ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಬಂಧ | National Women’s Day Essay in Kannada

0

ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಬಂಧ, National Women’s Day Essay Rashriya Mahila Dinacharane Prabandha in kannada

ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಬಂಧ

ನಮಸ್ತೆ ಸ್ನೇಹಿತರೆ, ನಾವು ಈ ಪ್ರಬಂಧದಲ್ಲಿ ರಾಷ್ಟ್ರೀಯ ಮಹಿಳಾ ದಿನಾಚರಣೆ ಬಗ್ಗೆ ತಿಳಿಸಿದ್ದೆವೆ. ರಾಷ್ಟ್ರೀಯ ಮಹಿಳಾ ದಿನಾಚರಣೆ ಇತಿಹಾಸ, ಮಹಿಳೆಯರ ಹಕ್ಕುಗಳು, ಸಾಧನೆಗಳು,ಭಾರತದಲ್ಲಿ ಮಹಿಳಾ ದಿನ,ಸರೋಜಿನಿ ನಾಯ್ಡುರವರು ಇದ್ದೆಲ್ಲದರ ಬಗ್ಗೆ ತಿಳಿಯಲು ಈ ಪ್ರಬಂಧವನ್ನು ಈ ಪ್ರಬಂಧವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

National Women’s Day Essay in Kannada
National Women’s Day Essay in Kannada

ಪೀಠಿಕೆ:

ರಾಷ್ಟ್ರೀಯ ಮಹಿಳಾ ದಿನಾಚರಣೆಯ ಇತಿಹಾಸವು ಬಹಳ ಹಿಂದಿನದು, ಇದು ಮಹಿಳೆಯರ ಹಕ್ಕುಗಳು ಮತ್ತು ಲಿಂಗ ಸಮಾನತೆಗಾಗಿ ಜಾಗತಿಕ ಚಳುವಳಿಯಾಗಿ ಬೆಳೆದಿದೆ. ಸಮಾಜಕ್ಕೆ ಮಹಿಳೆಯರ ಸಾಧನೆಗಳು ಮತ್ತು ಕೊಡುಗೆಗಳನ್ನು ಗುರುತಿಸಲು ಮತ್ತು ಲಿಂಗ ಸಮಾನತೆಗಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಜಾಗೃತಿ ಮೂಡಿಸಲು ಈ ದಿನವನ್ನು ಆಚರಿಸಲಾಗುತ್ತದೆ. ಇದು ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಆಚರಿಸುವ ದಿನವಾಗಿದೆ, ಲಿಂಗ ಸಮಾನತೆಯನ್ನು ಸಾಧಿಸಲು ಇನ್ನೂ ಮಾಡಬೇಕಾದ ಕೆಲಸವನ್ನು ಪ್ರತಿಬಿಂಬಿಸುವ ದಿನವಾಗಿದೆ.

ಮಹಿಳಾ ದಿನಾಚರಣೆ ಇತಿಹಾಸ ಮತ್ತು ವಿವರಣೆ:

ಮೊದಲ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಮಾರ್ಚ್ 19, 1911 ರಂದು ಡೆನ್ಮಾರ್ಕ್ಸ ಇನ್ನು ಕೆಲವು ದೇಶದಲ್ಲಿ ಆಚರಿಸಲಾಯಿತು. ಮಹಿಳೆಯರ ಸಾಧನೆಗಳನ್ನು ಆಚರಿಸಲು ಮತ್ತು ಮಹಿಳಾ ಹಕ್ಕುಗಳಿಗಾಗಿ ಪ್ರತಿಪಾದಿಸಲು ಒಂದು ದಿನದ ಕಲ್ಪನೆಯು ಜರ್ಮನಿಯ ಸಮಾಜವಾದಿ, ಸ್ತ್ರೀವಾದಿ ಮತ್ತು ಸೋಶಿಯಲ್ ಡೆಮಾಕ್ರಟಿಕ್ ಪಕ್ಷದ ಮಹಿಳಾ ಕಚೇರಿಯ ನಾಯಕಿಯಾಗಿದ್ದ ಕ್ಲಾರಾ ಜೆಟ್ಕಿನ್ ಎಂಬ ಮಹಿಳೆಯಿಂದ ಮಹಿಳಾ ದಿನ ಬಂದಿತು. 1910 ರಲ್ಲಿ ಕೋಪನ್‌ಹೇಗನ್‌ನಲ್ಲಿ ನಡೆದ ದುಡಿಯುವ ಮಹಿಳೆಯರ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಜೆಟ್ಕಿನ್ಮ ಮಹಿಳೆಯರ ಹಕ್ಕುಗಳು ಮತ್ತು ಮತದಾನದ ಹಕ್ಕುಗಳನ್ನು ಒತ್ತಾಯಿಸಲು ಪ್ರತಿ ವರ್ಷವೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಬೇಕು ಎಂದು ಪ್ರಸ್ತಾಪಿಸಿದರು.

