ಕುವೆಂಪು ಅವರ ಬಗ್ಗೆ ಪ್ರಬಂಧ | Kuvempu Essay in Kannada
ಕುವೆಂಪು ಅವರ ಬಗ್ಗೆ ಪ್ರಬಂಧ, Kuvempu Essay in Kannada, Kuvempu Bagge Prabandha in kannada
ಕುವೆಂಪು ಅವರ ಬಗ್ಗೆ ಪ್ರಬಂಧ
ಹಲೋ ನನ್ನ ಪ್ರೀತಿಯ ಬಂದುಗಳೇ ನಾನು ನಿಮಗೆಲ್ಲಾಈ ಪ್ರಬಂಧದಲ್ಲಿ ಕುವೆಂಪು ಅವರ ಬಗ್ಗೆ ತಿಳಿಸಿಕೊಡುತ್ತಿದ್ದೆನೆ. ಕುವೆಂಪು ಸಾದನೆ ಕೊಡುಗೆ ಅಪಾರ ಆದ್ದರಿಂದ ಅವರ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಈ ಪ್ರಬಂಧದಲ್ಲಿ ಕುವೆಂಪು ಕುಟುಂಬ, ವೈಯಕ್ತಿಕ ಜೀವನ, ಶಿಕ್ಷಣ, ವೃತ್ತಿ ಜೀವನ ಮತ್ತು ಬರಹ ಮುಂತಾದುವುಗಳ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದ್ದೆವೆ. ಆದ್ದರಿಂದ ಈ ಪ್ರಬಂಧವನ್ನು ಸಂಪೂರ್ಣವಾಗಿ ಓದಿ.
ಪೀಠಿಕೆ
ಕುವೆಂಪು ಕನ್ನಡದ ಶ್ರೇಷ್ಠ ಕವಿ ಮತ್ತು ಸಾಹಿತ್ಯಕಾರ. ಇವರು ಕಾದಂಬರಿ, ನಾಟಕ, ವಿಮರ್ಶೆ, ಚಿಂತನೆ, ಮುಂತಾದವುಗಳನ್ನು ರಚಿಸಿ 1958 ರಲ್ಲಿ ‘ರಾಷ್ಟ್ರಕವಿ‘ ಎಂದು ಬಿರುದು ಪಡೆದವರು, ಮತ್ತು 1992 ರಲ್ಲಿ ‘ಕರ್ನಾಟಕ ರತ್ನ’ ಎಂಬ ಬಿರುದನ್ನು ಪಡೆದರು. ಅವರು ಕರ್ನಾಟಕ ರಾಜ್ಯ ಗೀತೆ ಅಥವಾ ರಾಷ್ಟ್ರಗೀತೆ ‘ಜಯ ಭಾರತ ಜನನಿಯ ತನುಜಾತೆ’ ಅನ್ನು ನಿರ್ಮಿಸಿದರು, ರಾಷ್ಟ್ರಗೀತೆ ರಚನೆಗೆ ಪದ್ಮವಿಭೂಷಣ ಪಡೆದರು. ಇವರು 20 ನೇ ಶತಮಾನದ ಅತ್ಯುತ್ತಮ ಕನ್ನಡ ಕವಿ ಎಂದು ಪ್ರಸಿದ್ಧರಾಗಿದ್ದರು ಸಾರ್ವತ್ರಿಕ ಮಾನವತಾವಾದ’ ಅಥವಾ ‘ವಿಶ್ವ ಮಾನವತಾ ವಾದ’ಕ್ಕೆ ಕೊಡುಗೆ ನೀಡಿದರು. ಇವರನ್ನು ರಾಷ್ಟ್ರಕವಿ ಎಂದು ಕರೆಯಲಾಗುತ್ತದೆ.
