ಗೃಹಲಕ್ಷ್ಮಿ ಯೋಜನೆಗೆ ನಾಳೆ ಅಧಿಕೃತ ಅರ್ಜಿ ಬಿಡುಗಡೆ | ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಎಲ್ಲಿ ಅರ್ಜಿ ಸಲ್ಲಿಸಬೇಕೆಂಬ ಮಾಹಿತಿ ಇಲ್ಲಿದೆ
ನಮಸ್ಕಾರ ಸ್ನೇಹಿತರೆ ಇಂದು ಗೃಹಲಕ್ಷ್ಮಿ ಯೋಜನೆ ಅಡಿ ಮಹಿಳೆಯರಿಗೆ 2,000 ಹಣವನ್ನು ನೇರವಾಗಿ ಅವರ ಖಾತೆಗೆ ಹಾಕುವ ಯೋಜನೆಯನ್ನು ರೂಪಿಸಿದ್ದು ಈ ಯೋಜನೆಗೆ ಸಂಬಂಧಿಸಿದೆ ಅರ್ಜಿ ಎಲ್ಲಿ ಡೌನ್ಲೋಡ್ ಮಾಡುವುದು ಹಾಗೂ ಅರ್ಜಿಯನ್ನು ಸಲ್ಲಿಸುವುದಿಲ್ಲ ಹಾಗೂ ಅರ್ಜಿಗೆ ಬೇಕಾಗುವ ದಾಖಲೆಗಳೇನು ಅರ್ಜಿ ಆನ್ಲೈನ್ ಮೂಲಕ ಸಲ್ಲಿಸಬೇಕಾ ಅಥವಾ ಆಫ್ಲೈನ್ ಮೂಲಕ ಸಲ್ಲಿಸಬೇಕಾ. ಅರ್ಜಿಯಲ್ಲಿ ಯಾವ ಹೆಸರು ನೋಂದಾಯಿಸಬೇಕು ತಾಯಿ ಇದ್ದ ಅಥವಾ ಸೊಸೆಯದ್ದ ಎಂಬ ಎಲ್ಲ ಗೊಂದಲಗಳಿಗೂ ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿ ದೊರೆಯಲಿದೆ.
ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಮಾಹಿತಿ
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬರುವುದಕ್ಕಿಂತ ಮುಂಚೆ ತನ್ನದೇ ಆದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತ್ತು ಆ ಪ್ರಣಾಳಿಕೆಯಲ್ಲಿ ಗೃಹಲಕ್ಷ್ಮಿ ಯೋಜನೆಯೂ ಸಹ ಒಂದಾಗಿತ್ತು. ಪ್ರತಿ ತಿಂಗಳು ಮಹಿಳೆಯರ 2000 ಖಾತೆಗೆ ನೇರವಾಗಿ ಹಾಕಲು ಹೇಳಿಕೆ ನೀಡಿದ್ದು. ಅದರಂತೆ ಅಧಿಕಾರ ವಹಿಸಿಕೊಂಡ ನಂತರ ಇದಕ್ಕೆ ಅನುಮೋದನೆ ನೀಡಿ ಅಧಿಕೃತ ಅರ್ಜಿ ಬಿಡುಗಡೆಗೆ ನಾಳೆ ಸಿದ್ಧತೆ ಮಾಡಿಕೊಂಡಿದೆ.