ಮೊದಲು ಮಹಿಳಾ ದಿನವು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರಿ ಯಶಸ್ಸನ್ನು ಕಂಡಿತು, ಯುರೋಪ್‌ನಲ್ಲಿ ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ರ್ಯಾಲಿ, ಪ್ರದರ್ಶನಗಳಲ್ಲಿ ಭಾಗವಹಿಸಿದ್ದರು. ಮಹಿಳೆಯರು ಮತದಾನದ ಹಕ್ಕನ್ನು, ಸಾರ್ವಜನಿಕ ಹುದ್ದೆಯನ್ನು ಹೊಂದಲು, ಕೆಲಸ ಮಾಡಲು ಮತ್ತು ಸಮಾನ ವೇತನವನ್ನು ಪಡೆಯಲು ಒತ್ತಾಯಿಸಿದರು.

1975 ಮಾರ್ಚ್ 8ರಂದು ವಿಶ್ವಸಂಸ್ಥೆಯು ಅಂತರರಾಷ್ಟ್ರೀಯ ಮಹಿಳಾ ದಿನಚರಣೆಯನ್ನು ಆಚರಿಸಬೇಕೆಂದು ಘೋಷಿಸಿತು. ಅಂದಿನಿಂದ, ಇದನ್ನು ಮಹಿಳೆಯರ ಸಾಧನೆಗಳನ್ನು ಗುರುತಿಸಲು ಮತ್ತು ಲಿಂಗ ಸಮಾನತೆಗೆ ಕರೆ ನೀಡುವ ದಿನವಾಗಿ ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.‌

ಮಹಿಳೆಯರ ಹಕ್ಕುಗಳು:

 • ಮೂಲಭೂತ ಹಕ್ಕುಗಳು
 • ಸ್ವಾತಂತ್ರ್ಯದ ಹಕ್ಕುಗಳು
 • ಶೋಷಣೆಯ ವಿರುದ್ಧದ ಹಕ್ಕುಗಳು
 • ಅಭಿವ್ಯಕ್ತಿಯ ಹಕ್ಕುಗಳು,
 • ಸಮಾನತೆಯ ಹಕ್ಕುಗಳು
 • ಶಿಕ್ಷಣದ ಹಕ್ಕುಗಳು 
 • ಸ್ತ್ರೀ ಉದ್ಯೋಗ ಹಕ್ಕು ಮುಂತಾದವು

ಮೈಸೂರಿನಿಂದ ಹೊರಡಿಸುತ್ತಿದ್ದ ‘ಕರ್ನಾಟಕ ವಾಣಿʼ ಮತ್ತು ʼವಿಲಾಸ ಪತ್ರಿಕೆ’ ಯನ್ನು ಮಹಿಳಾ ಪತ್ರಿಕೆಯಾಗಿ ಗುರುತಿಸಲಾಗಿದೆ. 