ಕುವೆಂಪು ಕುಟುಂಬ ವೈಯಕ್ತಿಕ ಜೀವನ:
ಕುವೆಂಪು ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ,ಇವರು 1904 ಡಿಸೆಂಬರ್ 29 ರಂದು ತಾಯಿಯ ತವರೂರಾದ ಚಿಕ್ಕಮಂಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಹಿರೇಕೊಡಿನಲ್ಲಿ ಜನಿಸಿದರು.ಇವರ ತಂದೆಯ ಊರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳ್ಳಿ ಇವರ ಬಾಲ್ಯ ಜೀವನವನ್ನುಕುಪ್ಪಳ್ಳಿಯಲ್ಲಿ ಕಳೆದರು. ಅವರ ತಂದೆಯ ಹೆಸರು ವೆಂಕಟಪ್ಪ ಮತ್ತು ತಾಯಿಯ ಹೆಸರು ಸೀತಮ್ಮ. ಕುವೆಂಪು ತಮ್ಮ12ನೇ ವರ್ಷದಲ್ಲಿದ್ದಾಗ ತಂದೆಯನ್ನು ಕಳೆದುಕೊಂಡರು. ಕುವೆಂಪು 1937 ಏಪ್ರಿಲ್ 30ರಂದು ‘ಹೇಮಾವತಿ’ ಎಂಬ ಯುವತಿಯನ್ನು ವಿವಾಹವಾದರು ಮತ್ತು ವೈವಾಹಿಕ ಜೀವನಕ್ಕೆ ಪ್ರವೇಶಿಸಿದರು. ಮಕ್ಕಳ ಹೆಸರು ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ, ಇಂದುಕಲ, ತಾರಿಣಿ.
ಕುವೆಂಪು ಶಿಕ್ಷಣ ಮತ್ತು ವೃತ್ತಿ ಜೀವನ:
ಕುವೆಂಪುರವರು ಅವರ ಆರಂಭಿಕ ವಿದ್ಯಾಭ್ಯಾಸವನ್ನು ಕೂಲಿಮಠದಲ್ಲಿ ಆಯಿತು. ಮಾಧ್ಯಮಿಕ ಶಿಕ್ಷಣ ತೀರ್ಥಹಳ್ಳಿಯಲ್ಲಿ ಆಯಿತು. ಮುಂದಿನ ಶಿಕ್ಷಣವನ್ನು ಮೈಸೂರಿನಲ್ಲಿ ಮುಂದುವರೆಸಿದರು. ನಂತರ ಮೈಸೂರು ಮಹಾರಾಜ ಕಾಲೇಜಿನಲ್ಲಿ ಬಿ.ಎ ಪದವಿ ಕನ್ನಡದಲ್ಲಿ ಎಂ.ಎ ಪದವಿ ಪಡೆದರು.
ಕುವೆಂಪು ಅವರ ಶೈಕ್ಷಣಿಕ ವೃತ್ತಿ ಜೀವನವನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಭಾಷೆಯ ಉಪನ್ಯಾಸಕರಾಗಿ ಪ್ರಾರಂಭಿಸಿದರು.ಇದರ ನಡುವೆ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. 1946 ರಲ್ಲಿ, ಅವರು ಮತ್ತೆ ಮಹಾರಾಜ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿದರು. ಕೊನೆಯದಾಗಿ ಮಹಾರಾಜ ಕಾಲೇಜಿಗೆ ಮುಖ್ಯಸ್ಥರಾದರು,1956 ರಲ್ಲಿಮೈಸೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದರು. 1960 ರಲ್ಲಿ ನಿವೃತ್ತರಾದರು. ಇವರು ತಮ್ಮ ವೃತ್ತಿ ಜೀವನವನ್ನು ನಿವೃತ್ತರಾಗುವವರೆಗು ಸೇವೆ ಸಲ್ಲಿಸಿದರು. ಇವರು ಮೊದಲು ʼಬಿಗಿನರ್ಸ್ ಮ್ಯೂಸ್ʼ ಇಂಗ್ಲಿಷ್ ಕೃತಿ ರಚಿಸಿದರು.
ಕುವೆಂಪು ಬರಹಗಳು ಮತ್ತು ಕೃತಿಗಳು :
ಕುವೆಂಪು ಬರಹಗಳು ಅವರ ನಂಬಿಕೆಯನ್ನು ಪ್ರತಿಬಿಂಬವಾಗಿದೆ. ಅವರ ಮೊದಲ ಕವನಸಂಕಲನವನ್ನು 1930 ರಲ್ಲಿ ಪರಿಚಯಿಸಲಾಯಿತು. ಕುವೆಂಪು ಅವರ ಪ್ರಮುಖ ಕೃತಿಗಳಲ್ಲಿ ಒಂದು ಶ್ರೀ ರಾಮಾಯಣ ದರ್ಶನಂ. ಇದು ವಾಸ್ತವವಾಗಿ ಮೂಲ ತುಣುಕಿನ ಮರು-ಬರೆಹವಾಗಿದೆ, ಇದನ್ನ ವಿಭಿನ್ನ ದೃಷ್ಟಿಕೋನದಿಂದ ತರಲಾಗಿದೆ. ಈ ಕೃತಿ ಇವರಿಗೆ 1968 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು, ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟಿದೆ. ಕುವೆಂಪು ಅವರು ತಮ್ಮ ಮಾತುಗಳ ಮೂಲಕ ತಮ್ಮ ದೃಷ್ಟಿಯನ್ನು ಇತರರಿಗೆ ನೋಡುವಂತೆ ಮಾಡುವ ಪ್ರತಿಭಾನ್ವಿತ ಕೌಶಲ್ಯವನ್ನು ಹೊಂದಿದ್ದರು.
