ಇಡೀ ದಿನ 1 GB ಡಾಟಾ[DATA] ಖಾಲಿಯಾಗದಂತೆ ಬಳಸುವುದು ಹೇಗೆ? ಹಾಗಾದರೆ ಈ ಟ್ರಿಕ್ಸ್ ಟ್ರೈ ಮಾಡಿ
ನಮಸ್ಕಾರ ಸ್ನೇಹಿತರೆ, ಮೊಬೈಲ್ ಆಟ ಬೇಗ ಖಾಲಿಯಾಗದಂತೆ, ಇವತ್ತಿನ ಲೇಖನದಲ್ಲಿ ನಿಮಗೆ ದಿನಪೂರ್ತಿ ಡಾಟಾ ಬಳಸುವುದರ ಬಗ್ಗೆ ಸ್ವಲ್ಪ ಮಾಹಿತಿಯನ್ನು ತಿಳಿಸಲಾಗುತ್ತದೆ. ಇಂದಿನ ಯುಗದಲ್ಲಿ ಪ್ರತಿಯೊಬ್ಬರೂ ಸಹ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದು, ಅದರಲ್ಲಿ ಮೊಬೈಲ್ ಡಾಟಾವನ್ನು ಬಳಸುತ್ತಾರೆ. ಆದರೆ ಡಾಟಾವನ್ನು ಬಳಸುವಾಗ ಅರ್ಧ ದಿನದಲ್ಲಿಯೇ ಅರ್ಧದಾಟ ಖಾಲಿಯಾಗಿ ಬಿಡುತ್ತದೆ. ಹೀಗೆ ಸೆಟ್ಟಿಂಗ್ಸ್ ನಲ್ಲಿ ಮೊಬೈಲ್ ಡಾಟಾ ಬೇಗ ಖಾಲಿಯಾಗದ ರೀತಿಯಲ್ಲಿ ನೋಡಿಕೊಳ್ಳುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ತಿಳಿಸಿಕೊಡಲಾಗುತ್ತದೆ.
ಬೇಗ ಮೊಬೈಲ್ ಡಾಟಾ ಖಾಲಿಯಾಗದಂತೆ ಈ ರೀತಿಯ ಸೆಟ್ಟಿಂಗ್ಸ್ ಅನ್ನು ಮಾಡಿಕೊಳ್ಳಿ :
ಇಂದಿನ ಆಧುನಿಕ ಯುಗದಲ್ಲಿ ಎಲ್ಲರೂ ಸಹ ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿದ್ದು ಅದರಲ್ಲಿ ಒಂದು ಜಿಬಿ 2ಜಿಬಿ ಹಾಗೂ ಫೋರ್ ಜಿಬಿ ಎಂಬ ಮೊದಲಾದ ಡೇಟಾ ಪ್ಲಾನ್ ಗಳನ್ನು ನೋಡಬಹುದು. ಆದರೆ ಈ ಡೇಟಾವು 24 ಗಂಟೆಗಳ ವರೆಗೆ ಇರಲು ಸಾಧ್ಯವಿಲ್ಲ. ಆದ್ದರಿಂದ ಈ ಮೊಬೈಲ್ ಡೇಟಾ ಬೇಗ ಖಾಲಿಯಾಗದಂತೆ ಸೆಟ್ಟಿಂಗ್ಸ್ ನಲ್ಲಿ ಈ ರೀತಿ ಮಾಡಿ.
ಡೇಟಾ ಬಳಕೆಯನ್ನು ಅಪ್ಲಿಕೇಶನ್ ಗಳಿಗೆ ಮಿತಿಗೊಳಿಸುವುದು :
ಮೊಬೈಲ್ ಡಾಟಾ ಹೆಚ್ಚು ಉಪಯೋಗವಾದಂತೆ ಕೆಲವು ಅಪ್ಲಿಕೇಶನ್ಗಳ ಡೇಟ ಬಳಕೆಯನ್ನು ಮಿತಗೊಳಿಸುವುದು ಹೆಚ್ಚು ಮುಖ್ಯವಾಗಿರುತ್ತದೆ. ಇದರಿಂದ ದೀರ್ಘಕಾಲದ ವರೆಗೆ ಡೇಟಾವನ್ನು ಬ್ಯಾಕಪ್ ಮಾಡಲಾಗುತ್ತದೆ. ಡೇಟಾ ಬಳಕೆಯನ್ನು ಮಿತಿಗೊಳಿಸಲು ಅಪ್ಲಿಕೇಶನ್ ಗಳಿಗೆ ಈ ರೀತಿಯ ಹಂತಗಳನ್ನು ಅನುಸರಿಸಬೇಕು. ಆಂಡ್ರಾಯ್ಡ್ ಫೋನ್ಗಳಲ್ಲಿ ಸೆಟ್ಟಿಂಗ್ಸ್ ಗೆ ಹೋಗಿ ಅಪ್ಲಿಕೇಶನ್ಗಳನ್ನು ಓಪನ್ ಮಾಡಿ.