ಮಹಿಳೆಯರ ಸಾಧನೆಗಳು:

ಎಲ್ಲಾ ಕ್ಷೇತ್ರಗಳು ಮಹಿಳೆಯರ ಸಾಧನೆಗಳಿಂದ ಕೂಡಿದೆ. ಎಲ್ಲಾ ಸಾಧನೆಗಳಲ್ಲಿ ತೊಡಗಿಸಿಕೊಂಡು ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ. ಉತ್ತಮ ಗುಣ, ನಡತೆಗಳಿಂದ ಪೂಜನೀಯ ಆಗಿದ್ದಾಳೆ ರಾಷ್ಟ್ರೀಯ ಮಹಿಳಾ ದಿನ, ಮಹಿಳೆಯರಿಗೆ ಮತ್ತು ಅವರ ಸಾಧನೆಗಳಿಗೆ ಗೌರವವನ್ನು ನೀಡುವ ಮೂಲಕ ಅವರನ್ನು ಪ್ರೋತ್ಸಾಹಿಸಲಾಗುತ್ತದೆ. ತಾರತಮ್ಯವನ್ನು ಹೋಗಲಾಡಿಸಿ ಸಮಾನತೆ ಮತ್ತು ಅವರ ಹಕ್ಕುಗಳ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತದೆ. ಶಾಲಾ-ಕಾಲೇಜುಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಅದರ ಬಗ್ಗೆ ಜ್ಞಾನವನ್ನು ಅಭಿವೃಧ್ಧಿ ಪಡಿಸುವುದಾಗಿದೆ.

ಸ್ತ್ರೀ ಯರು 4 ಗೋಡೆಗಳ ಅಥವಾ ಮನೆಯಲ್ಲೆ ಕುಳಿತು ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿದೆ, ಪುರುಷರಿಗಿಂತ ನಾವೇನು ಕಡಿಮೆ ಇಲ್ಲ ಎಂದು ಸಮಾಜದಲ್ಲಿ ಪುರುಷರಷ್ಟೇ ಸಾಧನೆಗಳನ್ನು ಮಾಡುವುದರ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಸಾಧನೆಯನ್ನು ಮಾಡುವುದರ ಮೂಲಕ ಜಗತ್ತಿನ ದೃಷ್ಟಿಯನ್ನು ತನ್ನೆಡೆ ಸೆಳೆದುಕೊಂದಿದ್ದಳೆ.
ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಸಾಧನೆ ಮಾಡುತ್ತಿದ್ದಾರೆ, ಆದರೆ ಇಂದಿಗೂ ಕೆಲವೆಡೆ ಲಿಂಗ ತಾರತಮ್ಯ ,ದೌರ್ಜನ್ಯ ,ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಿವೆ ಮತ್ತು ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ.

ಭಾರತದಲ್ಲಿ ರಾಷ್ಟ್ರೀಯ ಮಹಿಳಾ ದಿನ:

ರಾಷ್ಟ್ರದಲ್ಲಿ ಮಹಿಳೆಯರ ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಾಧನೆಗಳನ್ನು ವೀಕ್ಷಿಸಲು ನಾವು ಭಾರತದಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತೇವೆ.

ದೇಶಾದ್ಯಂತ ಸರ್ಕಾರಿ ಇಲಾಖೆಗಳು ಆಕೆಯ ಕೆಲಸ ಮತ್ತು ಕೊಡುಗೆಯನ್ನು ಗುರುತಿಸುತ್ತವೆ ಮತ್ತು ಅವರ ಕಾರ್ಯಕ್ರಮಗಳನ್ನು ನಡೆಸುತ್ತಾರೆ ಮತ್ತು ಅವರ ನಾಯಕತ್ವವನ್ನು ನೆನಪಿಸಿಕೊಳ್ಳುತ್ತಾರೆ. ರಾಷ್ಟ್ರೀಯ ಮಹಿಳಾ ದಿನವನ್ನು ಶ್ರೀಮತಿ ಸರೋಜಿನಿ ನಾಯ್ಡು ಅವರ ಜನ್ಮ ಮಹೋತ್ಸವವಾಗಿ ಆಚರಿಸಲಾಗುತ್ತದೆ. ಹೀಗಾಗಿ, ನಮ್ಮ ದೇಶದ ಇತಿಹಾಸದಲ್ಲಿ ಮಹಿಳಾ ದಿನವು ಒಂದು ಪ್ರಮುಖ ಆಚರಣೆಯಾಗಿದೆ. ಇದು ಮಹಿಳೆಯರನ್ನು ಸಬಲಗೊಳಿಸುತ್ತದೆ ಮತ್ತು ಸಮಾಜಕ್ಕೆ ಅವರ ಕೊಡುಗೆಯನ್ನು ಗುರುತಿಸುತ್ತದೆ.