ಕುವೆಂಪು ಅವರ ಮಹತ್ವ:
ಕುವೆಂಪುರವರು ತಮ್ಮ ಕವಿತೆಗಳು, ನಾಟಕಗಳು, ಪ್ರಬಂಧ ಮತ್ತು ಕೃತಿಗಳಿಂದ ಅನೇಕ ರೀತಿಯಲ್ಲಿ ಸಮಾಜಕ್ಕೆ ಗಮನಾರ್ಹ ವ್ಯಕ್ತಿಯಾಗಿದ್ದಾರೆ. ಅವರು ಅಂದು ಮಾಡಿದ ಒಂದು ಭಾಷಣ ಇಂದಿಗೂ ಆಧುನಿಕ ಸಮಾಜವನ್ನು ಪ್ರತಿಧ್ವನಿಸುತ್ತದೆ. 1974ರಲ್ಲಿ ನಡೆದ ಬೆಂಗಳೂರು ವಿಶ್ವವಿದ್ಯಾಲ ಘಟಿಕೋತ್ಸವ ಸಮಾರಂಭದಲ್ಲಿ ಕುವೆಂಪು ಭಾಷಣ ಮಾಡಿದ್ದರು,ಅವರ ಸಂದೇಶದಿಂದಾಗಿ ಆ ಭಾಷಣವನ್ನು ನಂತರ ಪುಸ್ತಕದಲ್ಲಿ ಪ್ರಕಟವಾಯಿತು.
ಕುವೆಂಪು ಅಭಿವೃದ್ಧಿ ನೀತಿಗಳ ಮತ್ತು ಮರು ಮೌಲ್ಯಮಾಪನಕ್ಕೆ ಕರೆ ನೀಡಿದರು. ಆ ಭಾಷಣ ಮತ್ತು ಕುವೆಂಪು ಅವರ ಇತರ ಸಾಧನೆಗಳಿಂದಾಗಿ, ಅವರ ಹೆಸರಿನ ವಿಶ್ವವಿದ್ಯಾಲಯವನ್ನು ಹೊಂದಿದ್ದಾರೆ. ಕರ್ನಾಟಕ ಸರ್ಕಾರವು 1987 ರಲ್ಲಿ ಕುವೆಂಪು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿತು. 1994 ನವೆಂಬರ್ 11 ರಲ್ಲಿ ನಿಧನರಾದರು ಅವರ ಮರಣದ ಏಳು ವರ್ಷಗಳ ಮೊದಲು. ವಿಶ್ವವಿದ್ಯಾನಿಲಯವು ಕುವೆಂಪು ಕಾರ್ಯಗಳನ್ನು ಮತ್ತು ಅವರು ಸಮಾಜಕ್ಕೆ ಮಾಡಿದ ಪ್ರಯೋಜನಗಳನ್ನು ನಿರಂತರವಾಗಿ ನೆನಪಿಸುತ್ತದೆ. ಅವರ ಸಂದೇಶಗಳು ದೇಶದಾದ್ಯಂತ ಇಂದಿಗು ಪ್ರತಿಧ್ವನಿಸುತ್ತಿವೆ.
ಕುವೆಂಪು ಕವನಗಳು, ಕಾದಂಬರಿಗಳು ಮತ್ತು ಕೃತಿ:
- ಕೊಳಲು
- ಪಾಂಚಜನ್ಯ
- ಪ್ರೇಮಕಾಶ್ಮೀರ
- ಪಕ್ಷಿಕಾಶಿ
- ನವಿಲು
- ಕಲಾಸುಂದರಿ
- ಅನಿಕೇತನ
- ಜೇನಾಗುವ ಇನ್ನೂ ಮುಂತಾದವು
ಕಾನೂರು ಹೆಗ್ಗಡತಿ (1936), ಮಲೆಗಳಲ್ಲಿ ಮದುಮಗಳು(1967) ಇದೆರಡು ಕುವೆಂಪು ಪ್ರಮುಖ ಕಾದಂಬರಿಗಳು. ಅಮಲನ ಕಥೆ ಇದು ಅವರ ಮೊದಲ ಕೃತಿ.
