ನಿಮ್ಮ ಮೊಬೈಲ್ ಹೆಚ್ಚು ಬಿಸಿಯಾಗದಂತೆ ಈ ವಿಧಾನವನ್ನು ಬಳಸಿ : ಇದರಿಂದ ನಿಮ್ಮ ಮೊಬೈಲ್ ಬಿಸಿಯಾಗುವುದು ಕಡಿಮೆಯಾಗುತ್ತದೆ

0

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಹೆಚ್ಚಿನ ಜನರು ಇಂದು ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಿರುತ್ತಾರೆ. ಅದರಲ್ಲಿಯೂ ಸಹ ಸ್ಮಾರ್ಟ್ ಫೋನ್ ಗಳಲ್ಲಿ ದಿನವಿಡೀ ಸಮಯವನ್ನು ಯುವ ಪೀಳಿಗೆಗೆ ಇತ್ತೀಚಿನ ದಿನಗಳಲ್ಲಿ ಕಳೆಯುತ್ತಿರುತ್ತಾರೆ. ಇದರಿಂದ ಹೆಚ್ಚು ಉಪಯೋಗಿಸಿದಾಗ ಸ್ಮಾರ್ಟ್ ಫೋನನ್ನು ಬಿಸಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಬಿಸಿಯಾಗುವುದನ್ನು ತಡೆಯಬೇಕಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.

Mobile heating is reduced
Mobile heating is reduced

ಮೊಬೈಲ್ ಓವರ್ ಹೀಟ್ ಆಗುವುದಂತೆ ತಡೆಯುವುದು :

ಯುವ ಪೀಳಿಗೆಯ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳನ್ನು ಹೆಚ್ಚಾಗಿ ಬಳಸುತ್ತಿದ್ದು ,ದಿನವಿಡೀ ಮೊಬೈಲ್ ನಲ್ಲಿ ಮುಳುಗಿರುತ್ತಾರೆ. ಇದರಿಂದ ಕಾರ್ಯಕ್ಷಮತೆಯ ನಷ್ಟ, ಬ್ಯಾಟರಿ ಸೋರಿಕೆಯಂತಹ ಹಲವಾರು ಸಮಸ್ಯೆಗಳು ಉಂಟಾಗುತ್ತವೆ. ಹೀಗೆ ಫೋನ್ ಬಿಸಿಯಾಗದಂತೆ ತಡೆಯಲು ಕೆಲವೊಂದು ಸಲಹೆಗಳನ್ನು ನೋಡಬಹುದು.

ಕಾರಿನ ಒಳಭಾಗ :

ಸೂರ್ಯನ ಬೆಳಕಿನಂದಾಗಿ ಬೇಸಿಗೆ ದಿನದಲ್ಲಿ ನಿಮ್ಮ ಕಾರುಗಳ ಒಳಗೆ ಕಿಟಕಿಗಳ ಮೂಲಕ ಶಾಖ ಒಳಗೆ ಬರುವುದರಿಂದ ನಿಮ್ಮ ಕಾರು ಹಸಿರು ಮನೆಯಾಗಿ ಕಾರ್ಯನಿರ್ವಹಿಸುತ್ತದೆ ಅಂದರೆ ನಿಮ್ಮ ಕಾರಿನ ಒಳಭಾಗವು ಹೊರಬಾಗಕ್ಕಿಂತ ಹೆಚ್ಚು ತಾಪಮಾನವನ್ನು ಹೊಂದಿರುತ್ತದೆ. ಬಿಸಿಲಿರುವ ಪ್ರದೇಶದಲ್ಲಿ ನಿಲ್ಲಿಸಿದಂತಹ ವಾಹನಗಳ ಒಳಭಾಗವು ಕೇವಲ ಎರಡು ಗಂಟೆಗಳಲ್ಲಿಯೇ ಹೆಚ್ಚು ಅಪಾಯಕಾರಿ ಮಟ್ಟಕ್ಕೆ ಬಿಸಿಯಾಗುತ್ತದೆ ಇಂತಹ ಸಮಯದಲ್ಲಿ ನಿಮ್ಮ ಮೊಬೈಲ್ ಗಳನ್ನು ಆ ಭಾಗದಲ್ಲಿ ಇಡುವುದು ಬಹಳ ಅಪಾಯಕಾರಿಯಾಗಿದೆ ಎಂದು ಟೆಂಪರೇಚರ್ ಜನರಲ್ ನಲ್ಲಿ ಪ್ರಕಟವಾದ ಒಂದು ಪತ್ರಿಕೆಯಲ್ಲಿ ತಿಳಿಸಲಾಗಿದೆ.

