ಗಣರಾಜ್ಯೋತ್ಸವ ಪ್ರಬಂಧ | Republic Day Essay in Kannada

0

ಗಣರಾಜ್ಯೋತ್ಸವ ಪ್ರಬಂಧ, Republic Day Essay in Kannada, Ganarajyotsava Prabandha in Kannada, Republic Day Prabandha in Kannada

ಗಣರಾಜ್ಯೋತ್ಸವ ಪ್ರಬಂಧ

ಹಲೋ ಎಲ್ಲಾರಿಗೂ ನಮಸ್ತೆ, ನಾವಿಂದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕಾದ ಗಣರಾಜ್ಯೋತ್ಸವದ ಬಗ್ಗೆ ಈ ಪ್ರಬಂಧದಲ್ಲಿ ತಿಳಿಸುತಿದ್ದೇವೆ. ನಾವೆಲ್ಲಾ ಸ್ವತಂತ್ರರಾಗಿದ್ದೇವೆ ಎಂದರೆ ಈ ದಿನವನ್ನು ಮರೆಯಬಾರದು ಗಣರಾಜ್ಯೋತ್ಸ ಎಂದರೇನು ಇದರ ಮಹತ್ವ, ಇತಿಹಾಸ ಮತ್ತು ಹೇಗೆ ಆಚರಿಸುತ್ತೆವೆ ಎಂಬ ಎಲ್ಲಾ ವಿಷಯವನ್ನು ತಿಳಿಯಲು ಈ ಪ್ರಬಂಧವನ್ನು ಸಂಪೂರ್ಣವಾಗಿ ಕೊನೆಯವರೆಗು ಓದಿ.

Republic Day Essay in Kannada
Republic Day Essay in Kannada

ಪೀಠಿಕೆ:

ಗಣರಾಜ್ಯೋತ್ಸವ ದಿನವು ದೇಶದ ಮಹತ್ವದ ದಿನವಾಗಿದೆ.ಜನವರಿ 26, 1950 ರಂದು ಸಂವಿಧಾನ ಭಾರತದಲ್ಲಿ ರಚನೆಯಾಯಿತು ಆದ್ದರಿಂದ ಆ ದಿನವನ್ನು ಗಣರಾಜ್ಯೋತ್ಸದಿನ ಎಂದು ಆಚರಿಸಲಾಗುತ್ತದೆ. ಆದ್ದರಿಂದ ಜನವರಿ 26 ಭಾರತದಲ್ಲಿ ಗಣರಾಜ್ಯೋತ್ಸವವನ್ನು ಆಚರಿಸಲಾಗುತ್ತದೆ. ಗಣರಾಜ್ಯೋತ್ಸವವು ಭಾರತದ ಮೂರು ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾಗಿದೆ, ಅದಕ್ಕಾಗಿಯೇ ಇದನ್ನು ಪ್ರತಿಯೊಬ್ಬರೂ ಅತ್ಯಂತ ಗೌರವ, ಉತ್ಸಾಹ ಮತ್ತು ಸಂಬ್ರಮದಿಂದ ಆಚರಿಸುತ್ತಾರೆ, ಈ ದಿನವನ್ನು ಜಾತಿ ಮತ್ತು ಪಂಗಡ ಯಾವುದೆ ಬೇದ ಬಾವ ವಿಲ್ಲದೆ ಆಚರಿಸಲಾಗುತ್ತದೆ. 1950 ರಲ್ಲಿ ಭಾರತವು ಸಂಪೂರ್ಣ ಸಾರ್ವಭೌಮವಾಯಿತು . ಮಹಾತ್ಮ ಗಾಂಧೀಜಿಯಂತಹ ಮಹಾನ್ ವ್ಯಕ್ತಿ ಮತ್ತು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ಕಠಿಣ ಪರಿಶ್ರಮದಿಂದ ನೆನೆಸಿಕೊಳ್ಳುವ ದಿನವಾಗಿದೆ. ಈ ದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸಲಾಯಿತು. ಭಾರತ ಸಶಸ್ತ್ರ ಪಡೆಗಳು ನವದೆಹಲಿಯಲ್ಲಿ ಈ ದಿನ ಪ್ರಭಾತಬೇರಿ ನಡೆಸುತ್ತವೆ.