ಯಾವ ಅಪ್ಲಿಕೇಶನ್ ಡಾಟಾವನ್ನು ನೀವು ಮಿತಿಗೊಳಿಸಲು ಬಯಸುತ್ತೀರೋ ಅಪ್ಲಿಕೇಶನ್ ಅನ್ನು ಓಪನ್ ಮಾಡಿ. ನಂತರ ಮೊಬೈಲ್ ಡೇಟಾ ಮೇಲೆ ಕ್ಲಿಕ್ ಮಾಡಬೇಕು. ಬಿಳಿ ಮತ್ತು ನೀಲಿ ಟ್ಯಾಗ್ ಗಳು ಡಾಟಾ ಬಳಕೆಯನ್ನು ಅನುಮತಿಸು ಎಂಬ ಆಯ್ಕೆಯ ಮುಂದೆ ಗೋಚರಿಸುತ್ತವೆ. ನಂತರ ಅದರ ಮೇಲೆ ಕ್ಲಿಕ್ ಮಾಡಿ ಅದನ್ನು ಆಫ್ ಮಾಡಬೇಕು.
ಮೊಬೈಲ್ ನಲ್ಲಿ ಡಾಟಾ ಸೇವರ್ ಮೋಡನ್ನು ಆನ್ ಮಾಡಬೇಕು :
ದೀರ್ಘಕಾಲದವರಿಗೆ ನಿಮ್ಮ ಮೊಬೈಲ್ ಡಾಟಾವನ್ನು ಬಳಸಬೇಕಾದರೆ ಡೇಟಾ ಸೇವರ್ ಮೋಡನ್ನು ಆನ್ ಮಾಡಬೇಕು. ಅದು ಹೇಗೆಂದರೆ ಮೊಬೈಲ್ ಫೋನ್ನ ಸೆಟ್ಟಿಂಗ್ಸ್ ನಲ್ಲಿ ಕ್ಲಿಕ್ ಮಾಡಿ, ಡಾಟಾ ಬಳಕೆಯ ಮೇಲೆ ಕ್ಲಿಕ್ ಮಾಡ ಬೇಕು. ಅದರಲ್ಲಿ ಡಾಟಾ ಸೇವರ್ ಮೋಡನ್ನು ತೋರಿಸಲಾಗುತ್ತದೆ ಅದನ್ನು ಆನ್ ಮಾಡಬೇಕು. ಈ ಡಾಟಾ ಸೇವರ್ ಮೂಡನ್ನು ಆನ್ ಮಾಡಿದ ನಂತರ ನೀವು ಯಾವುದೇ ಅಪ್ಲಿಕೇಶನ್ಗಳ ಬ್ಯಾಗ್ರೌಂಡ್ ಡಾಟಾವನ್ನು ಬಳಸಬೇಕು ಹಾಗೂ ಬಳಸಬಾರದು ಎಂಬುದನ್ನ ಬಳಕೆದಾರರಿಂದ ನಿಯಂತ್ರಿಸಲು ಸಾಧ್ಯವಾಗುತ್ತದೆ.
ಆಟೋ ಅಪ್ಡೇಟ್ ಮೋಡನ್ನು ಆಫ್ ಮಾಡಬೇಕು :
ಮೊಬೈಲ್ ನಲ್ಲಿ ಆಪ್ಸ್ ಗಳ ಆಟೋ ಅಪ್ಡೇಟ್ ಆಗುವುದರಿಂದ ಮೊಬೈಲ್ ಡಾಟಾ ಬಹಳ ಬೇಗನೆ ಖಾಲಿಯಾಗುತ್ತದೆ. ಕೆಲವೊಂದು ಡೀಫಾಲ್ಟ್ ಸೆಟ್ಟಿಂಗ್ಸ್ ನಿಂದ ಸ್ವಯಂ ಚಾಲಿತವಾಗಿ ಅಪ್ಲಿಕೇಶನ್ಗಳು ಅಪ್ಡೇಟ್ ಆಗುತ್ತಿರುತ್ತವೆ. ಇದರಿಂದ ಯಾವುದೋ ಒಂದು ಆಪನ್ನು ಕೆಲವೊಮ್ಮೆ ಇನ್ಸ್ಟಾಲ್ ಮಾಡಿರುತ್ತೇವೆ. ಆದ್ದರಿಂದ ಮೊಬೈಲ್ ನಲ್ಲಿ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ, ಗೂಗಲ್ ಪ್ಲೇ ಸ್ಟೋರ್ ನ ಸೆಟ್ಟಿಂಗ್ಸ್ ನಲ್ಲಿ ಆಟೋ ಅಪ್ಡೇಟ್ ಅನ್ನು ಆಫ್ ಮಾಡಬೇಕು. ಇದರಿಂದ ಕಡಿಮೆ ಡೇಟ ವನ್ನು ಬಳಸಬಹುದು.