ಕಾರ್ ಆಫ್ ಆಗಿರುವಾಗ ಮತ್ತು ಹವಾ ನಿಯಂತ್ರಣ ಇಲ್ಲದಿರುವಾಗ :

ನಿಮ್ಮ ಕಾರಿನಲ್ಲಿ ನೀವು ಮೊಬೈಲ್ ಫೋನನ್ನು ಕಾರ್ ಆಫ್ ಆಗಿರುವಾಗ ಮತ್ತು ಹವ ನಿಯಂತ್ರಣದಲ್ಲಿ ಇಲ್ಲದಿರುವಾಗ ಬಿಟ್ಟು ಹೋಗದಂತೆ ಎಚ್ಚರ ವಹಿಸುವುದು ತುಂಬಾ ಮುಖ್ಯವಾಗಿದೆ. ಸೂರ್ಯನ ಬೆಳಕಿಗೆ ನಿಮ್ಮ ಮೊಬೈಲ್ ಫೋನ್ ತನ್ನ ದೀರ್ಘ ಕಾಲದ ತನಕ ಬಿಡುವುದನ್ನು ತಪ್ಪಿಸಬೇಕು. ಹೀಗೆ ಸೂರ್ಯನ ಬೆಳಕಿಗೆ ದೀರ್ಘಕಾಲದ ವರೆಗೆ ಬಿಟ್ಟರೆ ನಿಮ್ಮ ಮೊಬೈಲ್ ಹೆಚ್ಚು ಬಿಸಿಯಾಗುವ ಸಾಧ್ಯತೆ ಇರುತ್ತದೆ.

ಇದನ್ನು ಓದಿ :ಗ್ಯಾಸ್ ಸಿಲಿಂಡರ್, ಬ್ಯಾಂಕ್, ಪೆಟ್ರೋಲ್, ಡೀಸೆಲ್ ಸೇರಿದಂತೆ ಕೆಲವು ನಿಯಮಗಳಲ್ಲಿ ಭಾರಿ ಬದಲಾವಣೆ! ಈ ಹೊಸ ನಿಯಮ ಏನು ಗೊತ್ತಾ?

ನೇರ ಸೂರ್ಯನ ಬೆಳಕು ಹೆಚ್ಚಿರುವಲ್ಲಿ :

ಫೋನ್ ಚಾರ್ಜ್ ಮಾಡಲು ನೇರ ಸೂರ್ಯನ ಬೆಳಕು ಇರುವಲ್ಲಿ ಬಿಟ್ಟರೆ ನಿಮ್ಮ ಮೊಬೈಲ್ ಇನ್ನಷ್ಟು ಹಾಳಾಗಬಹುದು. ಹಾಗಾಗಿ ನಿಮ್ಮ ಮೊಬೈಲ್ ಫೋನನ್ನು ಚಾರ್ಜಿಂಗ್ ಮತ್ತು ಸೂರ್ಯನ ಬೆಳಕಿನಿಂದ ಉಂಟಾಗುವ ಸಂಯೋಜಿತ ಶಾಖವು ಫೋನ್ ಗಳಲ್ಲಿರುವ ಒಳಭಾಗಗಳಿಗೆ ಧೀರ್ಘಕಾಲೀನವಾಗಿ ಗಂಭೀರವಾದ ಹಾನಿಯನ್ನು ಉಂಟು ಮಾಡಬಹುದು.

ಹೀಗೆ ತಮ್ಮ ಮೊಬೈಲ್ ಗಳನ್ನು ಹೆಚ್ಚು ಬಳಸುವುದರಿಂದ ಮೊಬೈಲ್ ಬಿಸಿಯಾಗುತ್ತದೆ ಹಾಗೂ ಮೇಲಿನಂತೆ ತಿಳಿಸಿದಂತೆ ಮಾಡಿದರೆ ಆಗಲು ಸಹ ನಿಮ್ಮ ಮೊಬೈಲ್ ಬಿಸಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ಮೇಲೆ ಸೂಚಿಸಿದ ಸಲಹೆಗಳಂತೆ ನಿಮ್ಮ ಮೊಬೈಲ್ ಫೋನ್ ಗಳನ್ನು ನೀವು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು. ಈ ಮಾಹಿತಿಯನ್ನು ನಿಮ್ಮ ಸ್ನೇಹಿತರಲ್ಲಿ ಯಾರು ಹೆಚ್ಚು ಸ್ಮಾರ್ಟ್ ಫೋನ್ ಗಳನ್ನು ಬಳಸುತ್ತಾರೋ ಅವರಿಗೆ ಶೇರ್ ಮಾಡಿ ಧನ್ಯವಾದಗಳು.

ಇತರೆ ವಿಷಯಗಳು :

ಕೇಂದ್ರ ಸರ್ಕಾರದ ಹೊಸ ಯೋಜನೆಯಿಂದ ಮನೆ ಮನೆಗೂ LPG ಉಚಿತ ಗ್ಯಾಸ್

ಮಹಿಂದ್ರ ಕಂಪನಿಯಿಂದ 5 ಡೋರ್ ಖರೀದಿಸಲು ಕಾಯುತ್ತಿದ್ದ ಜನರಿಗೆ ಬೇಸರದ ಸುದ್ದಿ

Leave A Reply

Your email address will not be published.