ಗಣರಾಜ್ಯ ಎಂದರೇನು:

ಗಣರಾಜ್ಯ ಎಂದರೇ ಸಮೂಹದಿಂದ ಪ್ರತ್ಯಕ್ಷವಾಗಿ ಅಥವಾ ಪಕೋಕ್ಷವಾಗಿ ಅಧಿಕಾರ ಪಡೆದು, ಜನತೆಯ ಇಚ್ಚೆಗನುಗುಣವಾಗಿ, ನಿಯಮಿತ ಅವಧಿಯಲ್ಲಿ ಮಾತ್ರ ಆ ಅಧಿಕಾರವನ್ನು ಚಲಾಯಿಸುವ ಸರ್ಕಾರ ಪದ್ದತಿಯೇ ಗಣರಾಜ್ಯ ಈ ವ್ಯವಸ್ಥೆಯಲ್ಲಿ ಅಧಿಕಾರವನ್ನು ಹಲವೇ ಜನರಂದ ಪಡೆಯದೆ ಇಡೀ ಜನತೆಯಿಂದ ಪಡೆಯುವುದು ಬಹು ಮುಖ್ಯವಾದ ಅಂಶ.

ಗಣರಾಜ್ಯೋತ್ಸವ ಇತಿಹಾಸ:

ಭಾರತಕ್ಕೆ 1947 ಆಗಸ್ಟ್ 15 ರಂದು ಸ್ವತಂತ್ರವಾಯಿತು. ಆದರೆ ರಾಜ್ಯ ವ್ಯವಹಾರಗಳನ್ನು ಸುಗಮವಾಗಿ ನಡೆಸುವುದನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ತಜ್ಞರು ಮತ್ತು ರಾಜಕೀಯ ಪ್ರಭಾವವನ್ನು ಭಾರತ ಹೊಂದಿರಲಿಲ್ಲಾ, ವಸಾಹತುಶಾಹಿ ಆಡಳಿತದ ಕಡೆಗೆ ಬಲವಾದ ಒಲವು ಹೊಂದಿದ್ದ 1935 ರ ಭಾರತ ಸರ್ಕಾರದ ಕಾಯಿದೆಯು ಮೂಲಭೂತವಾಗಿ ಆ ಹಂತದವರೆಗೆ ಆಡಳಿತ ನಡೆಸಲು ಮಾರ್ಪಡಿಸಲಾಗಿದೆ. ಎಲ್ಲವನ್ನೂ ಒಳಗೊಂಡಿರುವ ಸಂಪೂರ್ಣ ಸಂವಿಧಾನವನ್ನು ರಚಿಸುವುದು ಅತ್ಯಗತ್ಯವಾಗಿತ್ತು.

ಸ್ವತಂತ್ರವಾದ ನಂತರ, ಆಗಸ್ಟ್ 29 ರಂದು, ಡಾ. ಬಿ.ಆರ್. ಅಂಬೇಡ್ಕರ್ ಅವರ ನೇತೃತ್ವದಲ್ಲಿ ಕರಡು ಸಮಿತಿಯನ್ನು ರಚಹಿಸಲಾಯಿತು. ಈ ಸಮಿತಿಯು ಸಂವಿಧಾನದ ಕರಡನ್ನು ಸಿದ್ಧಪಡಿಸಿ ವಿಧಾನಸಭೆಯಲ್ಲಿ ಮಂಡಿಸಿತು. ನಂತರ ಇದನ್ನು1949 ನವೆಂಬರ್ 26 ರಂದು ಅಂಗೀಕರಿಸಲಾಯಿತು ಮತ್ತು ಅನೇಕ ತಿದ್ದುಪಡಿಗಳ ನಂತರ, ಭಾರತದ ಸಂವಿಧಾನವು ಜನವರಿ 26, 1950 ರಂದು ಜಾರಿಗೆ ಬಂದಿತು.

ಭಾರತೀಯ ಕಾಂಗ್ರೆಸ್‌ ಪೂರ್ಣ ಸ್ವರಾಜ್ಯ ಅನ್ನು ತನ್ನ ಗುರಿಯಾಗಿಸಿಕೊಂಡಿತ್ತು.ಲಾಹೋರ್ ಕಾಂಗ್ರೆಸ್‌ ಈ ನಿರ್ಣಯವನ್ನು ಕೈಗೊಳ್ಳಲಾಯಿತು. ಆದ್ದರಿಂದ ಆ ದಿನವನ್ನು ಪೂರ್ಣ ಸ್ವರಾಜ್ಯ ದಿನ ಎಂದು ಕರೆದರು.