13 ಫೆಬ್ರವರಿ 1879 ರಂದು ಸರೋಜಿನಿ ನಾಯ್ಡು ಅವರ ಜನ್ಮದಿನದ ಸಂದರ್ಭದಲ್ಲಿ ನಾವು ರಾಷ್ಟ್ರೀಯ ಮಹಿಳಾ ದಿನವನ್ನು ಭಾರತದಲ್ಲಿ ಆಚರಿಸುತ್ತೇವೆ. ಸರೋಜಿನಿ ನಾಯ್ಡು ಪ್ರತಿಭಾನ್ವಿತ ರಾಷ್ಟ್ರೀಯ ನಾಯಕಿಯಾಗಿದ್ದರು, ಸ್ವಾತಂತ್ರ್ಯ ಹೋರಾಟಗಾರ್ತಿ ಮತ್ತು ಪ್ರಸಿದ್ಧ ಕವಿಯು ಕೂಡ ಆಗಿದ್ದರು. ಆಕೆಯನ್ನು ‘ಭಾರತದ ನೈಟಿಂಗೇಲ್’ ಮತ್ತು ‘ಭಾರತ್ ಕೋಕಿಲಾ’ ಎಂದು ಕರೆಯಲಾಗುತ್ತಿತ್ತು. ಅವರ ಜನ್ಮ ವಾರ್ಷಿಕೋತ್ಸವವನ್ನು ಭಾರತೀಯ ಮಹಿಳೆಯರು ಮತ್ತು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ರಾಷ್ಟ್ರಕ್ಕೆ ಅವರು ನೀಡಿದ ಕೊಡುಗೆಯನ್ನು ಸ್ಮರಿಸಲು ಅವರ ಜನ್ಮ ದಿನವನ್ನುಭಾರತದಲ್ಲಿ ರಾಷ್ಟ್ರೀಯ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತದೆ .

ಸರೋಜಿನಿ ನಾಯ್ಡು ಕುರಿತು

ಸರೋಜಿನಿ ನಾಯ್ಡು ಅವರು ಪ್ರೀತಿ, ಧರ್ಮ, ಪ್ರಣಯ, ದೇಶಭಕ್ತಿ ಮತ್ತು ದುರಂತದ ವಿಷಯಗಳನ್ನು ಆಧರಿಸಿ ಹಲವಾರು ಕವನಗಳನ್ನು ಬರೆದಿದ್ದಾರೆ. ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಪ್ರಸ್ತುತ ಉತ್ತರ ಪ್ರದೇಶದ ಯುನೈಟೆಡ್ ಪ್ರಾವಿನ್ಸ್‌ನ ಮೊದಲ ಮಹಿಳಾ ಗವರ್ನರ್ ಕೂಡ ಆಗಿದ್ದರು.

ಇದಲ್ಲದೆ, 1925 ರಲ್ಲಿ ಅವರು ತಮ್ಮ ಶೈಕ್ಷಣಿಕ ಸಾಮರ್ಥ್ಯಗಳು ಮತ್ತು ರಾಜಕೀಯ ಕುಶಾಗ್ರಮತಿಯಿಂದಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು . ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ 21 ತಿಂಗಳುಗಳ ಕಾಲ ಜೈಲುವಾಸ ಅನುಭವಿಸಿದರು. ಸರೋಜಿನಿ ನಾಯ್ಡು ಕೂಡ ಸಂವಿಧಾನಕ್ಕೆ ಅನೇಕ ಕೊಡುಗೆ ನೀಡಿದವರು. 2 ಮಾರ್ಚ್ 1949 ರಂದು ಉತ್ತರ ಪ್ರದೇಶದ ಲಕ್ನೋದಲ್ಲಿ ಹೃದಯಾಘಾತದಿಂದ ಸರೋಜಿನಿ ನಾಯ್ಡು ನಿಧನರಾದರು .