ಇದನ್ನು ಓದಿ : I Phone ಕಂಪನಿ ವರ್ಷಕ್ಕೆ ಎಷ್ಟು ಲಾಭ ಗಳಿಸುತ್ತದೆ ಎಂದು ಕೇಳಿದರೆ ನೀವು ಆಶ್ಚರ್ಯ ಪಡುತ್ತೀರ!
ವೈಫೈ ಸೆಟ್ಟಿಂಗ್ಸ್ :
ವೈಫೈ ಮೂಲಕ ನಿಮ್ಮ ಫೋನಿಲ್ ಫೋನಿನ ಆಪ್ ಗಳು ಅಪ್ಡೇಟ್ ಆಗುವಂತಹ ಸೆಟ್ಟಿಂಗ್ ಅನ್ನು ಮಾಡಿದ್ದರೆ ಅದರಿಂದ ನಿಮ್ಮ ಮೊಬೈಲ್‌ನ ಡೇಟಾವನ್ನು ಅಳತೆ ಮಾಡುವುದನ್ನು ಆದಷ್ಟು ನಿಯಂತ್ರಿಸಬಹುದು. ಡೇಟಾವನ್ನು ಯೂಟ್ಯೂಬ್ ನಲ್ಲಿ ಹೇಗೆ ಉಳಿಸಬಹುದು.
ಎಲ್ಲರೂ ಸಹ ದಿನದಲ್ಲಿ ಒಂದು ಬಾರಿಯಾದರೂ ಯೌಟ್ಯೂಬ್ ಆಪ್ ಅನ್ನು ನೋಡುತ್ತಾರೆ. ಆದ್ದರಿಂದ ಯೂಟ್ಯೂಬ್ ನಲ್ಲಿ ಸೆಟ್ಟಿಂಗ್ ಗೆ ಹೋಗಿ ಡೇಟಾ ಸೇವಿಂಗ್ ಮೋಡ್ ಎಂಬ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ಇದರಿಂದ 30% ರಷ್ಟು ಡೇಟಾವನ್ನು ನಾವು ಉಳಿಸಬಹುದು.
ಈ ಮೇಲಿನ ಎಲ್ಲಾ ಟ್ರಿಕ್ಸ್ ಗಳನ್ನು ಬಳಸಿಕೊಂಡು ನಮ್ಮ ಮೊಬೈಲ್ ಡೇಟಾವನ್ನು ದಿನಪೂರ್ತಿ ಬಳಸಲು ಸಹಕಾರಿಯಾಗುತ್ತದೆ. ಇದರಿಂದ ನಮ್ಮ ಮೊಬೈಲ್ ಡೇಟಾವು ಹೆಚ್ಚು ಬಳಕೆಯಾಗದಂತೆ ನೋಡಿಕೊಳ್ಳಬಹುದು, ಹಾಗೂ ಅಗತ್ಯ ಸಂದರ್ಭಗಳಲ್ಲಿ ಕೆಲವೊಂದು ಮಾಹಿತಿಗಳನ್ನು ಇಂಟರ್ನೆಟ್ ಮೂಲಕ ಬಹಳ ಬೇಗನೆ ತಿಳಿಯಲು ಅನುಕೂಲವಾಗುತ್ತದೆ. ಆದ್ದರಿಂದ ಈ ಕೂಡಲೇ ನೀವು ಸಹ ಸ್ಮಾರ್ಟ್ಫೋನ್ ಬಳಸುವಂತಹ.
ನಿಮ್ಮೆಲ್ಲಾ ಸ್ನೇಹಿತರಿಗೂ ಈ ಮಾಹಿತಿಯ ಬಗ್ಗೆ ಶೇರ್ ಮಾಡಿ. ಇದರಿಂದ ಅವರು ಸಹ ಕೆಲವೊಂದು ಅನುಕೂಲಗಳನ್ನು ಪಡೆಯಬಹುದು, ಧನ್ಯವಾದಗಳು.
ಇತರೆ ವಿಷಯಗಳು :
ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ, ಹಿರಿಯ ನಾಗರಿಕರಿಗೆ ಉಚಿತ 3000 ರೂಪಾಯಿಯ ಯೋಜನೆ
ಉಚಿತ ಸೈಕಲ್ ಯೋಜನೆ: ಕಾರ್ಮಿಕ ವರ್ಗದವರಿಗೆ ಹಾಗೂ ಈ ಕಾರ್ಡ್ ಇದ್ದವರಿಗೆ ಮಾತ್ರ ಇದರ ಲಾಭ ಸಿಗುತ್ತೆ!