ಗಣರಾಜ್ಯೋತ್ಸವವು ಭಾರತದ ಸಂವಿಧಾನವು ಜಾರಿಗೆ ಬಂದ ದಿನದ ಸ್ಮರಣೆಯನ್ನು ಸೂಚಿಸುತ್ತದೆ. ಈ ದಿನದ ಮಹತ್ವವನ್ನು ನಿರ್ಲಕ್ಷಿಸಲಾಗುವುದಿಲ್ಲ ಏಕೆಂದರೆ ಇದು ಭಾರತ ಗಣರಾಜ್ಯವಾದ ದಿನವಾಗಿದೆ ಮತ್ತು ಸರ್ಕಾರವು ಜನರಿಂದ ಜನರಿಗಾಗಿಯೆ ಇದೆ. ಪ್ರತಿ ವರ್ಷ ಗಣರಾಜ್ಯೋತ್ಸವವನ್ನು ಆಚರಿಸುವುದು ಭಾರತದಲ್ಲಿ ಮತ್ತು ವಿದೇಶದಲ್ಲಿ ವಾಸಿಸುವವರಿಗೆ ಒಂದು ದೊಡ್ಡ ಗೌರವ ಮತ್ತು ಮಹತ್ವದ ದಿನ, ಈ ದಿನ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮತ್ತು ಭಾಗವಹಿಸುವ ಮೂಲಕ ಜನರು ಬಹಳ ಸಂತೋಷ ಮತ್ತು ಉತ್ಸಾಹದಿಂದ ಆಚರಿಸುತ್ತಾರೆ.

ಎಲ್ಲಾ ಸವಾಲುಗಳು ಮತ್ತು ಕಷ್ಟಗಳ ಹೊರತಾಗಿಯೂ, ನಮ್ಮ ಸಾಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಇದು ಎಲ್ಲರಿಗೂ ಸಂಪೂರ್ಣ ಸಮಾನತೆಯನ್ನು ಸೃಷ್ಟಿಸುವ ಗುರಿಯನ್ನು ಹೊಂದಿರುತ್ತದೆ. ಆದ್ದರಿಂದ ದೇಶದ ಎಲ್ಲಾ ಜನರು ತಮ್ಮ ಧರ್ಮಗಳು, ಸಂಸ್ಕೃತಿ, ಜಾತಿ, ಲಿಂಗ, ಪಂಗಡ ಮತ್ತು ಹೆಚ್ಚಿನವುಗಳಿಗೆ ಸಂಬಂಧಿಸಿದ ಸಮಾನ ಹಕ್ಕುಗಳನ್ನು ಹೊಂದಬಹುದು.

ಗಣರಾಜ್ಯೋತ್ಸವನ್ನು ನಮ್ಮ ರಾಷ್ಟ್ರದ ಕಡೆಗೆ ನಮ್ಮ ದೇಶಭಕ್ತಿಯನ್ನು ತೋರಿಸುವ ಏಕೈಕ ದಿನವಲ್ಲ ಬದಲಿಗೆ ಅದನ್ನು ನಮ್ಮ ದಿನಚರಿಯಲ್ಲಿ ಬರೆಯಬೇಕು. ನಾವು ನಮ್ಮ ಮೂಲಭೂತ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ನಮ್ಮ ದೇಶದ ಸಂವಿಧಾನವನ್ನು ಗೌರವಿಸಬೇಕು ಆಗ ಮಾತ್ರ ನಮ್ಮ ದೇಶವು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಸಹಾಯ ಮಾಡುತ್ತದೆ ಮತ್ತು ಎಲ್ಲರೂ ಸಮೃದ್ಧಿ, ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು ಸಾದ್ಯವಾಗುತ್ತದೆ. ಇದೆಲ್ಲ ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ನಿಜವಾಗಿ ಕೊಡುವ ಗೌರವವಾಗಿದೆ.