ಅರ್ಜಿ ಸಲ್ಲಿಸಲು ಆರಂಭದ ಹಾಗೂ ಕೊನೆಯ ದಿನಾಂಕ
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಜೂನ್ 15ರಿಂದ ಜುಲೈ 15 ರ ವರೆಗೂ ಸಹ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಲಿದೆ .ಅಧಿಕೃತವಾಗಿ ಗೃಹಲಕ್ಷ್ಮಿ ಯೋಜನೆಯಡಿ ಅರ್ಜಿ ಸಲ್ಲಿಸಲು ಜೂನ್ 15ರಂದು ಪ್ರಾರಂಭವಾಗುತ್ತದೆ .ಈ ಅರ್ಜಿ ಸಲ್ಲಿಸಲು ಕೆಲವು ದಾಖಲೆಗಳು ಹಾಗೂ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ಅವುಗಳನ್ನು ಈ ಕೆಳಕಂಡಂತೆ ತಿಳಿಯೋಣ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
ಗೃಹಲಕ್ಷ್ಮಿ ಯೋಜನೆ ಅಡಿ ಅರ್ಜಿ ಸಲ್ಲಿಸುವ ಮಹಿಳೆಯು ಈ ಕೆಳಕಂಡ ದಾಖಲೆಗಳನ್ನು ಹೊಂದಿರಬೇಕು ಅರ್ಜಿ ಸಲ್ಲಿಸುವ ಸಮಯದಲ್ಲಿ ಈ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗುವುದು ಹಾಗಾಗಿ ಈ ದಾಖಲೆಗಳು ನಿಮ್ಮ ಬಳಿಗೆ ಇರಲಿ.
- ಅರ್ಜಿ ಸಲ್ಲಿಸುವ ಗೃಹಿಣಿಯ ಆಧಾರ ಕಾರ್ಡ್.
- ಕುಟುಂಬದ ಬಿಪಿಎಲ್ ಮತ್ತು ಎಪಿಎಲ್ ಹೊಂದಿರಬೇಕು.
- ಅರ್ಜಿ ಸಲ್ಲಿಸುವವರ ಇತ್ತೀಚಿಗಿನ ಪಾಸ್ಪೋರ್ಟ್ ಗಾತ್ರದ ಫೋಟೋ.
- ಗೃಹಿಣೀಯ ಬ್ಯಾಂಕ್ ಖಾತೆ.
- ವೋಟರ್ ಐಡಿಯನ್ನು ಹೊಂದಿರಬೇಕು.
ಈ ಮೇಲ್ಕಂಡ ಎಲ್ಲ ದಾಖಲೆಗಳನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಬೇಕಾಗಬಹುದು ಹಾಗಾಗಿ ಒಮ್ಮೆ ಈ ದಾಖಲೆಗಳನ್ನು ನಿಮ್ಮ ಬಳಿ ಸುರಕ್ಷಿತವಾಗಿ ನಿಮ್ಮ ಬಳಿ ಇಟ್ಟುಕೊಂಡಿರಿ.
ಅರ್ಜಿ ಸಲ್ಲಿಸಲು ಯಾರು ಅರ್ಹತೆ ಹೊಂದಿರುತ್ತಾರೆ
ಅರ್ಜಿ ಸಲ್ಲಿಸಲು ಗೃಹಲಕ್ಷ್ಮಿ ಯೋಜನೆ ಅಡಿ ಕೆಲವೊಂದು ಮಾನದಂಡಗಳನ್ನು ರಾಜ್ಯ ಸರ್ಕಾರವು ನೀಡಿದೆ ಆ ಮಾನದಂಡಗಳ ಪ್ರಕಾರವೇ ಯೋಜನೆ ಉಪಯೋಗ ಪಡೆಯಲು ಸಾಧ್ಯವಾಗುತ್ತದೆ. ಈ ಗೃಹಲಕ್ಷ್ಮಿ ಯೋಜನೆ ಮಹಿಳೆಯರು ಅರ್ಜಿ ಸಲ್ಲಿಸುವ ಕಿಂತ ಮೊದಲು ನಿಮಗೆ ಆಫ್ಲೈನ್ ಅಲ್ಲಿ ಒಂದು ಫಾರಂ ದೊರೆಯುತ್ತದೆ. ಆ ಫಾರ್ಮ್ ಅನ್ನು ಭರ್ತಿ ಮಾಡಿ ಅಗತ್ಯ ದಾಖಲೆಗಳನ್ನು ಅದರಲ್ಲಿ ನೋಂದಾಯಿಸಬೇಕು ಜಾಗರೂಕತೆಯಿಂದ ಆ ಫಾರಂ ಅನ್ನು ಭರ್ತಿ ಮಾಡಬೇಕಾಗುತ್ತದೆ .
