿ ಭಾರತದಿಂದ ತಪ್ಪಿಸಿಕೊಂಡು ಜರ್ಮನಿಗೆ ಹೋಗಿ ಭಾರತದ ಸ್ವಾತಂತ್ರ್ಯಕ್ಕಾಗಿ ಕೆಲಸ ಮಾಡಿದರು. 1943 ರಲ್ಲಿ ಸಿಂಗಾಪುರಕ್ಕೆ ಹೋಗಿ ಭಾರತೀಯ ರಾಷ್ಟ್ರೀಯ ಸೇನೆಯನ್ನು (ಆಜಾದ್ ಹಿಂದ್ ಫೌಜ್) ಮರುನಿರ್ಮಾಣ ಮಾಡಿ ಅದನ್ನು ಭಾರತದ ಸ್ವಾತಂತ್ರ್ಯಕ್ಕಾಗಿ ಪರಿಣಾಮಕಾರಿ ಸಾಧನವನ್ನಾಗಿ ಮಾಡಿದರು. ಆಜಾದ್ ಹಿಂದ್ ಫೌಜ್ 45,000 ಸೈನಿಕರನ್ನು ಒಳಗೊಂಡಿತ್ತು, ಅವರಲ್ಲಿ ಭಾರತೀಯ ಯುದ್ಧ ಕೈದಿಗಳು ಮತ್ತು ಆಗ್ನೇಯ ಏಷ್ಯಾದ ವಿವಿಧ ದೇಶಗಳಲ್ಲಿ ನೆಲೆಸಿರುವ ಭಾರತೀಯರು ಸೆರಿದ್ದರು. 1945 ದು ಆಗಸ್ಟ್ 18 ರಂದು ತೈಹೋಕು ಜಪಾನ್‌ನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

ಉಪಸಂಹಾರ

ಸುಭಾಸ್ ಚಂದ್ರ ಬೋಸ್ ನಮ್ಮ ದೇಶದ ಸ್ವರಾಜ್ಯ ಹೋರಾಟಗಾರರಲ್ಲಿ ಒಬ್ಬರು ಮತ್ತು ಇವರು ಅಸಮಾನ್ಯ ಸ್ವಾತಂತ್ರ್ಯ ಹೋರಾಟಗಾರ. ಇವರು ಹೃದಯದಿಂದ ಒಬ್ಬ ಒಳ್ಳೆ ಸೈನಿಕನಾಗಿದ್ದರು, ಸೈನಿಕನಂತೆ ಬದುಕಿದ್ದರು ಜೊತೆಗೆ ಸೈನಿಕನಂತೆ ಮಾತೃಭೂಮಿಯ ಸ್ವಾತಂತ್ರ್ಯಕ್ಕಾಗಿ ಹೋರಾಡಿದ. ಅವರ ಅಚಲವಾದ ಆತ್ಮವಿಶ್ವಾಸ ಮತ್ತು ಧಿಕ್ಕರಿಸುವ ದೇಶಭಕ್ತಿ ಅವರನ್ನು ಇತರ ಸ್ವಾತಂತ್ರ್ಯ ಹೋರಾಟಗಾರರ ಗುಂಪಿನಿಂದ ದೂರವುಳಿಸಿತು.ಇದರಿಂದಾಗಿ ಅವರ ಕೊಡುಗೆ ಪ್ರಯತ್ನ ಎಂದಿಗೂ ಮರೆಯಲಾಗದು.

FAQ

1.ಸುಭಾಷ್ ಚಂದ್ರ ಬೋಸ್ ಯಾವಾಗ ಜನಿಸಿದರು?

1897 ಜನವರಿ 23 ರಂದು ಕಟಕ್‌ನಲ್ಲಿ ಸುಭಾಸ್ ಚಂದ್ರ ಬೋಸ್ ಜನಿಸಿದರು.

2.ಸುಭಾಷ್ ಚಂದ್ರ ಬೋಸ್ ತಂದೆ ತಾಯಿ ಹೆಸರೇನು?

ತಂದೆ ಹೆಸರು ಜಾಂಕಿನಾಥ್ ಬೋಸ್ ತಾಯಿ ಹೆಸರು ಪ್ರಭಾವತಿ ದತ್ ಬೋಸ್.

3.ಸುಭಾಷ್ ಚಂದ್ರ ಬೋಸ್ ಯಾವಾಗ ನಿಧನರಾದರು?

1945 ದು ಆಗಸ್ಟ್ 18 ರಂದು ತೈಹೋಕು ಜಪಾನ್‌ನಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದರು.

ಇತರೆ ವಿಷಯಗಳು

ಕರ್ನಾಟಕದ ಬಗ್ಗೆ ಪ್ರಬಂಧ

ಚುನಾವಣಾ ಪ್ರಕ್ರಿಯೆ ಕುರಿತು ಪ್ರಬಂಧ

ಸಾವಯವ ಕೃಷಿ ಬಗ್ಗೆ ಪ್ರಬಂಧ

Leave A Reply

Your email address will not be published.