ಗಣರಾಜ್ಯೋತ್ಸವ ಮಹತ್ವ:

ಗಣರಾಜ್ಯೋತ್ಸವ ಭಾರತಕ್ಕೆ ಮಹತ್ವದ ದಿನವಾಗಿದೆ. ಇಂದಿಗೂ ಎಂದೆಂದಿಗೂ ಮರೆಯಲಾರದ ದಿನ, ಏಕೆಂದರೆ ನಮ್ಮ ಸಂವಿಧಾನ ರಚನೆಗೆ ಮೈಲುಗಲ್ಲಾದ ದಿನವಿದು. ಗಣರಾಜ್ಯೋತ್ಸವ ದಿನ ಸಾರ್ವಭೌಮತ್ವ ಮತ್ತು ಜಾತ್ಯತೀತ ಕೂಡಿದ ದೇಶವಾಯಿತು ನಮ್ಮ ದೇಶ, ನಮ್ಮ ಸಂವಿಧಾನದಲ್ಲಿ ಎಲ್ಲರಿಗೂ ಸಮಾನತೆಯನ್ನು ಸೂಚಿಸಲಾಗುತ್ತದೆ. ರಾಜ ಪ್ರಭುತ್ವವನ್ನು ತ್ಯಜಿಸಿ ಪ್ರಜಾಪ್ರಭುತ್ವದಲ್ಲಿ ಅಸ್ಥಿತ್ವವನ್ನು ಸ್ಥಪಿಸಿದ ದಿನವಾಗಿದೆ ಈ ಕಾರಣಕ್ಕೆ ಭಾರತೀಯರ ಪಾಲಿಗೆ ಈ ದಿನ ಅತ್ಯಂತ ಮಹತ್ವದ ದಿನವಾಗಿದೆ.

ಗಣರಾಜ್ಯೋತ್ಸವವನ್ನು ಹೇಗೆ ಆಚರಿಸಲಾಗುತ್ತದೆ:

ಗಣರಾಜ್ಯೋತ್ಸವದ ದಿನ ಅತ್ಯಂತ ಮಹತ್ವ ಮತ್ತು ಭವ್ಯವಾದ ಮೆರವಣಿಗೆ ನವದೆಹಲಿಯ ರಾಜಪಥದಲ್ಲಿ ನಡೆಸಲಾಗುತ್ತದೆ. ಈ ಮೆರವಣಿಗೆಯ ಅಧ್ಯಕ್ಷತೆಯನ್ನು ಭಾರತದ ರಾಷ್ಟ್ರಪತಿಗಳು ವಹಿಸುತ್ತಾರೆ. ಭಾರತದ ಪ್ರಧಾನಮಂತ್ರಿಯವರು ಮೊದಲು ಇಂಡಿಯಾ ಗೇಟ್‌ನಲ್ಲಿರುವ ಅಮರ್ ಜವಾನ್ ಜ್ಯೋತಿಗೆ ಮಾಲಾರ್ಪಣೆ ಮಾಡಿ, ನಂತರ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ ಅಥವಾ ತ್ಯೇಜಿಸಿದ ಮಿಲಿಟರಿಯ ಎಲ್ಲಾ ಸೈನಿಕರನ್ನು ಸ್ಮರಿಸಲಾಗುತ್ತದೆ. ನಂತರ, 21-ಗನ್ ಸೆಲ್ಯೂಟ್, ರಾಷ್ಟ್ರಧ್ವಜ ಹಾರಿಸಿ ರಾಷ್ಟ್ರಗೀತೆಯನ್ನು ಹಾಡಲಾಗುತ್ತದೆ.