ಅವರ ಕೆಲವು ಸಾಹಿತ್ಯ ಕೃತಿಗಳನ್ನು ಬರೆದಿದ್ದಾರೆ:

 • ಗೋಲ್ಡನ್ ಥ್ರೆಶೋಲ್ಡ್ (1905)
 • ಕಿತಾಬಿಸ್ತಾನ್
 • ಮುಹಮ್ಮದ್ ಜಿನ್ನಾ: ಏಕತೆಯ ರಾಯಭಾರಿ
 • ದಿ ಬರ್ಡ್ ಆಫ್ ಟೈಮ್: ಸಾಂಗ್ಸ್ ಆಫ್ ಲೈಫ್, ಡೆತ್ ಮತ್ತು ಸ್ಪ್ರಿಂಗ್
 • ದಿ ಗಿಫ್ಟ್ ಆಫ್ ಇಂಡಿಯಾ
 • ಭಾರತೀಯ ನೇಕಾರರು
 • ದಿ ಸೆಪ್ಟೆಡ್ ಕೊಳಲು: ಭಾರತದ ಹಾಡುಗಳು.ಮುಂತಾದವು.

ಉಪಸಂಹಾರ:

ನಮ್ಮ ದೇಶದಲ್ಲಿ ಹೆಣ್ಣಿಗೆ ತನ್ನದೆ ಆದ ಗೌರವವಿದೆ. ಅವಳನ್ನು ಪೂಜನೀಯ ಭಾವದಿಂದ ಕಾಣಲಾಗುತ್ತದೆ. ಪ್ರಕೃತಿಗೂ ಮತ್ತು ಹೆಣ್ಣಿಗೂ ಒಂದು ಒಳ್ಳೆಯ ನಂಟಿದೆ. ಹೆಣ್ಣು ಸಂಬೃಧ್ದಿಯ ಸಂಕೇತ . ಸ್ತ್ರೀ ಶಕ್ತಿ ಒಂದು ದೊಡ್ಡ ಶಕ್ತಿ, ಹಿಂದಿಗು ಇಂದಿಗು ನಾವು ಮಾತೃಪ್ರಧಾನ ಕುಟುಂಬಗಳನ್ನು ಕಾಣಬಹುದು. ಸ್ತ್ರೀಯರನ್ನು ಗೌರವಿಸುವುದು ಅವರನ್ನು ಸಮಾವತೆಯಿಂದ ಕಾಣುವುದು ನಮ್ಮ ನಿಮ್ಮೆಲ್ಲರ ಕರ್ತವ್ಯ.

FAQ

1.ರಾಷ್ಟ್ರೀಯ ಮಹಿಳಾ ದಿನಾಚರಣೆ ಯಾವಾಗ ಆಚರಿಸಲಾಗುತ್ತದೆ?

13 ಫೆಬ್ರವರಿ 1879 ಆಚರಿಸಲಾಗುತ್ತದೆ

2.ವಿಶ್ವಸಂಸ್ಥೆ ಯಾವಾಗ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಘೋಷಿಸಿತು?

1975 ,ಮಾರ್ಚ್ 8 ರಂದು ವಿಶ್ವಸಂಸ್ಥೆಅಂತರರಾಷ್ಟ್ರೀಯ ಮಹಿಳಾ ದಿನವನ್ನು ಘೋಷಿಸಿತು.

ಇತರೆ ವಿಷಯಗಳು

ಸುಭಾಷ್ ಚಂದ್ರ ಬೋಸ್ ಅವರ ಪ್ರಬಂಧ

ಮಕ್ಕಳ ದಿನಾಚರಣೆ ಬಗ್ಗೆ ಪ್ರಬಂಧ

ಸರ್ ಎಂ ವಿಶ್ವೇಶ್ವರಯ್ಯ ಅವರ ಬಗ್ಗೆ ಪ್ರಬಂಧ

Leave A Reply

Your email address will not be published.