ಕುವೆಂಪು ಆತ್ಮಕಥನ ಮತ್ತು ನಾಟಕಗಳು:
ನೆನಪಿನ ದೋಣಿಯಲ್ಲಿ ಪ್ರಮುಖ ಆತ್ಮಕಥನ ಮತ್ತು ಇನ್ನೂ ಮುಂತಾದುವುಗಳನ್ನು ರಚಿಸಿದ್ದರೆ.
- ಯಮನ ಸೋಲು
- ಜಲಗಾರ
- ಬಿರುಗಾಳಿ
- ಮಹಾರಾತ್ರಿ
- ರಕ್ತಾಕ್ಷಿ
- ಬಲಿದಾನ
- ಕಾನೀನ ಇನ್ನೂ ಮುಂತಾದವು
ಕುವೆಂಪು ಪಡೆದ ಪ್ರಶಸ್ತಿಗಳು:
- 1964ರಲ್ಲಿ ರಾಷ್ಟ್ರಕವಿ
- 1988ರಲ್ಲಿ ಪಂಪ ಪ್ರಶಸ್ತಿ
- 1991ರಲ್ಲಿ ಪದ್ಮವಿಭೂಷಣ ಪ್ರಶಸ್ತಿ
- 1992 ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ
ಅಲ್ಲದೆ ಮೈಸೂರು, ಕರ್ನಾಟಕ ಬೆಂಗಳೂರು ಮತ್ತು ಗುಲ್ಬರ್ಗ ವಿಶ್ವವಿದ್ಯಾನಿಲಯದಲ್ಲಿ ಗೌರವ ಡಾಕ್ಟರೇಟ್ ಸಲ್ಲಿದೆ.
ಉಪಸಂಹಾರ:
ಕುಪ್ಪಳಿ ವೆಂಕಟಪ್ಪ ಪುಟಪ್ಪ ಅವರು ದೊಡ್ಡ ಕಲ್ಲಿನ ಮೇಲೆ ಕುಳಿತು ಸಾಹಿತ್ಯ ಬರೆಯುತ್ತಿದ್ದಾರೆ ಎಂದು ಹೆಳಲಾಗುತ್ತದೆ. ಇವರ ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟಪ್ಪ ಆದರು ಸಾಹಿತ್ಯ ಕ್ಷೇತ್ರದಲ್ಲಿ ‘ಕುವೆಂಪು’ ಎಂಬ ಉಪನಾಮದಿಂದ ಗುರುತಿಸಿಕೊಂಡವರು. ಸಾಹಿತ್ಯ ಕ್ಷೆತ್ರದಲ್ಲಿ ಇವರ ಸಾಧನೆ ಅಪಾರವಾಗಿದೆ. ಇವರ ಬರೆದ ಎಲ್ಲಾ ಬರಹಗಳು ಇಂದಿಗು ಪ್ರಸಿದ್ದವಾಗಿವೆ. ಓದುಗರ ಮನಮುಟ್ಟುವಂತಿವೆ.
FAQ
1. ಕುವೆಂಪು ಪೂರ್ಣ ಹೆಸರೇನು?
ಕುವೆಂಪು ಪೂರ್ಣ ಹೆಸರು ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ.
2. ಕುವೆಂಪು ಯಾವಾಗ ‘ರಾಷ್ಟ್ರಕವಿʼ ಬಿರುದು ಪಡೆದರು?
ಕುವೆಂಪು 1958 ರಲ್ಲಿ ‘ರಾಷ್ಟ್ರಕವಿ’ ಬಿರುದು ಪಡೆದರು.
3. ಕುವೆಂಪುರವರಿಗೆ ಯಾವ ಕೃತಿ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟಿತು?
ʼಶ್ರೀ ರಾಮಾಯಣ ದರ್ಶನಂʼ ಕುವೆಂಪುರವರಿಗೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟಿತು.
ಇತರೆ ವಿಷಯಗಳು
ಕ್ರೀಡೆ ಮತ್ತು ನಮ್ಮ ಆರೋಗ್ಯ ಪ್ರಬಂಧ
ತ್ಯಾಜ್ಯ ವಸ್ತುಗಳ ನಿರ್ವಹಣೆ ಬಗ್ಗೆ ಪ್ರಬಂಧ