ಶಾಲಾ ಕಾಲೇಜು ಮತ್ತು ಇತರ ಸರ್ಕಾರಿ ಸಂಸ್ಥೆಗಳಲ್ಲಿ, ಗಣರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹದಿಂದ ಮತ್ತು ಸಂಭ್ರಮದಿಂದ ಆಚರಿಸಲಾಗುತ್ತದೆ. ಶೈಕ್ಷಣಿಕ ಆವರಣವನ್ನು ರಿಬ್ಬನ್‌ಗಳು, ಧ್ವಜಗಳಿಂದ ಮತ್ತು ಹೂವುಹಳಿಂದ ಅಲಂಕರಿಸುವುದರಿಂದ ಹಿಡಿದು ಕಾರ್ಯಗಳು ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುವವರೆಗೆ, ಪ್ರತಿಯೊಬ್ಬರೂ ಈ ದಿನವನ್ನು ಹೆಮ್ಮೆ ಮತ್ತು ಗೌರವದಿಂದ ಆಚರಿಸುತ್ತಾರೆ. ಇದಲ್ಲದೆ, ಮಕ್ಕಳು ಮತ್ತು ಶಿಕ್ಷಕರು ಗಣ್ಯ ವ್ಯಕ್ತಿಗಳು ಗಣರಾಜ್ಯೋತ್ಸದ ಬಗ್ಗೆ ಒಳ್ಳೆಯ ಭಾಷಣಗಳನ್ನು ನೀಡುತ್ತಾರೆ ಮತ್ತುಇದರ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಬಂಧಗಳನ್ನು ಬರೆಯುತ್ತಾರೆ. ನ್ಯರ್ತ್ಯ ದೇಶಭಕ್ತಿ ಗೀತೆಗಳನ್ನು ಹಾಡಲಾಗುತ್ತದೆ. ಸಿಹಿ ಹಂಚುವುದು ಮತ್ತು ಒಳ್ಳೆಯ ಬೋಜನ ವ್ಯವಸ್ಥೆ ಮಾಡಿ ಆನಂದದಿಂದ ಆ ದಿನವನ್ನು ಕಳೆಯುತ್ತಾರೆ.

ಉಪ ಸಂಹಾರ:

ಭಾರತವನ್ನು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶವೆಂದು ಕರೆಯಲಾಗುತ್ತದೆ. ಗಣರಾಜ್ಯೋತ್ಸವ ದಿನವು ಪ್ರತಿಯೊಬ್ಬ ಭಾರತೀಯರ ಪಾಲಿಗೆ ದೊಡ್ಡ ಹಬ್ಬವಾಗಿದೆ. ಈ ದಿನದಂದು ಸಂವಿಧಾನಕ್ಕೆ, ಸ್ವಾತಂತ್ರ್ಯಕ್ಕೆ ಹೋರಾಡಿದ ಮಹಾನ್‌ ವ್ಯಕ್ತಿಗಳನ್ನು ಈ ದಿನದಂದು ನೆನೆಯಲಾಗುತ್ತದೆ. ನಾವೆಲ್ಲರೂ ಸ್ವತಂತ್ರರಾಗಿ ಜೀವಿಸಲು, ಶಿಕ್ಷಣ ಪಡೆಯಲು ಅವಕಾಶ ನೀಡಿರುವ ಇಂತಹ ಸಂವಿಧಾನವನ್ನು ದೇಶದಲ್ಲಿ ಜಾರಿಗೆ ತರಲು ಶ್ರಮಿಸಿದ ಎಲ್ಲರಿಗೂ ಇಂದು ನಾವೆಲ್ಲರೂ ತಲೆ ಭಾಗಿಸಿ ನಮಿಸೋಣ ಮತ್ತು ಅದು ನಮ್ಮೆಲ್ಲರ ಆದ್ಯ ಕರ್ತವ್ಯ. ಸಮಾನತೆ, ಸಹೋದರತ್ವ, ಏಕತೆ,ಸ್ವಾತಂತ್ರ್ಯ,ಭ್ರಾತೃತ್ವಭಾರತದ ಸಂವಿಧಾನದಲ್ಲಿ ಇರುವ ಐದು ಪ್ರಮುಖ ಮೌಲ್ಯಗಳಾಗಿವೆ. ಸಂವಿಧಾನ ಮೌಲ್ಯಗಳನ್ನು ಉಳಿಸಿ ಬೆಳೆಸಿಕೊಂಡು ಹೋಗೊಣ.

FAQ

1. ಗಣರಾಜ್ಯೋತ್ಸವ ದಿನವನ್ನು ಯಾವಾಗ ಆಚರಿಸುತ್ತೆವೆ.

ಜನವರಿ 26

2.ಭಾರತದ ಸಂವಿಧಾನದ ಕರಡು ಸಮಿತಿಯನ್ನು ರಚಸಿದವರಾರು?

ಡಾ. ಬಿ.ಆರ್. ಅಂಬೇಡ್ಕರ್

ಇತರೆ ವಿಷಯಗಳು

ಕರ್ನಾಟಕ ಏಕೀಕರಣ ಪ್ರಬಂಧ

ಕ್ರೀಡೆ ಮತ್ತು ನಮ್ಮ ಆರೋಗ್ಯ ಪ್ರಬಂಧ

ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ

Leave A Reply

Your email address will not be published.