ಇದನ್ನು ಓದಿ : ಮಹಿಳೆಯರು ತಪ್ಪದೇ ನೋಡಿ, ಮಹಿಳಾ ಕಿಸಾನ್ ಸಮ್ಮಾನ್ ಜಾರಿ.!
ಆ ಫಾರ್ಮಿನಲ್ಲಿ ಒಂದಕ್ಕಿಂತ ಹೆಚ್ಚು ನಿಮ್ಮ ಮನೆಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದರು ಸಹ ಒಂದೇ ಕುಟುಂಬದಲ್ಲಿ ಇದ್ದರೂ ಕೂಡ ಗ್ರಹಣಿ ಯಾರೆಂದು ಅರ್ಜಿಯಲ್ಲಿ ನೀವೇ ನಮೂದಿಸಬೇಕಾಗುತ್ತದೆ .ಒಂದು ವೇಳೆ ನೀವು ಅರ್ಜಿಯಲ್ಲಿ ಕುಟುಂಬದವರು ಕುಟುಂಬದ ಒಡೆದು ಯಾರೆಂದು ತಿಳಿಸದಿದ್ದರೆ ನಿಮಗೆ ಸಿಗುವ ಹಣವು ಹಿಂದಿರುಗುತ್ತದೆ ಹಾಗಾಗಿ ಜಾಗರೂಕತೆಯಿಂದ ಅರ್ಜಿಯನ್ನು ಭರ್ತಿ ಮಾಡಿ.
ಮುಖ್ಯವಾಗಿ ಅರ್ಜಿ ಸಲ್ಲಿಸುವ ಗೃಹಣಿ ಬಿಪಿಎಲ್ ಕಾರ್ಡಿನಲ್ಲಿ ಮಹಿಳೆಯ ಹೆಸರು ಹಾಗೂ ಫೋಟೋ ಹೊಂದಿರಬೇಕು ಇಲ್ಲವಾದರೆ ಗೃಹಣಿ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.
ಅಧಿಕೃತ ಅರ್ಜಿ ಬಿಡುಗಡೆ ನಾಳೆ
ನಾಳೆ ಜೂನ್ 15 ಅಧಿಕೃತ ಅರ್ಜಿ ಸ್ವೀಕೃತ ಮಾಡುವುದಾಗಿ ಸರ್ಕಾರವು ತಿಳಿಸಿದ್ದು ಈಗ ಅಧಿಕೃತ ವೆಬ್ಸೈಟ್ ಹಾಗೂ ಅರ್ಜಿಯು ನಾಳೆ ತಿಳಿಯಲಿದ್ದು ಸೇವಾ ಸಿಂಧು ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ. ನಾಳೆಯಿಂದ ಅರ್ಜಿ ಸಲ್ಲಿಸಬಹುದು ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿ ಅರ್ಜಿ ಸಲ್ಲಿಸುವಾಗ ಮಾಹಿತಿಯನ್ನು ಸ್ಪಷ್ಟವಾಗಿ ಹಾಗೂ ಎಚ್ಚರಿಕೆಯಿಂದ ನೀಡಿ ಯೋಜನೆಯ ಉಪಯೋಗ ಪಡೆದುಕೊಳ್ಳಿ ಲೇಖನವನ್ನು ಪೂರ್ಣವಾಗಿ ಓದಿದ್ದಕ್ಕೆ ಧನ್ಯವಾದಗಳು.
ಇತರೆ ವಿಷಯಗಳು :
ಟ್ರ್ಯಾಕ್ಟರ್ ಟ್ರಾಲಿ ಯೋಜನೆ 90 %ಸಬ್ಸಿಡಿ ಆನ್ಲೈನಲ್ಲಿ ಅರ್ಜಿ ಸಲ್ಲಿಸಿ.
ಈ ಕಾರ್ಡ್ ತೋರಿಸಿ, ಉದ್ಯೋಗ ಸಿಗೋದು 100% ಗ್ಯಾರೆಂಟಿ! ಕಾರ್ಡ್‌ಗೆ ತಕ್ಷಣ ಅರ್ಜಿ ಸಲ್ಲಿಸಿ